ಮೇಘನಾ ರಾಜ್ ಮೆನೆಗೆ ಬಂದು ಚಿರು ಮಗನ ಜೊತೆ ಸಮಯ ಕಳೆದ ಅರ್ಜುನ್ ಸರ್ಜಾ ದಂಪತಿಗಳು..!

ಸುದ್ದಿ

ಕನ್ನಡ ಚಿತ್ರರಂಗದ ಕ್ಯೂಟ್ ದಂಪತಿಗಳದ ಚಿರು ಸರ್ಜಾ ಹಾಗೂ ಮೇಘನಾ ರಾಜ್ ಅವರ ಮುದ್ದಾದ ಮಗ ರಾಯನ್ ರಾಜ್ ಸರ್ಜಾ. ಚಿರಂಜೀವಿ ಸರ್ಜಾ ಅವರು ನಮ್ಮಿಂದ ದೂರವಾದ ಮೇಲೆ ಇಡೀ ಚಿತ್ರರಂಗವೆ ಮರುಗಿತ್ತು. ಸರ್ಜಾ ಕುಟುಂಬಕ್ಕೆ ಚಿರುವಿನ ಪ್ರತಿರೂಪವಾಗಿ ಬಂದಿರುವ ರಾಯನ್, ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಕುಟುಂಬಕ್ಕೆ ರಾಯನ್ ಬಂದ ಮೇಲೆ ಎರಡು ಕುಟುಂಬದವರು ಸಾಕಷ್ಟು ಸಂತೋಷ್ ವಾಗಿದ್ದರು.

ಅರ್ಜುನ್ ಸರ್ಜಾ ಅವರಿಗೆ ರಾಯನ್ ಸರ್ಜಾ ಅಂದ್ರೆ ಬಹಳ ಪ್ರೀತಿ. ಆಗಾಗ ರಾಯನ್ ಸರ್ಜಾ ನಿಗೆ ವಿಡಿಯೋ ಕಾಲ್ ಮಾಡಿ ಮಾಡತನಾಡುತ್ತಾರೆ ಅರ್ಜುನ್ ಸರ್ಜಾ. ಅರ್ಜುನ್ ಸರ್ಜಾ ಅವರು ಚಿರು ಮತ್ತು ಧ್ರುವ ಇಬ್ಬರನ್ನು ತನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದರು. ಚಿರು ಹಾಗೂ ಧ್ರುವ ಇಬ್ಬರಿಗೂ ಮಾವ ಅರ್ಜುನ್ ಸರ್ಜಾ ಬಹಳ ಸಪೋರ್ಟ್ ಮಾಡುತಿದ್ದರು. ಅವರಿಬ್ಬರ ಪ್ರತಿ ಚಿತ್ರ ಬಿಡುಗಡೆಯ ಸಮಯದಲ್ಲೂ ಕೂಡ ಇಬ್ಬರ ಸಿನಿಮಾಗಳಿಗೂ ಅವರು ಪ್ರಮೋಷನ್ ಮಾಡಿ ಸಿನಿಮಾ ಬಿಡುಗಡೆಯಾಗಿ ಫಸ್ಟ್ ಡೇ ಫಸ್ಟ್ ಶೋ ಮಿಸ್ ಮಾಡದೇ ಅವರ ಜೊತೆ ಥಿಯೇಟರ್ ನಲ್ಲಿ ಚಿತ್ರ ನೋಡುತಿದ್ದರು.

ಪ್ರೀತಿಯ ಚಿರು ಅವರಿಂದ ಹೋಗಿದ್ದು ಅವರಿಗೆ ನುಂಗಲಾರದ ತುತ್ತಾಗಿ ಗೋಗಿತ್ತು ಸರ್ಜಾ ಅವರಿಗೆ ಬಹಳಷ್ಟು ಬೇಸರ ತಂದಿತ್ತು. ನನ್ನ ಮಗನನ್ನು ಕಳೆದುಕೊಂಡ ಹಾಗಿದೆ ಎಂದು ನೋವಿನಲ್ಲಿ ಅರ್ಜುನ್ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಹುಟ್ಟಿದ ಅವರ ಕುಟುಂಬಕ್ಕೆ ಮತ್ತೆ ಸಂತೋಷದ ಕ್ಷಣಗಳು ಮತ್ತೆ ಮರಳಿ ಬಂದಿದ್ದು ಮೇಘನಾ ರಾಜ್ ಅವರ ಸುಪುತ್ರ ರಾಯನ್ ಸರ್ಜಾ ಹುಟ್ಟಿದ ಮೇಲೆ. ಹಾಗಾಗಿ ಸರ್ಜಾ ಕುಟುಂಬಕ್ಕೆ ರಾಯನ್ ಮೇಲೆ ಪ್ರೀತಿ ಜಾಸ್ತಿ.
ಅರ್ಜುನ್ ಸರ್ಜಾ ಅವರು ಇರುವುದು ಚನ್ನೈನಲ್ಲಿ ಹಾಗಾಗಿ ರಾಯನ್ ರಾಜ್ ಅವರನ್ನು ಆಗಾಗ ಭೇಟಿ ಮಾಡಲು ಅವರಿಗೆ ಸಾಧ್ಯ ಆಗುವುದಿಲ್ಲ. ಅವರಿಗೆ ಸಮಯ ಸಿಕ್ಕಾಗ, ಮೇಘನಾ ಅವರ ಪುತ್ರ ರಾಯನ್ ಅವರಿಗೆ ವಿಡಿಯೋ ಕಾಲ್ ಮಾಡಿ, ಮಗುವಿನ ಜೊತಗೆ ಮಾತಾಡುತ್ತಾರೆ. ಈಗ ಅರ್ಜುನ್ ಸರ್ಜಾ ಅವರು ಬಹಳ ದಿನಗಳ ನಂತರ ರಾಯನ್ ಸರ್ಜಾ ಅವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ ಸಂತೋಷಪಟ್ಟಿದ್ದಾರೆ. ಅವರಿಬ್ಬರ ಮಾತುಕತೆಯ ಮುದ್ದಾದ ವಿಡಿಯೋ ಕಾಲ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ.

ಅರ್ಜುನ್ ಸರ್ಜಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲು ಆಕ್ಟಿವ್ ಆಗಿರುತ್ತಾರೆ. ಅರ್ಜುನ್ ಸರ್ಜಾ ಅವರು ಆಗಾಗ ಅವರ ಕುಟುಂಬದ ಜೊತೆಗೆ ಕಾಲ ಕಳೆಯುವ ಸುಂದರ ಕ್ಷಣಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಅರ್ಜುನ್ ಸರ್ಜಾ ಅವರ ಮೊದಲು ಮಗಳು ಐಶ್ವರ್ಯ ಅವರ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದರು ಅವರು ಸೋಷಿಯಲ್ ಮೀಡಿಯಾದ ಮೂಲಕ ವಿಶ್ ಮಾಡಿದ್ದಾರೆ. ಈಗ ರಾಯನ್ ಸರ್ಜಾ ಅವರ ತಾಯಿ ಮೇಘನಾ ರಾಜ್ ಅವರು ಡಾನ್ಸ್ ಕರ್ನಾಟಕ ಎಂಬ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದು, ಅದರ ಜೊತೆಗೆ ಮೂರು ಕನ್ನಡ ಚಿತ್ರಗಳನ್ನು ಕೂಡ ಒಪ್ಪಿಕೊಂಡಿದ್ದಾರೆ.
ಸಾಧ್ಯ ಮೇಘನಾ ರಾಜ್ ಅವರು ಬಹಳ ಬ್ಯುಸಿ ಅಗಿದ್ದು. ಮುದ್ದು ಮಗನ ನೋಡಿಕೊಳ್ಳುವುದರ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿ ಕೂಡ ಭಾಗಿಯಾಗಿದ್ದಾರೆ ನಟಿ ಮೇಘನಾ ರಾಜ್ ಅವರ ಮಗನ ಸುಂದರ ಕ್ಷಣಗಳನ್ನು ನೀವು ಇಲ್ಲಿ ಕಾಣಬಹುದು. ಈ ಲೇಖನ ನಿಮಗೆ ಇಷ್ಟ ಆಗಿದ್ದಾರೆ ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *