ದಕ್ಷಿಣ ಭಾರತದ ಸಾಕಷ್ಟು ಪ್ರಕ್ಯತಿಯನ್ನು ಪಡೆದು ಅಂದು ಪ್ರೇಕ್ಷಕರನ್ನು ರಂಜಿಸಿದ ನಟಿ ನಮಿತಾ ತಾಯಿಯಾಗುವ ಖುಷಿಯ ಸಂಭ್ರಮದಲ್ಲಿದ್ದಾರೆ. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ರವಿಚಂದ್ರನ್ ಅವರ ಜೊತೆ ನೀಲಕಂಠ ಚಿತ್ರದ ಮೂಲಕ ಕನ್ನಡ ಸಿನೆಮಾರಂಗಕ್ಕೆ ಕಾಲಿಟ್ಟರು. 2002 ರಲ್ಲಿ ನಮಿತಾ ತೆಲುಗು ಸಿನೆಮಾರಂಗದ ಮೂಲಕ ಸಿನಿ ಜರ್ನಿಯನ್ನು ಶುರುಮಾಡಿದರು. ಇವರು ಮೂಲತಹ ಗುಜರಾತ್ ನವರಾಗಿದ್ದು ಈ ನಟಿ ಅತೀ ಹೆಚ್ಚು ಖ್ಯಾತಿ ಗಳಿಸಿದ್ದು ದಕ್ಷಿಣ ಭಾರತದಲ್ಲಿ. ತೆಲುಗಿನ ಸೋತಮ್ ಸಿನೆಮಾ ಮೂಲಕ ನಟಿ ನಮಿತಾ ಮೊದಲು ಬಾರಿಗೆ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದರು.
ಇನ್ನು 2017 ರಲ್ಲಿ ನಮಿತಾ ಚನ್ನೈ ಮೂಲದ ವೀರೇಂದ್ರ ಚಧರಿ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ನಟಿ ನಮಿತಾ ಸಿನೆಮಾಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ನಟಿ ನಮಿತಾ ಈಗ ಚೋಚ್ಚಲ ತಾಯಿಯಗುವ ಸಂಭ್ರಮದಲ್ಲಿದ್ದಾರೆ. ತಮ್ಮ ತುಂಬು ಗರ್ಭಿಣಿಯ ಬೇಬಿ ಬಂಪ್ ಫೋಟೋಶೊಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಟಿ ನಮಿತಾ.
ಕನ್ನಡದ ಖ್ಯಾತ ನಟ ರವಿಚಂದ್ರನ್ ಅವರ ಸಿನೆಮಾ ಮೂಲಕ ಕನ್ನಡದ ಪ್ರೇಕ್ಷಕರಿಗೆ ನಟಿ ನಮಿತಾ ಚಿರಪರಿಚಿತರು. ಇನ್ನು ಇವರನ್ನು ಸ್ಯಾಂಡಲ್ವುಡ್ ನಲ್ಲಿ ಹಾಟ್ ನಟಿ ಎಂದೇ ಖ್ಯಾತಿ ಗಳಿಸಿ ಸಿನೆಮಾಗಳಲ್ಲಿ ಮಿಂಚಿದ್ದರು. ನೀಲಕಂಠ ಸಿನೆಮಾದ ಬಳಿಕ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಇಂದ್ರ ಸಿನೆಮಾದಲ್ಲಿ ಮಿಂಚಿದ್ದರು. ನಂತರ ಚಿತ್ರರಂಗದಿಂದ ದೂರ ಉಳಿದ ನಟಿ ಸಾಕಷ್ಟು ದಪ್ಪಅಗಿದ್ದು ನೀವು ಕೂಡ ನೋಡಿರಬಹುದು. ನಂತರ “ಡಾನ್ಸ್ ಜೋಡಿ ಡಾನ್ಸ್” ಎಂಬ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜಡ್ಜ್ ಆಗಿ ಮತ್ತೇ ತೆರೆಯ ಮೇಲೆ ಅಭಿಮಾನಿಗಳನ್ನು ರಂಜಿಸಿದರು.
ಇನ್ನು ನಮಿತಾ ಅವರು “ಬೌ ಬೌ” ಎಂಬ ಸಿನೆಮಾದ ನಿರ್ಮಾಪಕಿಯಾಗಿ ಮತ್ತು ಲೀಡ್ ರೋಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 41 ವರ್ಷದ ನಟಿ ನಮಿತಾ ತಾನು ತುಂಬು ಗರ್ಭಿಣಿ ಆಗಿರುವ ಸಂತೋಷದ ವಿಚಾರವನ್ನು ಫೋಟೋ ಶೇರ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.ಇದೀಗ ನಮಿತಾ ದಂಪತಿಗಳು ತಮ್ಮ ಮೊದಲ ಮಗುವಿನ ನೀರೇಕ್ಷೆಯಲ್ಲಿದ್ದಾರೆ. ಈ ಸಂತೋಷದ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಕತೆಯ ಮೂಲಕ ಅಭಿಮಾನಿಗಳ ಜೊತೆ ನಟಿ ಹಂಚಿಕೊಂಡಿದ್ದಾರೆ.
ಇದೀಗ ದಂಪತಿಗಳು ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಗಾಗಿ ಸೀಮಂತ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ನಟಿ ನಮಿತಾ ಅವರ ಸೀಮಂತ ನಡೆಯಿತು.ನೀಲಿ ಮತ್ತು ಕೆಂಪು ಸೀರೆಯಲ್ಲಿ ನಮಿತಾ ಫುಲ್ ಮಿಂಚಿದ್ದಾರೆ.ಇನ್ನು ತನ್ನ ಸೀಮಂತಕ್ಕೆ ಸ್ಪೆಷಲ್ ಮೆಹಂದಿ ಹಾಕಿಸಿಕೊಂಡಿದ್ದಾರೆ.ಒಂದು ಅಂಗೈ ಮೇಲೆ ಅಂಬೆಗಲು ಕೃಷ್ಣ ಮತ್ತೊಂದು ಅಂಗೈಲಿ ಯಶೋದೆ ಹಾಕಿಸಿಕೊಂಡಿದ್ದಾರೆ. ಸ್ವಂತಂ ಎನ್ನುವ ಸಿನೆಮಾ ಮೂಲಕ ಹೀರೋಯಿನ್ ಆದ ನಟಿ ನಮಿತಾ, ನಂತರ ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲೂ ಬಹಳ ಫೇಮಸ್ ಆಗಿದ್ದಾರೆ.
ಇನ್ನು ತಮಿಳಿನಲ್ಲಿ ಇವರ ಅಭಿಮಾನಿಗಳ ಕ್ರೀಜ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇವರ ಸಿನೆಮಾಗಳೆಂದರೆ ಅಂದು ಅಭಿಮಾನಿಗಳು ಮುಗಿ ಬೀಳುತ್ತಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ನಮಿತಾ ತಮ್ಮ ಅದ್ದೂರಿ ಸೀಮಂತ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಹಾಗೂ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ. ನೀವು ನಮಿತಾ ಅವರಿಗೆ ತಪ್ಪದೆ ಕಾಮೆಂಟ್ ಮೂಲಕ ಅವರಿಗೆ ಶುಭ ಹರಿಸಿ.