ಮನೆ ಮನೆಗೆ ಹೋಗಿ ಹಾಲು ಮಾರುತ್ತಿದ್ದ ಹುಡುಗ ಕನ್ನಡ ಸಿನಿಮಾದ ಡಿಬಾಸ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ.? ಡಿಬಾಸ್ ಅವರ ಜೀವನದ ರೋಚಕ ಸ್ಟೋರಿ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಸಿನೆಮಾ ರಂಗದಲ್ಲಿ ದೊಡ್ಡ ಸ್ಟಾರ್ ನಟರ ಮಕ್ಕಳಾದರೇ ನಾನು ಕೂಡ ದೊಡ್ಡ ಸ್ಟಾರ್ ನಟನಾಗುತ್ತೇನೆ ಎಂಬ ನಂಬಿಕೆ ಅಕ್ಷರಸಹ ಸುಳ್ಳು ಯಾಕೆಂದರೆ ಅದಕ್ಕೆ ದೊಡ್ಡ ಉದಾಹರಣೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಅವರ ತಂದೆ ಅಂದಿನ ಸಿನೆಮಾಗಳಲ್ಲಿ ವಿಲನ್ ಪಾತ್ರಗಳನ್ನು ಮಾಡಿ ಸಾಕಷ್ಟು ಹೆಸರು ಮಾಡಿಕೊಂಡಿದ್ದರು. ತಂದೆಯ ಹೆಸರು ಹೇಳಿಕೊಂಡು ಬಂದವರಲ್ಲ ದರ್ಶನ್ ಬದಲಾಗಿ ಸಿನೆಮಾಕ್ಷೇತ್ರದಲ್ಲಿ ಸರ್ವೇ ಸಮಾನ್ಯನಾಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದರೆ.

ಸಿನೆಮಾಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿಯುವುದು ಅಷ್ಟು ಸುಲಭದ ಮಾತಲ್ಲ ಸಿನೆಮಾ ಲೋಕವೆಂದರೆ ಬಣ್ಣಗಳಿಂದ ಕೂಡಿರುತ್ತದೆ ಎಂದೇ ಭಾವಿಸಿರುತ್ತೇವೆ. ಹೀಗಾಗಿ ಅನೇಕರು ಕನಸು ಕಟ್ಟಿಕೊಂಡು ಬಂದಿರುತ್ತಾರೆ ಸ್ಟಾರ್ ನಟರಾಗಿ ಬೆಳೆಯಬೇಕು ಎಂಬ ಬಂದವರು ಎಲ್ಲರೂ ಕೂಡ ಯಶಸ್ಸು ಕಾಣುವುದಿಲ್ಲ. ಅವಕಾಶಗಳ ಜೊತೆಗೆ ಅದೃಷ್ಟ ಕೂಡ ಕೈ ಹಿಡಿದರೆ ನೇಮ ಹಾಗೂ ಫೇಮ್ ಎರಡು ಕೂಡ ಒಲಿದು ಬರುತ್ತದೆ.

ಸಿನೆಮಾರಂಗದಲ್ಲಿ ಒಬ್ಬ ಸೆಲೆಬ್ರೇಟಿಯಾದ ಮೇಲೆ ಗಾಸಿಪ್ ಗಳು ಮಾತಿಗೆ ಗುರಿಯಾಗೋದು ಪಕ್ಕ. ಸಿನೆಮಾರಂಗದಲ್ಲಿ ಏಳು ಬಿಳು ಎಲ್ಲಾ ಕಾಮನ್. ಇನ್ನು ನಮ್ಮ ಕನ್ನಡ ಸಿನೆಮಾರಂಗದತ್ತ ಕಣ್ಣು ಹಾಯಿಸಿದರೆ ಸಾಕಷ್ಟು ನಟ ನಟಿಯರು ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ.

ಆದರೆ ಇಂದು ಸೆಲೆಬ್ರಿಟಿಗಳಾಗಿರುವ ಅನೇಕ ನಟ ನಟಿಯರ ಆರಂಭದ ಬದುಕು, ಅವರು ನೊಂದ ಕಷ್ಟಗಳ ಬಗ್ಗೆ ಯಾರು ಕೂಡ ಗಮನ ಹರಿಸುವುದಿಲ್ಲ. ನಮ್ಮ ಸ್ಯಾಂಡಲ್ವುಡ್ ನ ಸ್ಟಾರ್ ನಟನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಷ್ಟದ ಬದುಕಿನ ಬಗ್ಗೆ ಯಾರಿಗೂ ತಿಳಿದಿಲ್ಲ. ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಸಿನೆಮಾದಲ್ಲಿ ಸಕ್ರಿಯವಾಗಿದ್ದರು. ಹೀಗಾಗಿ ಮಗನಿಗೂ ಕೂಡ ಸುಲಭವಾಗಿ ಸಿನೆಮಾಕ್ಷೇತ್ರದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡ್ಡಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದಾರೆ.

ಆದರೆ ಅಸಲಿ ಕಥೆನೆ ಬೇರೆ ಅಭಿಮಾನಿಗಳ ಪ್ರೀತಿಯ ಯಜಮಾನ ಬದುಕನ್ನು ಕಟ್ಟಿಕೊಂಡಿರೋದು ತಮ್ಮ ಪರಿಶ್ರಮದಿಂದಲೇ ಎನ್ನುದನ್ನು ನಾವು ಒಪ್ಪಿಕೊಳ್ಳಲೇಬೇಕು. ಹಾಗಾದರೆ ದರ್ಶನ್ ಅವರ ಸಿನಿ ಬದುಕಿನಲ್ಲಿ ನಡೆದ ಕುತೂಹಲಕಾರಿ ಘಟನೆ ಒಮ್ಮೆ ಓದಿ ನೋಡಿ. ಹೌದು ಕನ್ನಡ ಸಿನೆಮಾರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂಬ ಖ್ಯಾತಿ ಗಳಿಸಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ ಎನ್ನುವುದು ಗೊತ್ತಿರುವ ವಿಷಯ. ಬಾಕ್ಸ್ಆಫೀಸ್ ಸುಲ್ತಾನ್, ದಾಸ, ಬಾಸ್, ಯಜಮಾನ ಎಂದು ಹಲವು ನಾಮಕರಣಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ರ ಹಿರಿಯ ಪುತ್ರ 1977 ಫೆಬ್ರವರಿ 16 ರಂದು ಶಿವರಾತ್ರಿಯ ದಿನದಂದು ಮದ್ಯಾಹ್ನ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು. ಇವರ ಹುಟ್ಟು ಹೆಸರು ಹೇಮಂತ್ ಕುಮಾರ್.

ಸಿನೆಮಾಕ್ಷೇತ್ರದಲ್ಲಿ ಸಕ್ರಿಯಾರಾಗಿದ್ದ ಅವರ ತಂದೆ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದರು. ಗಂಡನ ಚಿಕಿತ್ಸೆಗಾಗಿ ಮನೆಯೊಂದನ್ನು ಬಿಟ್ಟು ತಮ್ಮ ಎಲ್ಲಾ ಹಣವನ್ನು ವ್ಯಯಿಸಿದರು. ನಂತರ ದಿನನಿತ್ಯದ ಊಟಕ್ಕೂ ಪರದಾಡುವ ಪರಿಸ್ಥಿತಿ ಅವರಿಗೆ ಎದುರಾಯಿತು. ಆ ಸಮಯದಲ್ಲಿ ಜೇ. ಎಸ್. ಎಸ್ ಆಸ್ಪತ್ರೆ ಅವರಿಗೆ ಆರ್ಥಿಕವಾಗಿ ಸಹಾಯಕ್ಕೆ ಮುಂದಾಗಿತ್ತು. ಕೊನೆಗೆ ದರ್ಶನ್ ಅವರ ತಾಯಿಯವರೇ ಪತಿಗೆ ಕಿಡ್ನಿ ನೀಡಿದರು.

ಶಿವಮೊಗ್ಗದಲ್ಲಿದ್ದಾಗ ದರ್ಶನ್ ಅವರ ತಂದೆ 52ನೇ ವಯಸ್ಸಿಗೆ ಹೃದಯದಘಾತದಿಂದ ಇಹಲೋಕ ತ್ಯಜಿಸಿದರು. ಪತಿಯ ಅಗಲಿಕೆಯ ಬಳಿಕ ಜೀವನವನ್ನು ಸಾಗಿಸಲು ಮೀನಾರವರು ಕೆಲ ಸಮಯ “ಊಟದ ಮೆಸ್ ಅನ್ನು ನೆಡೆಸಿದರೆ’ ಇನ್ನು ದರ್ಶನ್ ಅವರು ಒಂದು ಹಸು ಸಾಕಿ ಹಾಲು ಮಾರುತ್ತಿದ್ದರು. ತಂದೆಯ ಆರೋಗ್ಯದಲ್ಲಿ ಹದಗೆಟ್ಟ ಸಮಯದಲ್ಲಿ ಜೇ ಎಸ್ ಎಸ್ ಪಾಲಿಟೇಕ್ನಿಕಲ್ ಡಿಪ್ಲೋಮಾವನ್ನು ಓಡುತ್ತಿದ್ದ ದರ್ಶನ್ ಅದನ್ನು ಅರ್ಧಕ್ಕೆ ನಿಲ್ಲಿಸಿ ಶಿವಮೊಗ್ಗ ಖ್ಯಾತ ರಂಗತಂಡ ನೀನಾಸಂ ಗೆ ಸೇರಿ ಅಭಿನಯ ತರಬೇತಿಯನ್ನು ಪಡೆಯಲು ಪ್ರಾರಂಭಿಸಿದರು.

ಇನ್ನು ತನ್ನ ಮಗ ದರ್ಶನ್ ಸಿನೆಮಾರಂಗಕ್ಕೆ ಹೋಗುವುದು ತಂದೆಗೆ ಸ್ವಲ್ಪ ಕೂಡ ಇಷ್ಟವಿರಲಿಲ್ಲ. ಆದರೂ ಹಠ ಮಾಡಿ ತಾಯಿಯ ಪ್ರೋತ್ಸಾಹದಿಂದ ‘ನೀನಾಸಂ ತಂಡ ಸೇರಿದರು. ಅಲ್ಲಿ ಇವರಿಗೆ ಮೊದಲು ರಂಗಪ್ರವೇಶಕ್ಕೆ ಸ್ವಾಗತ ಕೋರಿದವರು ಮಂಡ್ಯ ರಮೇಶ್. ಇದಕ್ಕೂ ಮೊದಲೇ ಮೈಸೂರಿನ ಜಗನಮೋಹನ ಪ್ಯಾಲೇಸ್ ನಲ್ಲಿ ನಾಲ್ಕೈದು ಬಾರಿ ಮಾಡಾಲಿಂಗ್ ಕೂಡ ಮಾಡಿದ್ದರು.

ನೀನಾಸಂ ನಲ್ಲಿ ತರಬೇತಿಯ ನಂತರ ಅಭಿನಯದ ಅವಕಾಶಗಳನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದರು. ದರ್ಶನ್ ಅಂದುಕೊಂಡಂತೆ ಏನು ಆಗಲೇ ಇಲ್ಲ. ಕೊನೆಗೆ ಲೈಟ್ ಬಾಯ್ ಆಗಿ ಸಿನೆಮಾ ಇಂಡಸ್ಟ್ರಿಯಲ್ಲಿ ಪಯಣ ಪ್ರಾರಂಭಿಸಿದರು. ಅಲ್ಲಿ ಹಲವು ಅವಮಾನಗಳನ್ನು ಎದುರಿಸಿದರು. ಆ ಸಮಯದಲ್ಲಿ ಅಣಜಿ ನಾಗರಾಜರ ಪರಿಚಯವಾಯಿತು. ಅಣಜಿಯವರು ಖ್ಯಾತ ಸಿನೆಮಾ ಫೋಟೋಗ್ರಾಪರ್ ಇವರು ಬಿ.ಸಿ ಗೌರಿಶಂಕರ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಇನ್ನು ದರ್ಶನ್ ಕೂಡ ಗೌರಿಶಂಕರ್ ಅವರ ಸಹಾಯಕರಾಗಿ ಅಸಿಸ್ಟೆಂಟ್ ಕ್ಯಾಮರಾಮೆನ್ ಆಗಿ ಕೆಲಸಕ್ಕೆ ಸೇರಿಕೊಂಡರು. 1997 ರಲ್ಲಿ ಎಸ್ ನಾರಾಯಣ್ ಅವರು ತಮ್ಮ ‘ಮಹಾಭಾರತ’ ಸಿನೆಮಾದಲ್ಲಿ ಅವಕಾಶ ಕೊಟ್ಟರು ನಂತರ ಡಿಟೇಕ್ಟಿವ್ ‘ಚಂದ್ರಕಾಂತ’ ಎಂಬ ಕಿರುತೆರೆ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಹಾಗೆಯೇ ಮೂರು ಕರ್ಟುನ್ಗಳಲ್ಲಿ ಕೆಲವು ಪಾತ್ರಗಳಿಗೆ ತಮ್ಮ ಧ್ವನಿ ನೀಡಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಕೆಲಸ ಮಾಡಿದರು.

ಒಟ್ಟಿನಲ್ಲಿ ದರ್ಶನ್ ಒಂದು ತಮಿಳು ಮತ್ತು ಐದು ಕನ್ನಡ ಸಿನೆಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. 2002 ರಲ್ಲಿ ಪಿ.ಎನ್ ಸತ್ಯ ನಿರ್ದೇಶನದ “ಮೆಜೆಸ್ಟಿಕ್” ಚಿತ್ರದ ಮೂಲಕ ನಾಯಕನಾಗಿ ಬೆಳ್ಳೆ ತೆರೆಯಲ್ಲಿ ಕಾಣಿಸಿಕೊಂಡರು.

ಅದಾದ ನಂತರ ಸಾಕಷ್ಟು ಸೂಪರ್ ಹಿಟ್ ಸಿನೆಮಾಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದರು. ಇನ್ನು 2003 ರಲ್ಲಿ ಧರ್ಮಸ್ಥಳದಲ್ಲಿ ವಿಜಯಲಕ್ಷ್ಮಿ ಅವರನ್ನು ಮದುವೆಯಾದರು. ಈ ದಂಪತಿಗಳಿಗೆ ವಿನೀಶ್ ಎಂಬ ಮುದ್ದಾದ ಮಗನಿದ್ದಾನೆ. ಸದ್ಯಕ್ಕೆ ಕೋಟ್ಯಂತರ ಅಭಿಮಾನಿಗಳ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಬಾಸ್ “ಕ್ರಾಂತಿ” ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *