ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಡ್ಯಾನ್ಸ್ ಸೂಪರ್ ವೈರ’ಲ್, ನೋಡಿದವರೆಲ್ಲ ಡ್ಯಾನ್ಸಿಗೆ ಫಿದಾ..!?

ಸುದ್ದಿ

ಒಂದು ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಪರಭಾಷೆಯ ನಟಿಯರ ಹಾವಳಿ ಹೆಚ್ಚಾಗಿತ್ತು. ಪ್ರತಿಯೊಂದು ಸಿನಿಮಾಗಳಿಗೂ ಕೂಡ ಅದರಲ್ಲೂ ಸ್ಟಾರ್ ನಟರ ಸಿನಿಮಾಗಳಿಗೆ ಪರಭಾಷಾ ಖ್ಯಾತ ನಟಿಯರು ಬೇಕೇ ಬೇಕಾಗಿತ್ತು. ಅಷ್ಟರಮಟ್ಟಿಗೆ ಕನ್ನಡ ಚಿತ್ರರಂಗ ಪರಭಾಷಾ ನಟಿಯರಿಂದ ತುಂಬಿ ತುಳುಕಾಡುತ್ತಿತ್ತು. ಹೀಗಾಗಿ ಕನ್ನಡದ ನಟಿಯರಿಗೆ ಬೇಡಿಕೆ ಕಡಿಮೆಯಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಜೀವ ಉದಯೋನ್ಮುಖ ನಟಿಯರು ಬಂದ ಮೇಲಿಂದ ಪರಭಾಷಿಯರೂ ನಮ್ಮ ಚಿತ್ರಕ್ಕೆ ಬರುವುದೇ ಕಡಿಮೆಯಾಗಿಬಿಟ್ಟಿದೆ. ಎಲ್ಲಾ ನಿರ್ದೇಶಕ ನಿರ್ಮಾಪಕರು ಕೂಡ ನಮ್ಮ ಭಾಷೆಯ ನಟಿಯರನ್ನು ಸಿನಿಮಾಗಳಿಗೆ ಆಯ್ಕೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕೂಡ ಉತ್ತಮ ಬೆಳವಣಿಗೆ ಆಗಿದ್ದು ಇದೇ ಕಾರಣದಿಂದಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿಯರಲ್ಲಿ ನಟಿ ಆಶಿಕಾ ರಂಗನಾಥ್ ರವರು ಕೂಡ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಶ್ಮಿಕ ಮಂದಣ್ಣ ರವರು ಪರಭಾಷೆಯಲ್ಲಿ ಹೆಚ್ಚಾಗಿ ನಟಿಸುತ್ತಾರೆ ಕನ್ನಡದಲ್ಲಿ ಕಡಿಮೆಯಾಗಿ ನಟಿಸುತ್ತಾರೆ. ಅವರನ್ನು ಬಿಟ್ಟರೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬಹುಬೇಡಿಕೆಯ ನಟಿ ಎಂದರೆ ಅದು ರಚಿತಾರಾಮ್ ರವರು. ಅವರ ನಂತರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಶಿಕಾ ರಂಗನಾಥ ರವರು ಹೆಚ್ಚಾಗಿ ಎಲ್ಲಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳದಿದ್ದರೂ ಕೂಡ ಆಶಿಕಾ ರಂಗನಾಥ್ ಅವರ ಬೇಡಿಕೆಯನ್ನು ವುದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಕನ್ನಡ ಚಿತ್ರರಂಗದಲ್ಲಿ ಆಶಿಕಾ ರಂಗನಾಥ್ ರವರನ್ನು ಸ್ಟೇಟ್ ಕೃಷ್ ಎಂದು ಕರೆಯುತ್ತಾರೆ. ನಿಜಕ್ಕೂ ಕೂಡ ಆಶಿಕ ರಂಗನಾಥ್ ರವರು ಇದುವರೆಗೂ ಯಾವುದೇ ದೊಡ್ಡಮಟ್ಟದ ಸೂಪರ್ಸ್ಟಾರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳದಿದ್ದರೂ ಕೂಡ ಇಷ್ಟೊಂದು ಮಟ್ಟದ ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಹೊಂದಿರುವುದು ನಿಜಕ್ಕೂ ಕೂಡ ಅವರನ್ನು ಜನರು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಹಲವಾರು ವರ್ಷಗಳ ಹಿಂದೆ ಶರಣ್ ರವರ ಜೊತೆಗೆ ನಟಿಸಿರುವ ರಾಂಬೊ ಸಿನಿಮಾದ ಚುಟು ಚುಟು ಹಾಡು ದೊಡ್ಡಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಈಗ ಇದೇ ಜೋಡಿಯ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಅವತಾರಪುರುಷ ಸಿನಿಮಾದ ಹೀರೋ ಹೋಂಡಾ ಸಾಂಗ್ ಅದೇ ಉತ್ತರ ಕರ್ನಾಟಕ ಶೈಲಿಯ ಸಾಹಿತ್ಯದಿಂದ ತುಂಬಾ ಸೂಪರ್ ಆಗಿ ಮೂಡಿಬಂದಿದೆ.

ಈಗಾಗಲೆ ಬಿಡುಗಡೆಯಾಗಿದ್ದು ಆಶಿಕ ರಂಗನಾಥ್ ರವರ ನೃತ್ಯ ದೊಡ್ಡ ಮಟ್ಟದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹಾಡನ್ನು ನೋಡಿದವರು ಆಶಿಕ ರಂಗನಾಥ್ ರವರ ಡ್ಯಾನ್ಸ್ ಗೆ ಗೆ ಫಿದಾ ಆಗಿದ್ದೇವೆ ಎಂಬುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನೀವು ಕೂಡ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *