ಮೇಲುಕೋಟೆಯ ಬಾಹುಬಲಿ ಎಂದೇ ಕ್ಯಾತಾರಾಗಿದ್ದ ಶ್ರೀ ಕಲಮೇಘಮ್ ರಾಮಸ್ವಾಮಿ ಅಯ್ಯಂಗಾರ್ ಅವರು ಇಂದು ಶ್ರೀ ಹರಿ ಪಾದ ಸೇರಿದ್ದಾರೆ ಈ ಸುದ್ಧಿ ಕೇಳಿ ಮೇಲುಕೋಟೆಯ ಇರುವ ಜನರು ನೊಂದಿದ್ದಿದ್ದಾರೆ 80ಕ್ಕೂ ಅಧಿಕ ಸಂವತ್ಸರಗಳನ್ನು ಕಂಡಿದ್ದ ರಾಮಸ್ವಾಮಿ ಅಯ್ಯಂಗಾರ್ ಅವರು ಇಂದು ಮುಂಜಾನೆ ದೇವರ ಹರಿಪಾದ ಸೇರಿದ್ದು ಇಡೀ ಮೇಲುಕೋಟೆ ಸೂತಕದಲ್ಲಿ ಮುಳುಗಿದೆ.
ಮೇಲುಕೋಟೆಯ ಬಾಹುಬಲಿ ಎಂದೇ ಪ್ರಖ್ಯಾತರಾಗಿದ್ದ ಶ್ರೀ ಕಲಮೇಘಮ್ ರಾಮಸ್ವಾಮಿ ಅಯ್ಯಂಗಾರ್ ಅವರು ಇಂದು ಶ್ರೀ ಹರಿ ಪಾದ ಸೇರಿರುವ ಸುದ್ಧಿ ಆಘಾತ ತಂದಿತು.
ಪ್ರತಿನಿತ್ಯ ತಪ್ಪದೇ ಸುಮಾರು 70 ಸಂವತ್ಸರದ ಕಾಲ ಅಭಿಷೇಕ ಮತ್ತು ನೈವೇದ್ಯಕ್ಕಾಗಿ ನೀರನ್ನು ಕೆಳಗಿರುವ ಪುಷ್ಕರಣಿಯಿಂದ ಬೆಟ್ಟದ ಮೇಲಿರುವ ಮೇಲುಕೋಟೆಯ ಯೋಗ ನರಸಿಂಹ ದೇವಸ್ಥಾನಕ್ಕೆ 300 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿ ತೆಗೆದುಕೊಂಡು ಹೋಗುತ್ತಿದ್ದರು.
70ವರ್ಷಗಳ ಕಾಲ ಈ ಸೇವೆಯಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದ ಇವರು ನೀರಿನ ಪಾತ್ರೆಯನ್ನು ಹೊತ್ತುಕೊಂಡು ಬೆಟ್ಟ ಹತ್ತುತ್ತಿದ್ದ ರೀತಿಗೆ ಇಡೀ ಮೇಲುಕೋಟೆ, ಹಾಗೂ ಕರ್ನಾಟಕವೇ ಬೈ ಮೇಲೆ ಬೆರಳಿಟ್ಟಿತ್ತು. ಇಂತಹ ವಯಸ್ಸಿನಲ್ಲಿ ಹಿರಿಯ ಜೀವ ಈಗ ನಮ್ಮ ನಾಡನ್ನು ಅಗಲಿದ್ದು, ನಮ್ಮ ದುರ್ದೈವವೇ ಸರಿ. ರಾಮಸ್ವಾಮಿ ಅಯ್ಯಂಗಾರ್ ಅವರ ನಿಧಾನಕ್ಕೆ ಸಂಸದ ಪಿ. ಸಿ. ಮೋಹನ್, ಶಾಸಕ ರಾಮಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದರೆ.
ಅವರ ಆ ಭಕ್ತಿ ಹಾಗೂ ಶ್ರದ್ಧೆ ಸಮಾಜಕ್ಕೆ ಒಂದು ಪ್ರೇರಣೆಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ