ಮೆಜೆಸ್ಟಿಕ್ ಸಂದರ್ಭದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದ ಸಹಾಯವನ್ನು ಮೆಲುಕು ಹಾಕಿದ ಡಿ ಬಾಸ್; ಗಣೇಶ್ ಏನು ಮಾಡಿದ್ರು ಗೊತ್ತಾ..!?

Entertainment

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಓಡಾಡುತ್ತಿದ್ದ ಹುಡುಗ ಇಂದು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ಹೆಸರಿಗೆ ಒಳಗಾಗಿದ್ದಾರೆ. ನಿಜಕ್ಕೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆಳೆದು ಬಂದಿರುವ ರೀತಿ ಪ್ರತಿಯೊಬ್ಬರಿಗೂ ಕೂಡ ಮಾದರಿ ಎಂದರೆ ತಪ್ಪಾಗಲಾರದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ವರ್ಷ ತಮ್ಮ 45ನೇ ಹುಟ್ಟುಹಬ್ಬದ ಜೊತೆಗೆ ಅವರ ಮೊದಲ ಸಿನಿಮಾ ವಾಗಿರುವ ಮೆಜೆಸ್ಟಿಕ್ ಚಿತ್ರದ 20 ವರ್ಷದ ಪೂರ್ಣಗೊಳ್ಳುವಿಕೆಯನ್ನು ಕೂಡ ಆಚರಿಸಿಕೊಂಡಿದ್ದಾರೆ.
ಮೆಜೆಸ್ಟಿಕ್ ಚಿತ್ರ ಎನ್ನುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರ ಬುನಾದಿಯನ್ನು ಹಾಕಿಕೊಟ್ಟಿತ್ತು. ತಂದೆ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಲ್ಲಿ ಒಬ್ಬರಾಗಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಮಣೆಹಾಕಿ ಆಹ್ವಾನ ಯಾರು ಕೂಡ ನೀಡಲಿಲ್ಲ. ತಮ್ಮ ಸ್ವಂತ ಪರಿಶ್ರಮದ ಮೂಲಕ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಟಾಪ್ ನಟನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗೆ ಯಶಸ್ಸಿನ ಹಾದಿಗೆ ಮೊದಲ ಹೆಜ್ಜೆ ಆಗಿದ್ದು ಮಾತ್ರ ಮೆಜೆಸ್ಟಿಕ್ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.

ಮೆಜೆಸ್ಟಿಕ್ ಚಿತ್ರ 20 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಹಾದಿಯಲ್ಲಿ ಸಹಾಯ ಮಾಡಿದ ಎಲ್ಲರನ್ನೂ ಕೂಡ ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಮಾಡಿರುವ ಸಹಾಯವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಗಣೇಶ್ ಅವರು ಮಾಡಿರುವ ಸಹಾಯ ಏನೆಂಬುದನ್ನು ತಿಳಿಯೋಣ ಬನ್ನಿ.ಹೌದು ಗೆಳೆಯರೇ ನಿರ್ದೇಶಕ ಸತ್ಯ ರವರು ಮೆಜೆಸ್ಟಿಕ್ ಚಿತ್ರಕ್ಕಾಗಿ ನಿರ್ಮಾಪಕರು ನಾಯಕನಿಗಾಗಿ ಹುಡುಕುತ್ತಿದ್ದಾರೆ ನಿರ್ಮಾಪಕರನ್ನು ಭೇಟಿಯಾಗಿ ಬಾ ಎಂದು ಹೇಳಿದಾಗ ದರ್ಶನ್ ರವರ ಬಳಿಗೆ ನಿರ್ಮಾಪಕರ ಬಳಿ ಹೋಗಲು ಯಾವುದೇ ವಾಹನಗಳು ಇರಲಿಲ್ಲ. ಈ ಸಂದರ್ಭದಲ್ಲಿ ನಮ್ಮ ಡಿ ಬಾಸ್ ರವರಿಗೆ ಸಹಾಯ ಮಾಡಿದ್ದೆ ನಮ್ಮ ನೆಚ್ಚಿನ ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್.
ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಳಿ ಇದ್ದ ಬೈಕನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೇಳಿದ ಕೂಡಲೇ ಬೈಕನ್ನು ಯಾವುದೇ ಪ್ರಶ್ನೆಯನ್ನು ಕೇಳದೇ ಕೂಡಲೇ ನೀಡಿ ಬಿಡುತ್ತಾರೆ. ಅದರ ಸಹಾಯದಿಂದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿರ್ಮಾಪಕರ ಬಳಿಗೆ ಹೋಗಲು ಸಾಧ್ಯವಾಯಿತು. ದರ್ಶನ್ ರವರನ್ನು ನೋಡಿದ ಕೂಡಲೇ ನಿರ್ಮಾಪಕರಾಗಿರುವ ರಾಮಮೂರ್ತಿಯವರು ಇವರೇ ನನ್ನ ಹೀರೋ ಎಂಬುದಾಗಿ ಡಿಸೈಡ್ ಮಾಡುತ್ತಾರೆ. ಮುಂದೆ ನಡೆದಿದ್ದೆಲ್ಲ ನಿಮಗೆ ಗೊತ್ತಿದೆ.

ಇನ್ನು ಸದ್ಯಕ್ಕೆ ಕನ್ನಡ ಚಿತ್ರರಂಗದ ಟಾಪ್ ನಟರಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಣಿಸಿಕೊಂಡಿದ್ದಾರೆ. ಈಗ ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಿ ಹರಿಕೃಷ್ಣ ನಿರ್ದೇಶನದ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸಿರುವ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಸದಾಕಾಲ ತಮ್ಮ ಚಿತ್ರಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ಸಾರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಬಾರಿ ಕ್ರಾಂತಿ ಸಿನಿಮಾದ ಮೂಲಕ ಶಿಕ್ಷಣದ ಕುರಿತಂತೆ ಸಮಾಜದಲ್ಲಿ ಅರಿವನ್ನು ಮೂಡಿಸಲು ಹೊರಟಿದ್ದಾರೆ. ಇದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇನ್ನಷ್ಟು ಮತ್ತಷ್ಟು ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಲಿ ಎಂದು ಆಶಿಸೋಣ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *