ಯಜಮಾನ ಚಿತ್ರದ ‘ಬಸಣ್ಣಿ ಬಾ’ ಹಾಗೂ ವಿಕ್ರಂತ್ ರೋಣ ಚಿತ್ರದ ‘ರಾ ರಾ ರುಕ್ಕಮ್ಮ’ ಈ ಎರಡು ಹಾಡುಗಳಲ್ಲಿ ನಿಮ್ಮ ಫೇವರೆಟ್ ಹಾಡು ಯಾವುದು ಕಾಮೆಂಟ್ ಮಾಡಿ ತಿಳಿಸಿ.!

ಸುದ್ದಿ

ನಮಸ್ತೇ ಪ್ರೀತಿಯ ಓದುಗರೇ ನಮ್ಮ ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿವೆ.ಸ್ಯಾಂಡಲ್​ವುಡ್​ನಿಂದ ಬ್ಯಾಕ್​ ಟು ಬ್ಯಾಕ್​ ಒಳ್ಳೊಳ್ಳೆಯ ಚಿತ್ರಗಳು ರಿಲೀಸ್​ ಆಗುತ್ತಿವೆ. ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್​ ರೋಣ’ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಆಗಿದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಇತ್ತೀಚಿಗೆ ಬಿಡುಗಡೆಯದ “ರಾ ರಾ ರಕ್ಕಮ್ಮ” ಹಾಡು ಸಕ್ಕತ್ ಆಗಿ ಮೂಡಿಬಂದಿದೆ.ಈ ಹಾಡಿಗೆ ಅನೇಕ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ರೀಲ್ಸ್​ ಮಾಡಿದ್ದಾರೆ.ಆ ಕಾರಣದಿಂದಲೂ ಈ ಹಾಡು ತುಂಬ ಫೇಮಸ್​ ಆಗಿದೆ.

ಕಿಚ್ಚ ಸುದೀಪ್​ ಅವರು ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಿಂದಿ ಪ್ರೇಕ್ಷಕರನ್ನು ‘ವಿಕ್ರಾಂತ್​ ರೋಣ’ ಸಿನಿಮಾ ವಿಶೇಷವಾಗಿ ಆಕರ್ಷಿಸಲಿದೆ. ಯಾಕೆಂದರೆ ಈ ಸಿನಿಮಾದಲ್ಲಿ ಖ್ಯಾತ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅಭಿನಯಿಸಿದ್ದಾರೆ. ರಕ್ಕಮ್ಮ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ‘ರಾ ರಾ ರಕ್ಕಮ್ಮ..’ ಹಾಡಿನಲ್ಲಿ ಅವರು ಸುದೀಪ್ ಜೊತೆ ಹೆಜ್ಜೆ ಹಾಕಿದ್ದಾರೆ.

ಇನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್​ ಅವತರಣಿಕೆಯಲ್ಲಿ ‘ವಿಕ್ರಾಂತ್​ ರೋಣ’ ಮೂಡಿಬಂದಿದೆ. ಜು.28ರಂದು 3ಡಿ ವರ್ಷನ್​ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್​ ಸೃಷ್ಟಿ ಆಗಿದ್ದು, ವಿದೇಶದಲ್ಲಿ 10 ಕೋಟಿ ರೂಪಾಯಿಗೆ ವಿತರಣೆ ಹಕ್ಕುಗಳು ಮಾರಾಟ ಆಗಿವೆ ಎಂಬುದು ಮೂಲಗಳ ಪ್ರಕಾರ ತಿಳಿದಿರುವುದು ವಿಶೇಷ. ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವುದು ಕಾಣುತ್ತದೆ ಎಂದು ಗಾಂಧಿನಗರ ಪಂಡಿತರು ಲೆಕ್ಕ ಹಾಕಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನೆಮಾದ ‘ಬಸಣ್ಣಿ ಬಾ’ ಹಾಡು ಯೂಟ್ಯೂಬ್ ನಲ್ಲಿ ಧೂಳೆಬ್ವಿಸುತ್ತಿವೆ.ಅಂದಹಾಗೆ ಈ ಸಿನೆಮಾಗೆ ಯೋಗರಾಜ್ ಭಟ್ ಸಾಹಿತ್ಯವಿರುವ, ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ‘ಬಸಣ್ಣಿ ಬಾ’ ಸಿನೆಮಾ ಹಾಡು ಯ್ಯೂಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿದೆ. ಈ ಹಾಡು ಈಗಾಗಲೇ 76 ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನೆಮಾ ಬಿಡುಗಡೆಯಾದ ಎಲ್ಲ ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಪಕ್ಕಾ ನಂದಿ ಬ್ರಾಂಡ್ ನ ದೇಸೀತಳಿಯ ಸಿನೆಮಾ‌ ಇದಾಗಿ ಇಂದಿಗೂ ಬ್ರಾಂಡ್ ಆಗಿ ಉಳಿದಿದೆ.

ಯಜಮಾನ ಚಿತ್ರದ ‘ಬಸಣ್ಣಿ ಬಾ’ ಹಾಗೂ ವಿಕ್ರಂತ್ ರೋಣ ಚಿತ್ರದ ರಾ ‘ರಾ ರುಕ್ಕಮ್ಮ’ ಈ ಎರಡು ಸೂಪರ್ ಹಾಡುಗಳಲ್ಲಿ ನಿಮ್ಮ ನೆಚ್ಚಿನ ಹಾಡು ಯಾವುದು ಕಾಮೆಂಟ್ ಮಾಡಿ ತಿಳಿಸಿ


Leave a Reply

Your email address will not be published. Required fields are marked *