ಮುಂಬೈ ತಂಡದಲ್ಲಿ ಇದ್ದಾಗ ಸಾ’ವಿನ ಕದ ತಟ್ಟಿದ್ದ ಭಯಾನಕ ಘಟನೆ ಬಿಚ್ಚಿಟ್ಟ ಚಹಾಲ್ ಆ ಪರಿಸ್ಥಿತಿ ಬಂದಿತ್ತು ಯಾಕೆ ಗೊತ್ತಾ..!?

ಸುದ್ದಿ

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಐಪಿಎಲ್ ಎನ್ನುವುದು ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿದೆ. ಬಿಸಿಸಿಐ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಗುವುದಕ್ಕೆ ಕೂಡ ಐಪಿಎಲ್ ಕಾರಣ ಎಂದು ಹೇಳಬಹುದಾಗಿದೆ. ಕೇವಲ ದುಡ್ಡಿನ ವಿಚಾರಕ್ಕೆ ಮಾತ್ರವಲ್ಲದೆ ಐಪಿಎಲ್ ಹೊಸ ಹೊಸ ಕ್ರಿಕೆಟ್ ಪ್ರತಿಭೆಗಳನ್ನು ಕಂಡುಹಿಡಿಯುವುದಕ್ಕೆ ಕೂಡ ಸಹಾಯಕವಾಗಿದೆ ಎಂದರೆ ತಪ್ಪಾಗಲಾರದು. ಐಪಿಎಲ್ ಮೂಲಕ ಈಗಾಗಲೇ ಹಲವಾರು ಕ್ರಿಕೆಟಿಂಗ್ ಸ್ಟಾರ್ಗಳು ಭಾರತ ಕ್ರಿಕೆಟ್ ತಂಡಕ್ಕೆ ದೊರಕಿದ್ದಾರೆ.

ಅವುಗಳಲ್ಲಿ ಉದಾಹರಣೆ ಹೇಳುವುದಾದರೆ ಯಜುವೇಂದ್ರ ಚಹಾಲ್ ಎಂದು ಹೇಳಬಹುದಾಗಿದೆ. ಚಹಲ್ ರವರು ಐಪಿಎಲ್ ನಲ್ಲಿ ಅದ್ಭುತ ಪ್ರಕಾಶನವನ್ನು ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಐಪಿಎಲ್ ನಲ್ಲಿ ಮೊದಲಿಗೆ ಯಜುವೇಂದ್ರ ಚಹಾಲ್ ರವರು ಮುಂಬೈ ಇಂಡಿಯನ್ಸ್ ತಂಡದ ಆಡುತ್ತಿದ್ದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಯಂ ಸದಸ್ಯನಾಗಿ ಕಾಣಿಸಿಕೊಂಡಿದ್ದರು. ನಂತರ ಈಗ ಚಹಾಲ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. ತಮ್ಮ ಸ್ಪಿನ್ ಮೋಡಿಯ ಮೂಲಕ ಈಗಾಗಲೇ ಹಲವಾರು ಬಾರಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಬದುಕಿನ ಕಹಿ ಘಟನೆಯೊಂದನ್ನು ಯಜುವೇಂದ್ರ ಚಹಾಲ್ ಬಿಚ್ಚಿಟ್ಟಿದ್ದಾರೆ. ಹೌದು ಇದು ನಡೆದಿರುವುದು 2013 ರಲ್ಲಿ. ಈ ವಿಚಾರವನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಫಸ್ಟು ಇಂತಹ ಸ್ಟಾರ್ ಕ್ರಿಕೆಟಿಗನ ಜೀವನದಲ್ಲಿ ನಡೆದಿದ್ದಾದರೂ ಏನು ಅನ್ನುವುದನ್ನು ತಿಳಿಯೋಣ ಬನ್ನಿ. ಅದು 2013 ರ ಸಮಯ. ಆ ಸಂದರ್ಭದಲ್ಲಿ ಚಹಾಲ್ ರವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದರು. ಮ್ಯಾಚ್ ಗೆದ್ದು ನಂತರ ಆಟಗಾರರು ಒಟ್ಟಿಗೆ ಡಿನ್ನರ್ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

ಹೌದು ಅಂತರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗ ನೊಬ್ಬ ಸರಿಯಾಗಿ ಕುಡಿದು ಅಮಲಿನಲ್ಲಿದ್ದರು. ಯಜುವೇಂದ್ರ ಚಹಾಲ್ ರವರನ್ನು ಅನಾಮತ್ತಾಗಿ ಎತ್ತುಕೊಂಡು 15ನೇ ಫ್ಲೋರ್ ನಲ್ಲಿ ನೇತಾಡಿಸುತ್ತಿದ್ದ. ಆತ ಕೈಬಿಟ್ಟಿದ್ದಾರೆ ಖಂಡಿತವಾಗಿ 15ನೇ ಫ್ಲೋರ್ ನಿಂದ ಚಹಾಲ್ ರವರು ಕೆಳಗೆ ಬಿದ್ದು ಇನ್ನಿಲ್ಲ ವಾಗುತ್ತಿದ್ದ ರು. ಆದರೆ ಇದನ್ನು ನೋಡಿದ ಉಳಿದ ಎಲ್ಲಾ ಆಟಗಾರರು ಬಂದು ಆತನನ್ನು ರಕ್ಷಿಸಿದ್ದಾರೆ. ಇದನ್ನು ಈಗ ಒಂಬತ್ತು ವರ್ಷಗಳ ನಂತರ ಚಹಾಲ್ ರವರು ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿದ್ದಾರೆ. ಈ ವಿಚಾರವನ್ನು ಕೇಳಿ ಇಡೀ ಕ್ರಿಕೆಟ್ ಜಗತ್ತೇ ಗೊಂದಲಕ್ಕೆ ಒಳಗಾಗಿದ್ದು ಈ ಕುರಿತಂತೆ ಎಲ್ಲೆಂದರಲ್ಲಿ ಬಿಸಿಬಿಸಿ ಚರ್ಚೆಗಳು ಹೊರಬರುತ್ತಿವೆ.

ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ಕ್ರಿಕೆಟಿಗನ ಕುರಿತಂತೆ ಎಲ್ಲರಿಗೂ ಕೂಡ ತಿಳಿದಿದ್ದು ಮುಂದಿನ ದಿನಗಳಲ್ಲಿ ಆ ಕ್ರಿಕೆಟಿಗ ಈ ಹೇಳಿಕೆಯ ಕುರಿತಂತೆ ಯಾವ ಪ್ರತಿಕ್ರಿಯೆಯನ್ನು ನೀಡುತ್ತಾರೆ ಎಂಬುದನ್ನು ಕೂಡ ಕಾದುನೋಡಬೇಕಾಗಿದೆ. ಈ ವಿಚಾರದ ಕುರಿತು ಇಂದು ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *