ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಫೋಟೋವನ್ನು ಹಂಚಿಕೊಂಡ ನಟಿ ಅಮೂಲ್ಯ! ಮಕ್ಕಳು ಎಷ್ಟು ಕ್ಯೂಟ್ ನೋಡಿ

ಸುದ್ದಿ

ಚಂದನವನದ ಕ್ಯೂಟ್ ನಟಿ ಅಮೂಲ್ಯ ಈಗ ತನ್ನ ಇಬ್ಬರು ಮುದ್ದಾದ ಮಕ್ಕಳ ಜೊತೆ ಸಂತೋಷದಿಂದ ಇದ್ದಾರೆ. ಇನ್ನು ಕನ್ನಡ ಸಿನಿಮಾರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಚಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರು ಬಹಳಷ್ಟು ಜನಪ್ರಿಯತೆ ಗೊಂಡರು. ನಟಿ ಅಮೂಲ್ಯ ಅವರು ಚಲುವಿನ ಚಿತ್ತಾರ ಸಿನಿಮಾದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದು. ಪ್ರೇಮಕಾವ್ಯ ಚಿತ್ರವಾಗಿ ಕಾಣಿಸಿಕೊಂಡಿತ್ತು. ಆ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೆ ಎಲ್ಲರ ಮನಸ್ಸಲ್ಲಿ ಉಳಿಯುವ ಹಾಗೇ ಮಾಡಿತು.

ಆ ಚಿತ್ರದ ಮೂಲಕ ಜನಮಾನ ಗೆದ್ದ ನಟಿ ಅಮೂಲ್ಯ ಅವರಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆ ಮನೆಮಾತಾದರು. ಹಾಗೂ ಅನೇಕ ಚಿತ್ರಗಳ್ಳಲ್ಲಿ ನಟಿಸಿ ಅವರ ಅಭಿನಯಕ್ಕೆ ಮನಸೋತ ಅಭಿಮಾನಿಗಳು ಅವರಿಗೆ “ಗೋಲ್ಡನ್ ಕ್ವೀನ್” ಎಂದು ನಾಮಕರಣ ಮಾಡಿದರು. ಇದೀಗ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಗರ್ಭಿಣಿಯಾಗಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೇ. ಅವರ ಹಾಗೂ ಪತಿಯ ಕುಟುಂಬದವರು ಸೇರಿ ನಟಿ ಅಮೂಲ್ಯ ಅವರಿಗೆ ಸೀಮಂತ ಕಾರ್ಯ ಮಾಡಿರೋದು ನಿಮಗೆ ಗೊತ್ತೇ ಇದೇ ಆದರ ನೆನಪಿಗೋಸ್ಕರ ದಂಪತಿಗಳು ಫೋಟೋ ಶೊಟ್ ಕೂಡ ಮಾಡುಸಿದ್ದರು.

ಅಷ್ಟೇ ಅಲ್ಲದೇ ಅವರ ಸೀಮಂತ ಕಾರ್ಯಕ್ಕೆ ಚಿತ್ರರಂಗದ ಸೆಲೆಬ್ರೇಟಿಗಳು ಸ್ನೇಹಿತರು ಹಾಗೂ ಹಲವಾರು ಗಣ್ಯರು ಕೂಡ ಭಾಗವಹಿಸಿದ್ದರು. ಅವರ ಇಡೀ ಕುಟುಂಬವೇ ಸಂತೋಷದಲ್ಲಿ ತೆಲಡುತ್ತಿದ್ದಾರೆ. ಯಾಕೆಅಂದ್ರೆ ನಟಿ ಅಮೂಲ್ಯ ಅವರಿಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನಟಿ ಅಮೂಲ್ಯ ಚಲುವಿನ ಚಿತ್ತಾರ, ಚೈತ್ರದ ಚಂದ್ರಮ, ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಹಾಗೇ ಅನೇಕ ಚಿತ್ರಗಳಲ್ಲಿ ನಟಿಸಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಹುಟ್ಟಿ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ ಅವರ ತಂದೆ ಗುಮಸ್ತರಾಗಿದ್ರು ಹಾಗೂ ತಾಯಿ ಗೃಹಿಣಿ. ಇನ್ನು ಅಮೂಲ್ಯ ಅವರಿಗೆ ಒಬ್ಬ ಅಣ್ಣ ಅವರು ದೀಪಕ್ ಅರಸ್. ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶನವನ್ನು ಮಾಡಿದ್ದಾರೆ. ಅವರು ಮಾಧ್ಯಮ ವರ್ಗ ಕುಟುಂಬ ದಿಂದ ಬಂದ ನಟಿ ಇವರು ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಅವರ ಬಣ್ಣದ ಸಿನಿಮಾ ರಂಗದ ಬದುಕಿನಲ್ಲಿ ಸುಮಾರು 37 ಕ್ಕು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿ ಅಮೂಲ್ಯ ಅವರು 2017 ರಲ್ಲಿ ಜಗದೀಶ್ ಎಂಬುವವರನ್ನು ಮದುವೆಯಾದರು. ಮದುವೆಯಾದ ನಂತರ ಅಮೂಲ್ಯ ಅವರು ಸಂಪೂರ್ಣ ಸಿನಿಮಾರಂಗದಿಂದ ದೂರ ಸರಿದರು. ತಮ್ಮ ಸಂಪೂರ್ಣ ಸಮಯವನ್ನು ತನ್ನ ಕುಟುಂಬಕ್ಕೆ ನೀಡಿದರು ದುನಿಯಾ ವಿಜಯ್ ಮಾಸ್ತಿಗುಡಿ ಹಾಗೂ ಮುಗುಳುನಗೆ ಸಿನಿಮಾಗಳ ನಂತರ ಯಾವ ಚಿತ್ರದಲ್ಲೂ ನಟಿಸಿಲ್ಲ. ಇನ್ನು ಅವರ ಮುದ್ದಿನ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗಳಿಗೆ ಡಬಲ್ ಬಂಪರ್ ಆಫರ್ ಸಿಕ್ಕಿದೆ. ಜಗದೀಶ್ ದಂಪತಿಗಳಿಗೆ ಅವಳಿ ಗಂಡು ಮಕ್ಕಳಿಗೆ ತಂದೆ ತಾಯಿ ಆಗಿದ್ದಾರೆ. ಶಿವರಾತ್ರಿಯ ಹಬ್ಬದಂದು ಹುಟ್ಟಿದ್ದು ವಿಶೇಷವಾಗಿ ಜಗದೀಶ್ ಅವರಿಗೆ ತುಂಬಾ ಖುಷಿ ಕೊಟ್ಟಿದೆ.

ನಟಿ ಅಮೂಲ್ಯ ಅವರ ಮಕ್ಕಳಿಗೆ ಈಗ ಮೂರು ತಿಂಗಳು ತುಂಬಿದೆ.. ಹಾಗಾಗಿ ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಸೇರಿ ತಾಯಿ ಅಣ್ಣಮ್ಮ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ನಟಿ ಅಮೂಲ್ಯ ಅವರು ರಾಜಕಾರಣಿ ಹಾಗೂ ಉದ್ಯಮಿ ಯಾಗಿರುವ ಜಗದೀಶ್ ಅವರನ್ನು ಮದುವೆಯಾಗಿ ಈಗ ನಾಲ್ಕು ವರ್ಷಗಳು ಕಳೆಯುತ್ತ ಬಂದಿದೆ. ಹೀಗಿರುವಾಗ. ಮೂರು ತಿಂಗಳು ಹಿಂದೆ ಇಬ್ಬರು ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಅವರು ಅವಳಿ ಮಕ್ಕಳಿಗೆ ಮೂರು ತಿಂಗಳು ತುಂಬಿದ ಸಂದರ್ಭದಲ್ಲಿ ಗಾಂಧಿ ನಗರದ ಮೆಜೆಸ್ಟಿಕ್ ನಲ್ಲಿ ಇರುವ ನಗರ ದೇವತೆ ಬೆಂಗಳೂರಿನ ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಯನ್ನು ಸಲ್ಲಿಸಿ ಅಣ್ಣಮ್ಮ ದೇವಿಯ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

ಇತ್ತೀಚಿಗೆ ನಟಿ ಅಮೂಲ್ಯ ತನ್ನ ಇಬ್ಬರು ಮುದ್ದು ಮಕ್ಕಳ ಕಾಲಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ತನ್ನ ಇಬ್ಬರು ಮಕ್ಕಳು ಕಾಲಿನ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಮೊದಲ ಬಾರಿಗೆ ಮಕ್ಕಳ ಬಗ್ಗೆ ‘ಬ್ಲೆಸ್ಡ್’ ಎಂದು ಬರೆದುಕೊಂಡಿದ್ದಾರೆ. ಆದರೆ ಅಮೂಲ್ಯ ಇಬ್ಬರು ಮಕ್ಕಳ ಮುಖ ತೋರಿಸಿಲ್ಲ. ಬದಲಾಗಿ ಕಾಲುಗಳು ಕಾಣುವಂತೆ ಫೋಟೋ ಶೇರ್ ಮಾಡಿದ್ದಾರೆ.
ಇದು ಇವರ ಅಭಿಮಾನಿಗಳಿಗೆ ತುಂಬಾ ಬೇಸರ ಉಂಟು ಮಾಡಿದೆ. ಇನ್ನು ಕೇಳವರು ಈ ಮುದ್ದಾದ ಮಕ್ಕಳ ಫೋಟೋ ನೋಡಿ ಖುಷಿ ಪಟ್ಟಿದ್ದಾರೆ. ಇನ್ನು ಅಮೂಲ್ಯ ಅವರ ಅಭಿಮಾನಿಗಳು ಆದಷ್ಟು ಬೇಗ ನಿಮ್ಮ ಮಕ್ಕಳ ಮುಖ ದರ್ಶನ್ ಮಾಡಿಸಿ ಎಂದು ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *