ಮರಣ ಹೊಂದಿರುವ ಶೇನ್ ವಾರ್ನ್ ರವರ ರೂಮಿಗೆ ಹೋದಾಗ ಥಾಯ್ಲೆಂಡ್ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ..!?

News

ಇಡೀ ವಿಶ್ವದಲ್ಲಿ ಅತ್ಯಂತ ಜನಪ್ರಿಯವಾಗಿರುವ ಎರಡು ಕ್ಷೇತ್ರಗಳೆಂದರೆ ಒಂದು ಮನರಂಜನೆ ಕ್ಷೇತ್ರ ಅಂದರೆ ಸಿನಿಮಾ ಕ್ಷೇತ್ರ. ಅದು ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕ್ಷೇತ್ರವೆಂದರೆ ಅದು ಕ್ರೀಡಾಕ್ಷೇತ್ರ. ಕ್ರೀಡಾ ಕ್ಷೇತ್ರಗಳಲ್ಲಿ ನಾವು ಬರುವುದಾದರೆ ಫುಟ್ಬಾಲ್ ಬಿಟ್ಟರೆ ವಿಶ್ವದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕ್ರೀಡೆ ಎಂದರೆ ಅದು ಕ್ರಿಕೆಟ್. ಕ್ರಿಕೆಟನ್ನು ಕಂಡುಹಿಡಿದಿದ್ದು ಆಂಗ್ಲರು. ಇನ್ನು ಈ ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಬ್ಬ ವ್ಯಕ್ತಿಯ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಆಸ್ಟ್ರೇಲಿಯ ಮೂಲದ ಲೆಜೆಂಡರಿ ಸ್ಪಿನ್ ಬೌಲರ್ ಆಗಿರುವ ಶೇನ್ ವಾರ್ನ್ ರವರ ಕುರಿತಂತೆ.
ವಿಶ್ವಕ್ರಿಕೆಟ್ ಜಗತ್ತಿನ ಲೆಜೆಂಡರಿ ಸ್ಪಿನ್ ಮಾಂತ್ರಿಕ ನಾಗಿರುವ ಶೇನ್ ವಾರ್ನ್ ರವರು 52ನೇ ವಯಸ್ಸಿಗೆ ಹೃದಯಾಘಾತದಿಂದಾಗಿ ಮರಣವನ್ನು ಹೊಂದಿದ್ದಾರೆ. ಕೋಚ್ ಕಾಮೆಂಟೇಟರ್ ಆಗಿ ನಿವೃತ್ತಿ ನಂತರ ಜೀವನದಲ್ಲಿ ಸಕ್ರಿಯರಾಗಿದ್ದ ಶೇನ್ ವಾರ್ನ್ ಅವರು. ಶೇನ್ ವಾರ್ನ್ ರವರ ಮರಣದಿಂದಾಗಿ ಕ್ರಿಕೆಟ್ ಜಗತ್ತಿಗೆ ಕರಗಿಸಲು ಆಗದಂತಹ ದುಃಖವು ಕೂಡ ಒದಗಿಬಂದಿದೆ. ನಿಜಕ್ಕೂ ಕೂಡ ಅವರ ಮರಣದಿಂದಾಗಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಯಾಕೆಂದರೆ ಅಷ್ಟೊಂದು ಆರೋಗ್ಯವಾಗಿದ್ದ ಶೇನ್ ವಾರ್ನ್ ಹೇಗೆ ಸಡನ್ನಾಗಿ ಮರಣ ಹೊಂದಲು ಸಾಧ್ಯ ಎಂಬುದಾಗಿ. ಈ ಕುರಿತಂತೆ ಶೇನ್ ವಾರ್ನ್ ರವರ ಮರಣದ ಕುರಿತಂತೆ ಎಲ್ಲರೂ ಅನುಮಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಲೆಜೆಂಡರಿ ಸ್ಪಿನ್ ಬೌಲರ್ ಆಗಿರುವ ಶೇನ್ ವಾರ್ನ್ ರವರು ಮರಣ ಹೊಂದಿರುವುದು ಥೈಲ್ಯಾಂಡ್ ನಲ್ಲಿ. ಥೈಲ್ಯಾಂಡ್ ನಲ್ಲಿ ಶೇನ್ ವಾರ್ನ್ ರವರು ಮರಣ ಹೊಂದಿದ ನಂತರ ಅವರ ಮರಣದ ಕುರಿತಂತೆ ಅಲ್ಲಿನ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ. ಅಲ್ಲಿ ಅವರಿಗೆ ದೊರೆತಿರುವ ಅಂತಹ ವಿಚಾರಗಳನ್ನು ನಾವು ಇಂದಿನ ಲೇಖನಿಯಲ್ಲಿ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹೌದು ತನಿಖೆಯಲ್ಲಿ ಥೈಲ್ಯಾಂಡ್ ಪೊಲೀಸರಿಗೆ ಅವರ ಕೋಣೆಯಲ್ಲಿ ಅವರು ಬಳಸುತ್ತಿದ್ದ ಅಂತಹ ಟವೆಲ್ ನಲ್ಲಿ ರಕ್ತದ ಕಣಗಳು ಸಿಕ್ಕಿವೆ ಎಂಬುದಾಗಿ ತಿಳಿದುಬಂದಿದೆ. ಇದು ಇನ್ನಷ್ಟು ಕುತೂಹಲವನ್ನು ಮೂಡಿಸುವಂತಹ ವಿಚಾರವಾಗಿದ್ದು ಇದು ಅವರ ಮರಣಕ್ಕೆ ಸಂಬಂಧವಿರಬಹುದು ಆಗಿದೆ ಎಂಬುದನ್ನು ಊಹಿಸಲಾಗಿದೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ತಿಂಗಳು ಮೂರನೇ ತಾರೀಕಿನಂದು ಥಾಯ್ಲ್ಯಾಂಡ್ ನಲ್ಲಿ ಲೆಜೆಂಡರಿ ಸ್ಪಿನ್ ಬೌಲರ್ ಶೇನ್ ವಾರ್ನ್ ಹೃದಯಾಘಾತದಿಂದ ಸ್ಥಳದಲ್ಲೇ ಮರಣವನ್ನು ಹೊಂದಿದ್ದರು. ಇದೇ ಕಾರಣದಿಂದಾಗಿ ತನಿಖೆಯನ್ನು ಚುರುಕುಗೊಳಿಸಿದ್ದು ಸೈಲೆಂಟ್ ಪೊಲೀಸರಿಗೆ ಅವರ ಟವೆಲ್ ನಲ್ಲಿ ರಕ್ತದ ಕಣಗಳು ಸಿಕ್ಕಿರುವುದು ಅನುಮಾನವನ್ನು ಇನ್ನಷ್ಟು ಹೆಚ್ಚಾಗಿ ಮೂಡಿಸುವಂತೆ ಮಾಡಿದೆ. ಇದರ ಸುಳಿವು ನಿಂದಾಗಿ ಶೇನ್ ವಾರ್ನ್ ರವರ ಮರಣದ ಸುತ್ತ ಹಲವಾರು ಊಹಾಪೋಹಗಳು ಸೃಷ್ಟಿಯಾಗಲು ಕಾರಣವಾಗಿದೆ.
ಮೂರನೇ ತಾರೀಕಿನಂದು ಶೇನ್ ವಾರ್ನ್ ರವರಿಗೆ ಹೃದಯಾಘಾತವಾದ ಸಂದರ್ಭದಲ್ಲಿ ಕೂಡಲೇ ಆಸ್ಪತ್ರೆಗೆ ಕೂಡ ದಾಖಲಿಸಲಾಗಿತ್ತು ಎಂಬುದು ವರದಿಗಳ ಮೂಲಕ ತಿಳಿದು ಬಂದಿದೆ. ಇಷ್ಟು ಮಾತ್ರವಲ್ಲದೆ ಸಾಕಷ್ಟು ಸತತವಾದ ಪ್ರಯತ್ನದ ನಂತರವೂ ಕೂಡ ಶೇನ್ ವಾರ್ನ್ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂಬುದನ್ನು ಸ್ವತಃ ವೈದ್ಯರೇ ಬಹಿರಂಗವಾಗಿ ತಿಳಿಸಿದ್ದಾರೆ. ವಿಚಾರ ಇಷ್ಟಕ್ಕೆ ನಿಲ್ಲದೆ ಇದೇ ವಿಚಾರದ ಕುರಿತಂತೆ ತನಿಖೆಯನ್ನು ನಡೆಸುತ್ತಿರುವ ಥಾಯ್ಲ್ಯಾಂಡ್ ಪೊಲೀಸರು ಕೂಡ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ.
ಶೇನ್ ವಾರ್ನ್ ರವರ ರೂಮಿನಲ್ಲಿ ಸಿಕ್ಕಿರುವಂತಹ ಟವೆಲ್ ನಲ್ಲಿ ರಕ್ತದ ಕಲೆಗಳ ಕುರಿತಂತೆ ಮಾತನಾಡುತ್ತಾ ಪೊಲೀಸರು ಇದು ಅವರಿಗೆ ಹೃದಯಾಘಾತ ಆಗುವ ಸಂದರ್ಭದಲ್ಲಿ ಬಾಯಿಯಿಂದ ಕೆಮ್ಮಿದಾಗ ಹೊರ ಬಂದಿರುವಂತಹ ರಕ್ತದ ಕಲೆ ಆಗಿರಬಹುದು ಎನ್ನುವುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ ಕ್ರಿಕೆಟ್ ಜಗತ್ತು ಒಬ್ಬ ದಂತ ಕಥೆಯನ್ನು ಕಳೆದುಕೊಂಡಿದ್ದಂತೂ ನಿಜ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದಿಂದ ನಿವೃತ್ತಿ ಹೊಂದಿದ ಮೇಲೆ ಐಪಿಎಲ್ ನಲ್ಲಿ ರಾಜಸ್ಥಾನ ತಂಡದ ಕೋಚ್ ಆಗಿ ಕಾಮೆಂಟೇಟರ್ ಒಬ್ಬ ಬಿಸಿನೆಸ್ ಮ್ಯಾನ್ ಆಗಿ ಸರ್ವತೋಮುಖ ರೀತಿಯಲ್ಲಿ ಕೂಡ ತಮ್ಮನ್ನು ತಾವು ಸಾಬೀತುಪಡಿಸಿ ಕೊಂಡಿದ್ದರು. ಖಂಡಿತವಾಗಿ ಅವರ ಸ್ಥಾನವನ್ನು ತುಂಬಬಲ್ಲ ಅಂತಹ ಇನ್ನೊಬ್ಬರ ಆಟಗಾರನನ್ನು ಅಪೇಕ್ಷಿಸುವುದು ಸಾಧ್ಯವಿಲ್ಲ.
ಹಾಗೆ ಸ್ನೇಹಿತರೆ ಶೇನ್ ವಾರ್ನ್ ಅವರ ಸ್ಪಿನ್ ನಲ್ಲಿ ವಿಶ್ವದ ಶ್ರೇಷ್ಠ ಆಟಗಾರರು ನಡುಗಿ ಹೋಗಿದ್ದಾರೆ ಆದರೆ ನಮ್ಮ ಭಾರತದ ಶ್ರೇಷ್ಠ ಆಟಗಾರ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿಗೆ ದೇವರು ಎನಿಸಿಕೊಂಡ ಅವರಿಗೆ ಮಾತ್ರ ಶೇನ್ ವಾರ್ನ್ ಬೌಲಿಂಗ್ ಮಾಡುವಾಗ ನಡುಗುತ್ತಿದ್ದರು ಹಾಗೆ ಅವರ ಕನಸಿನಲ್ಲಿ ಕೂಡ ಸಚಿನ್ ತೆಂಡೂಲ್ಕರ್ ಬೆನ್ನಟ್ಟಿದರೆ ಮಾಹಿತಿ ಕೂಡ ನಿಮಗೆಲ್ಲರಿಗೂ ಗೊತ್ತೇ ಇದೆ ಏನೇ ಇರಲಿ ಇಂತಹ ಒಬ್ಬ ಅದ್ಭುತ ಆಟಗಾರ ನನ್ನ ಕಳೆದುಕೊಂಡಿರುವುದು ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಕಹಿಘಟನೆ ನಾವೆಲ್ಲರೂ ಕೂಡ ಅವರ ಆತ್ಮಕ್ಕೆ ಶಾಂತಿ ಕೋರೋಣ ಅವರ ಕುಟುಂಬ ಕೂಡ ದೇವರು ಅವರ ಸಾವಿನ ನೋವನ್ನು ತಡೆಯಲು ಶಕ್ತಿ ಕೊಡಲಿ ಎಂದು ಕೇಳಿಕೊಳ್ಳೋಣ ಮೊನ್ನೆ ನಡೆದ ಟೆಸ್ಟ್ನಲ್ಲಿ ಕೂಡ ನಮ್ಮ ಭಾರತ ಆಟಗಾರರು ಶೇನ್ ವಾರ್ನ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಒಂದು ದಿನದ ಆಟದಲ್ಲಿ ತಂಡದ ಎಲ್ಲಾ ಆಟಗಾರರು ತಮ್ಮ ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ ಏನೇ ಆಗಲಿ ಸ್ನೇಹಿತರೆ ಇದೊಂದು ಅದ್ಭುತ ಆಟಗಾರರನ್ನು ಕಳೆದುಕೊಂಡ ನಾವು ಹಾಗೂ ಕ್ರಿಕೆಟ್ ಪ್ರೇಮಿಗಳಾದ ನೀವು ಆ ದೇವರು ಆ ನೋವನ್ನು ಮರೆಯಲು ಶಕ್ತಿ ಕೊಡಲಿ ಎಂದು ಆಶಿಸುತ್ತೇವೆ ಯಾರೇ ಆಗಲಿ ಸ್ನೇಹಿತರೆ ಇಂದು ನೋಡಿದ ಮನುಷ್ಯ ನಾಳೆ ಇರುತ್ತಾನೆಂದು ನಂಬಿಕೆ ಖಂಡಿತ ಸುಳ್ಳು ಇರುವಷ್ಟು ದಿನ ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ಚೆನ್ನಾಗಿರೋಣ ಧನ್ಯವಾದಗಳು


Leave a Reply

Your email address will not be published. Required fields are marked *