ಮಾತಿನ ಮಲ್ಲಿ ವಂಶಿಕಾ ಬಗ್ಗೆ ಕೇಳಿಬಂದ ನೆಗೆಟಿವ್ ಕಮೆಂಟ್ಸ್ ಗಳ ಬಗ್ಗೆ ತಂದೆ ಮಾಸ್ಟರ್ ಆನಂದ್ ಅವರು ಹೇಳಿದ್ದೇನು ನೋಡಿ..

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೇ ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪುಟ್ಟ ಮಕ್ಕಳು ಮತ್ತು ಅವರ ತಾಯಂದಿರಿಗಾಗಿ ಶುರುವಾಗಿದ್ದ ವಿಶೇಷವಾದ ರಿಯಾಲಿಟಿ ಶೋ ನಮ್ಮಮ್ಮ ಸೂಪರ್ ಸ್ಟಾರ್. ಈ ಶೋ ಇಂದ ಬಹಳ ಫೇಮಸ್ ಆದ ಸ್ಪರ್ದಿ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾ. ಮೊದಲೇ ನಿಮಗೆ ಗೊತ್ತಿರುವಂತೆ ನಿರೂಪಕ ಮಾಸ್ಟರ್ ಆನಂದ್ ದಂಪತಿಗಳ ಮುದ್ದು ಮಗಳು ವಂಶಿಕಾ ತುಂಬಾ ತರ್ಲೆ, ತುಂಟಾಟ ಹಾಗೂ ತನ್ನ ಮುದ್ದು ಮುದ್ದಾದ ಮಾತಿನಿಂದಲೇ ವೀಕ್ಷಕರನ್ನು ಸೆಳೆದಿದ್ದಾಳೆ.

ಪುಟ್ಟ ವಂಶಿಕಾಳ ಚಟ ಪಟ ಪತಿಗೆ ಫಿದಾ ಆಗದೇ ಇರುವವರು ಯಾರು ಇಲ್ಲ. ಬರೇ ಮುದ್ದು ಮಾತಿನಿಂದಲೇ ವಂಶಿಕಾ ಫೇಮಸ್ ಆಗಿಲ್ಲ, ಇಷ್ಟು ಚಿಕ್ಕ ವಯಸ್ಸಿಗೆ ವಂಶಿಕಾ ನಲ್ಲಿ ಅಪ್ಪನ ಹಾಗೆ ತುಂಬಾ ಟ್ಯಾಲೆಂಟ್ ಇದೇ. ಅವಳಿಗೆ ಕೊಡುವ ಉದುದ್ದ ಡೈಲಾಗ್ ಎಲ್ಲಾ ನೆನಪಿನಲ್ಲಿ ಇಟ್ಟುಕೊಂಡು ಪಟಾಕಿ ಹೊಡೆದಂತೆ ಡೈಲಾಗ್ ಗಳನ್ನು ಹೇಳುತ್ತಾಳೆ. ಅವಳ ಎಂತಹ ದೊಡ್ಡ ಸ್ಟಾರ್ ನಟರಿದ್ದರು ಅವರ ಎದುರಿಗೆ ನಿಸ್ಸಂಕೋಚವಿಲ್ಲದೆ ಅಭಿನಯ ಮಾಡುತ್ತಲೇ.

ಇನ್ನೂ ನಮ್ಮಮ್ಮ ಸೂಪರ್ ಸ್ಟಾರ್ ಶೋ ಮುಗಿದ ಮೇಲೆ ಬೇಬಿ ವಂಶಿಕಾ ಗಿಚ್ಚಿ ಗಿಲಿ ಗಿಲಿ ಶೋಗೆ ಬಂದು, ಈ ಶೋ ಮೂಲಕ ಇನ್ನಷ್ಟು ತನ್ನ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದ್ದಾಳೆ. ಬೇಬಿ ವಂಶಿಕಾ ರನ್ನು ನೋಡಿ ಇಷ್ಟಪಟ್ಟ ಅವಳದ್ದೇ ಆದ ಅಭಿಮಾನಿಗಳ ಜನರು ಕೂಡ ಇದ್ದಾರೆ. ಗಿಚ್ಚಿ ಗಿಲಿ ಗಿಲಿ ದೊಡ್ಡವರ ಶೋ ಅಲ್ಲಿಗೆ ಯಾಕೆ ನಿಮ್ಮ ಮಗಳನ್ನು ಕಳುಹಿಸಿದ್ದೀರಿ, ನಿಮ್ಮ ಮಗಳಿಂದ ಹಣದ ನಿರೀಕ್ಷೆ ಮಾಡ್ತಾ ಇದ್ದೀರಾ ಎಂದು ಕೆಲವು ಜನರು ಮಾಸ್ಟರ್ ಆನಂದ್ ಅವರನ್ನು ಪ್ರೆಶ್ನೆ ಮಾಡಿದ್ದಾರೆ.

ಆದರೆ ಇದೀಗ ಮಾಸ್ಟರ್ ಆನಂದ್ ಅವರು ಎಲ್ಲಾ ಪ್ರೆಶ್ನೆಗಳಿಗೂ ಉತ್ತರ ನೀಡಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಈ ಎಲ್ಲಾ ಪ್ರೆಶ್ನೆ ಗಳಿಗೂ ಉತ್ತರ ನೀಡಿದ್ದಾರೆ. ತನ್ನ ಮಗಳ ವಿಚಾರದಲ್ಲಿ ಮಾಸ್ಟರ್ ಆನಂದ್ ಹೇಳಿದ್ದು ಹೀಗೆ. ನನ್ನ ಮಗಳು ವಂಶಿಕಾ ಇಂದ ನಾವು ಖಂಡಿತವಾಗಿಯೂ ನಮಗೆ ಹಣದ ನಿರೀಕ್ಷೆ ಇಲ್ಲ, ನಟನೆ ಮತ್ತು ಪ್ರತಿಭೆ ವಂಶಿಕಾಗೆ ಸಿಕ್ಕಿರುವ ವರ. ಇದೆಲ್ಲವೂ ದೇವರ ಆಶೀರ್ವಾದ. ಅದರಿಂದಲೇ ವಂಶಿಕಾ, ಇಷ್ಟು ಚಿಕ್ಕ ವಯಸ್ಸಿಗೆ, ಅಷ್ಟು ಜನರ ಪ್ರೀತಿಳಾಗಿ ಕರ್ನಾಟಕದ ಮನೆಮಾತಾಗಿದ್ದಾಳೆ.

ನೀವೆಲ್ಲರೂ ಮಗಳು ವಂಶಿಕಾ ಗೆ ತುಂಬಾ ಪ್ರೀತಿ ನೀಡಿದ್ದೀರಿ. ಆ ಪ್ರೀತಿಗೆ ನಾವು ಸದಾ ನಿಮಗೆ ಚಿರಋಣಿಯಾಗಿ ಇರುತ್ತೇವೆ. ವಾಹಿನಿಯಲ್ಲಿ ಬರುವ ಗಿಚ್ಚಿ ಗಿಲಿ ಗಿಲಿ ಶೋ ದೊಡ್ಡವರ ಶೋ ಆದರೆ ಆ ಶೋನಲ್ಲಿ ವಂಶಿಕಾ ಮಾಡುವ ಪಾತ್ರ ಹೇಗಿದೆ ಅವಳ ಅಭಿನಯ ಹೇಗಿದೆ ಎನ್ನುದನ್ನು ನೀವೇ ನೋಡಿ ಮೆಚ್ಚಿಕೊಂಡಿದ್ದೀರಾ.

ವಂಶಿ ಯಿಂದ ಹಣ ನಿರೀಕ್ಷೆ ಮಾಡ್ತಾ ಇದ್ದೀರಾ ಅಂತ ಕೆಲವರು ಹೇಳಿದ್ರು, ಆದ್ರೆ ಆ ರೀತಿ ಇಲ್ಲ ಎಂದು ಹೇಳಿದ್ದಾರೆ. ಜನರ ಮನಸಲ್ಲಿದ್ದ ಅನುಮಾನವನ್ನು ವಂಶಿಕಾ ತಂದೆ ಮಾಸ್ಟರ್ ಆನಂದ್ ಪರಿಹಾರ ಮಾಡಿದ್ದಾರೆ. ಬೇಬಿ ವಂಶಿಕಾ ಅವರ ಅಭಿನಯ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *