ಮುರಿದು ಬಿತ್ತ ಪ್ರಿಯಾಮಣಿ ಹಾಗೂ ಮುಸ್ತಫಾ ರಾಜ್ ಮದುವೆ..!? ಮೊದಲನೇ ಪತ್ನಿ ಹೇಳಿದ್ದೇನು ನೋಡಿ..? ಪ್ರಿಯಾಮಣಿ ಫುಲ್ ಶಾಕ್

ಸುದ್ದಿ

ಪ್ರೀತಿಯ ಓದುಗರೇ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಸಾಕಷ್ಟು ಹೆಸರು ಮಾಡಿರುವ ಪಂಚಾಭಾಷೆ ನಟಿ ಪ್ರಿಯಾಮಣಿ ಹಾಗೂ ಮುಸ್ತಾಫಾ ರಾಜ್ ಅವರ ಮದುವೆ ವಿಚಾರ ಈಗ ಕೋ’ರ್ಟ್ ಮೆಟ್ಟಿಲೇರಿದೆ. ಇಬ್ಬರ ಮದುವೆಯನ್ನು ಪ್ರಶ್ನೆಸಿ ಮುಸ್ತಫಾ ರಾಜ್ ಪತ್ನಿ ಆಯೇಷಾ ಇದೀಗ ಕೋ’ರ್ಟ್ ನಲ್ಲಿ ಅವರ ಮೇಲೆ ದಾವೆ ಹಾಕಿದ್ದಾರೆ.

ಪ್ರಿಯಾಮಣಿ ಈಗಿನ ಪತಿ ಇದುವರೆಗೂ ಕಾನೂನಿನ ಪ್ರಕಾರ ವಿಚ್ಚೇದನ ಪಡೆದುಕೊಂಡಿಲ್ಲ ಎಂದು ಹೇಳುತ್ತಿದ್ದಾರೆ ಮೊದಲಿನ ಪತ್ನಿ ಆಯೇಷಾ, ಅವರಿಬ್ಬರ ವಿವಾಹ ಅಮಾನ್ಯ ಎಂದು ಆ’ರೋಪಿಸಿದ್ದಾರೆ. ಮುಸ್ತಾಫಾ ರಾಜ್ ಅವರ ಮೊದಲ ಪತ್ನಿ ಆಯೇಷಾ 2013ರಲ್ಲಿ ಬೇರೆಯಾಗಿದ್ದಾರೆ. ನಂತರ 2017ರಲ್ಲಿ ನಟಿ ಪ್ರಿಯಾಮಣಿಯನ್ನು ವಿವಾಹವಾದರು. ಆಯೇಷಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅಲ್ಲದೇ, ಮುಸ್ತಾಫಾ ವಿರುದ್ದ ಕೌಟುಂಬಿಕ ದೌ’ರ್ಜನ್ಯ ಪ್ರಕಾರವನ್ನು ದಾಖಳಿಸಿದ್ದಾರೆ. ಅವರ ಆರೋಪ ಬಗ್ಗೆ ಸ್ಪಷ್ಟನೆ ನೀಡಿರುವ ಮುಸ್ತಫಾ, ನನ್ನ ವಿರುದ್ದ ಕೇಳಿಬಂದಿರುವ ಆ’ರೋಪ ಸದ್ಯಕ್ಕೆ ದೂರವಾದದ್ದು. ನಾನು ಆಯೇಷಾ ಮತ್ತು ಮಕ್ಕಳಿಗೆ ನಿರಂತರವಾಗಿ ಹಣವನ್ನು ನೀಡುತ್ತಾ ಬರುತ್ತಿದ್ದೇನೆ.

ನನ್ನಿಂದ ಇನ್ನಷ್ಟು ಹಣ ದೋಚಲು ಆಯೇಷಾ ಮಾಡಿರುವ ಹುನ್ನಾರು ಇದು ಎಂದು ಮೊದಲ ಪತ್ನಿಯ ವಿರುದ್ದವೇ ಗಂ’ಭೀರ ಆ’ರೋಪ ಮಾಡಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಸಂಬಂಧ ಇಲ್ಲ 2010ರಲ್ಲೇ ಬೇರೆಯಾಗಿದ್ದೇವೆ. ಮತ್ತು 2013ರಲ್ಲಿ ವಿ’ಚ್ಚೇದನ ಪಡೆದುಕೊಂಡಿದ್ದೇವೆ. ನನ್ನ ಮತ್ತು ಪ್ರಿಯಾಮಣಿ ನಡುವಿನ ಮದುವೆ 2017ರಲ್ಲಿ ನಡೆದಿದೆ. ಅಲ್ಲಿಯವರಿಗೆ ಆಯೇಷಾ ಯಾಕೆ ಸುಮ್ಮನಾಗಿದ್ದರು ಎಂದು ಮುಸ್ತಫಾ ಪ್ರೆಶ್ನೆ ಮಾಡಿದ್ದಾರೆ.

ಅವರ ಪ್ರೆಶ್ನೆಗೆ ಪ್ರತಿಕ್ರಿಯೆ ನೀಡಿರುವ ಆಯೇಷಾ, ಮುಸ್ತಾಫಾ ಈಗಲೂ ನನ್ನ ಪತಿಯೇ. ನಮ್ಮಿಬ್ಬರ ಮದುವೆ ಸಂಬಂಧ ಇನ್ನು ದೂರವಾಗಿಲ್ಲ. ಆದರೆ ಪ್ರಿಯಾಮಣಿ ಮತ್ತು ಮುಸ್ತಾಫಾ ಮದುವೆ ಕಾನೂನುಬದ್ದವಾಗಿಲ್ಲ. ನಾವು ಇಲ್ಲಿಯವರೆಗೆ ದೂರ ಆಗಲು ಯಾವುದೇ ಅರ್ಜಿ ಹಾಕಿಲ್ಲ ಎಂದು ಹೇಳಿದರು. ಪ್ರಿಯಾಮಣಿ ಅವರನ್ನು ಮದುವೆ ಮಾಡಿಕೊಳ್ಳುವಗ ನಾನೊಬ್ಬ ಬ್ಯಾಚುಲರ್ ಎಂದು ನ್ಯಾಯಾಲಯಕ್ಕೆ ಮುಸ್ತಫಾ ಸುಳ್ಳು ಹೇಳಿ ಮದುವೆ ಮಾಡಿಕೊಂಡಿದ್ದಾರೆ ಎಂದು ಮೊದಲನೆಯ ಪತ್ನಿ ಆಯೇಷಾ ಸ್ಪಷ್ಟನೆ ನೀಡಿದ್ದಾರೆ.

ಆಯೇಷಾ ಅವರು ಪ್ರಿಯಾಮಣಿ ಜೊತೆ ಮದುವೆ ಆಗುವರೆಗೂ ಸುಮ್ಮನಿದ್ದೀದೇಕೆ ಎಂಬ ಪ್ರೆಶ್ನೆಗೆ ಉತ್ತರಿಸಿದ ಆಯೇಷಾ, ಇಬ್ಬರು ಮಕ್ಕಳ ತಾಯಿಯಾಗಿ ನೀವು ಏನು ಮಾಡಬಹುದು? ಈ ವಿವಾದವನ್ನು ಒಬ್ಬರು ಸೌಹಾರ್ದಯುತವಾಗಿ ಬೇರೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಅದು ಅವರ ಕಾರ್ಯರೂಪಕ್ಕೆ ಬಾರದಿದ್ದಾಗ ಮಾತ್ರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಅವರೀಗ ನನ್ನ ವಿರುದ್ದ ಬಳಸುತ್ತಿರುವ ಸಮಯವನ್ನು ಕಳೆದುಕೊಳ್ಳಲು ಬಯಸುದಿಲ್ಲ ಎಂದು ಮೊದಲಿನ ಪತ್ನಿ ಆಯೇಷಾ ಹೇಳಿದ್ದಾರೆ.

ನಟಿ ಪ್ರಿಯಾಮಣಿ ಸಿನಿಮಾ ವಿಚಾರಕ್ಕೆ ಬಂದರೆ, ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರೆ. ನಟಿ ಪ್ರಿಯಾಮಣಿ ಈಗ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ. ಅವರು ಈಗಾಗಲೇ ಮನೋಜ್ ಬಜ್ಜಾಯಿ ನಟನೆಯ ದಿ ಫ್ಯಾಮಿಲಿ ಮ್ಯಾನ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಿಯಾಮಣಿ ಅವರ ಅವರ ಮುಂದಿನ ಚಿತ್ರ ಅಜಯ್ ದೇವಾಗನ್ ಅವರ ಅಭಿನಯದ ಮೈದಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಿಯಾಮಣಿ ಮತ್ತಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಲಿ ಎಂಬುದೇ ಅವರ ಅಭಿಮಾನಿಗಳು ಆಸೆ. ಅವರ ಸಾಂಸಾರಿಕ ಜೀವನ ಆದಷ್ಟು ಬೇಗ ಸರಿ ಹೋಗಲಿ ಎಂದು ಅಭಿಮಾನಿಗಳು ಕೋರಿಕೆ. ನಟಿ ಪ್ರಿಯಾಮಣಿ ಅವರ ಮದುವೆ ಬಗ್ಗೆ ನಿಮ್ಮ ಅನಿಸಿಕೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *