ಸ್ಯಾಂಡಲ್ವುಡ್ ನಲ್ಲಿ ತಮ್ಮ ಅಭಿನಯದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದು ರಾಜ್ಯದ ಮೂಲೆ ಮೂಲೆಯಲ್ಲೂ ಹೆಚ್ಚಿನ ಅಭಿಮಾನಿಗಳ ಬಳಗವನ್ನು ಹೊಂದಿರುವ ನಟಿಯರು ರಾಧಿಕಾ ಪಂಡಿತ್ ಹಾಗೂ ಮೇಘನಾ ರಾಜ್. ರಾಧಿಕಾ ಪಂಡಿತ್ ಅವರು 1 ದಶಕಕ್ಕಿಂತ ಹೆಚ್ಚಿನ ಸಮಯ ಕನ್ನಡ ಚಿತ್ರರಂಗದಲ್ಲಿ ಆಳಿದ ಟಾಪ್ ನಟಿ. ಇವರನ್ನು ಅಭಿಮಾನಿಗಳು ಸ್ಯಾಂಡಲ್ವುಡ್ ನ ಸಿಂಡ್ರೆಲಾ ಎಂದೇ ಕರೆಯುತ್ತಾರೆ.
ಇನ್ನು ಮೇಘನಾ ರಾಜ್ ಚಿಕ್ಕ ವಯಸ್ಸಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಆಡಿ ಬೆಳೆದವರು. ಇವರ ತಂದೆ ತಾಯಿ ಇಬ್ಬರು ಕೂಡ ಸ್ಯಾಂಡಲ್ ವೂಡ್ ನ ಹಿರಿಯ ಕಲಾವಿದರು. ಹಾಗಾಗಿ ಕನ್ನಡ ಚಿತ್ರರಂಗ ಮೇಘನಾ ರಾಜ್ ಅವರಿಗೆ ಹೊಸದೇನಲ್ಲ. ಮೇಘನಾ ರಾಜ್ ಅವುರು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಮಲಯಾಳಂ ಮತ್ತು ತಮಿಳು ಸಿನೆಮಾರಂಗದಲ್ಲಿ ಕೂಡ ಸಕ್ರಿಯರಾಗಿದ್ದರು.
ಅದರಲ್ಲೂ ಮಲಯಾಳಂ ಸಿನೆಮಾರಂಗದಲ್ಲಿ ಮೇಘನಾ ರಾಜ್ ಅವರಿಗೆ ದೊಡ್ಡ ಅಭಿಮಾನಿಗಳ ಬಳಗನೇ ಇದೆ. ಅಲ್ಲಿನ ಟಾಪ್ ಸ್ಟಾರ್ ನಟಿಯಾಗಿದ್ದರು ಮೇಘನಾ ರಾಜ್. ಆದರೆ ಮದುವೆಯಾದ ನಂತರ ಈ ಇಬ್ಬರು ನಟಿಯರು ಸಹ ಚಿತ್ರರಂಗದಿಂದ ಮತ್ತು ನಟನೆಯಿಂದ ಸ್ವಲ್ಪ ದೂರಾನೇ ಉಳಿದಿದ್ದರೆ. ಮದುವೆ ನಂತರ ಕುಟುಂಬ ನೋಡಿಕೊಳ್ಳುವುದು ಮತ್ತು ಈಗ ತಮ್ಮ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಇಬ್ಬರು ಕೂಡ ಬ್ಯುಸಿ ಆಗಿದ್ದಾರೆ.
ರಾಧಿಕಾ ಪಂಡಿತ್ ಮತ್ತು ಮೇಘನಾ ರಾಜ್ ಇಬ್ಬರು ಸಹ ಸರ್ಜಾ ಕುಟುಂಬಕ್ಕೆ ಬಹಳ ಹತ್ತಿರದವರು. ನಮಗೆಲ್ಲ ಗೊತ್ತಿರುವ ಹಾಗೆ ಧ್ರುವ ಸರ್ಜಾ ಅಭಿನಯದ ಮೊದಲ ಸಿನೆಮಾ ಅದ್ದೂರಿ ಹಾಗೂ ಎರಡನೇ ಸಿನೆಮಾ ಬಹದ್ದೂರ್ ಈ ಎರಡು ಸಿನೆಮಾಗಳಲ್ಲಿ ನಾಯಕಿಯಾಗಿದ್ದರು ನಟಿ ರಾಧಿಕಾ ಪಂಡಿತ್. ಹಾಗಾಗಿ ಸರ್ಜಾ ಮನೆಯ ಜೊತೆಗೆ ಇವರಿಗೆ ಒಳ್ಳೆಯ ಬಾಂಧವ್ಯವಿದೆ.
ಇನ್ನು ಮೇಘನಾ ರಾಜ್ ಅವರು ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ರಾಜಾಹುಲಿ ಸಿನೆಮಾದಲ್ಲಿ ನಾಯಕಿಯಾಗಿದ್ದರು ಇನ್ನು ಆ ಚಿತ್ರ ಎಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಗಿತ್ತು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ. ರಾಕಿಂಗ್ ಸ್ಟಾರ್ ಯಶ್ ಮತ್ತು ಚಿರಂಜೀವಿ ಸರ್ಜಾ ಎಷ್ಟು ಒಳ್ಳೆಯ ಗೆಳೆಯರಾಗಿದ್ದಾರೋ, ಹಾಗೆ ಮೇಘನಾ ರಾಜ್ ಮತ್ತು ರಾಧಿಕಾ ಪಂಡಿತ್ ಅವರು ಸಹ ಒಳ್ಳೆಯ ಗೆಳೆಯರಾಗಿದ್ದಾರೆ. ಈಗ ರಾಧಿಕಾ ಮತ್ತು ಮೇಘನಾ ಇಬ್ಬರಿಗೂ ಕೂಡ ಮುದ್ದಾದ ಮಕ್ಕಳಿದ್ದಾರೆ.
ಇಬ್ಬರಿಗೂ ನಿಜ ಜೀವನದಲ್ಲಿ ಕೂಡ ಒಳ್ಳೆಯ ಸ್ನೇಹಿತರು ಆಗಿದ್ದಾರೆ. ಚಿರು ಅಗಲಿಕೆಯ ಸಮಯದಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್ ಮೇಘನಾ ರಾಜ್ ಅವರಿಗೆ ಕರೆಮಾಡಿ ಸಂತ್ವನ ಹೇಳಿ ಧೈರ್ಯ ತುಂಬಿದ್ದರು. ಆಗಾಗ ಮೇಘನಾ ರಾಜ್ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಇನ್ನು ರಾಯನ್ ರಾಜ್ ಸರ್ಜಾ ಹುಟ್ಟಿದ ಮೇಲೆ ರಾಧಿಕಾ ಮತ್ತು ಯಶ್ ಮೇಘನಾ ರಾಜ್ ಅವರಿಗೆ ಕರೆಮಾಡಿ, ತಾಯಿತನದ ಕುರಿತು ಸಲಹೆಗಳನ್ನು ನೀಡುತ್ತಿದ್ದರು.
ಹಾಗೂ ಜ್ಯೂನಿಯರ್ ಚಿರು ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಮೇಘನಾ ರಾಜ್ ಸಹ ರಾಧಿಕಾ ಪಂಡಿತ್ ಅವರಿಗೆ ಕರೆ ಮಾಡಿ ಯಥರ್ವ ಮತ್ತು ಐರಾ ಬಗ್ಗೆ ವಿಚಾರಿಕೊಳ್ಳುತ್ತಿದ್ದರು. ಇದೀಗ ರಾಧಿಕಾ ಪಂಡಿತ್ ಅವರು ಮೇಘನಾ ರಾಜ್ ಅವರ ಮನೆಗೆ ಹೋಗಿ. ಮೇಘನಾ ಮತ್ತು ಜ್ಯೂನಿಯರ್ ಚಿರುವನ್ನು ಭೇಟಿ ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ ಮಕ್ಕಳ ಜೊತೆ ರಾಧಿಕಾ ಮೇಘನಾ ಮನೆಗೆ ಹೋಗಿದ್ದಾರೆ.
ಯಥಾರ್ವ್, ರಾಯನ್ ಮತ್ತು ಐರಾ ಮೂವರು ಜೊತೆಯಾಗಿ ಸ್ವಲ್ಪ ಸಮಯ ಕೆಳೆದಿದ್ದರೆ ಎನ್ನಲಾಗಿದೆ. ಇನ್ನು ರಾಧಿಕಾ ಅವರು ಮೇಘನಾ ರಾಜ್ ಅವರ ಜೊತೆ ಸ್ವಲ್ಪ ಸಮಯ ಕಳೆದಿದ್ದರೆ. ರಾಯನ್ ಜೊತೆಗೆ ಸಮಯ ಕೆಳೆದ ರಾಧಿಕಾ ಪಂಡಿತ್ ಅವರು, ಮಗುವನ್ನು ನೋಡಿದರೆ ಥೇಟ್ ಚಿರು ಅವರನ್ನೇ ನೋಡಿದ ಹಾಗಿದೆ ಎಂದು ಹೇಳಿದ್ದಾರೆ. ಇಬ್ಬರು ಸಹ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಮೇಘನಾ ರಾಜ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಒಂದೇ ಸಿನೆಮಾದಲ್ಲಿ ಜೊತೆಯಾಗಿ ನಟಿಸಿತ್ತಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.