ಕನ್ನಡ ಚಿತ್ರರಂಗದ ಮಹೋನ್ನತ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ, ರವಿ ಬಸ್ರೂರ್ ಸಂಗೀತ ನಿರ್ದೇಶನದ, ‘ಕೆಜಿಎಫ್ ಚಪ್ಟರ್ 2’ ಚಿತ್ರವು ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ ಅಭಿಮಾನಿಗಳಲ್ಲಿ ನೋಡುವ ಕುತೂಹಲ ಹೆಚ್ಚಾಗಿದೆ ಹಾಗಾಗಿ ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಂಖ್ಯೆಯಲ್ಲಿ ಹಾಗೂ ಗಳಿಕೆಯಲ್ಲಿ ದಾಖಲೆ ಸೃಷ್ಟಿಸಲು ವೇದಿಕೆ ಸಜ್ಜಾಗಿದೆ. ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ‘ಕೆಜಿಎಫ್ 2’(KGF 2) ವಿಶ್ವಾದ್ಯಂತ ಸುಮಾರು 7500 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿದೆ. ಇಡೀ ಬಾರತದಲ್ಲಿಯೇ ಅತಿ ಹೆಚ್ಚು 5500 ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಆಂಧ್ರಪ್ರದೇಶ, ತೆಲಂಗಾಣ ಹೊರತಾಗಿ ದೇಶದ ಎಲ್ಲಾ ಕಡೆ ಟಿಕೆಟ್ ಬುಕಿಂಗ್ ಶುರುವಾಗಿದ್ದು, ದಾಖಲೆ ಮಟ್ಟದ ಬುಕಿಂಗ್ ಆಗಿದೆ. ಮೊದಲ ದಿನವೇ ‘ಕೆಜಿಎಫ್ ಚಾಪ್ಟರ್ 2’ ಅಂದಾಜು 250 ಕೋಟಿ ರೂಪಾಯಿಗಳು ಗಳಿಸುವ ಸಾಧ್ಯತೆ ಇದೆ. ಗಾಂಧಿನಗರದ ಪಂಡಿತರು ತಿಲಕ ಹಾಕಿದ್ದಾರೆ. ಅಬ್ಬಬ್ಬಾ
ಕನ್ನಡ ಚಿತ್ರವೊಂದು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನ ಕಾಣುತ್ತಿರುವುದು ಇದೇ ಮೊದಲು. ಅದಲ್ಲದೆ ಗಳಿಕೆಯಲ್ಲೂ ದಾಖಲೆ ಮೇಲೆ ದಾಖಲೆ ಬರೆಯುವುದು ಖಂಡಿತ ಕನ್ನಡ ಸಿನಿಮಾ ‘ಕೆಜಿಎಫ್ ಚಾಪ್ಟರ್ 2’ ಇತಿಹಾಸ ಪುಟ ಸೇರುವ ಸಾಧ್ಯತೆ ಇದೆ. ವಿಶ್ವಾದ್ಯಂತ ‘ಕೆಜಿಎಫ್ ಚಪ್ಟರ್ 2’ ಟಿಕೆಟ್ ಬುಕ್ಕಿಂಗ್ ಆಗುತ್ತಿರುವ ಸ್ಪೀಡ್ ನೋಡಿದರೆ ಮೊದಲ ದಿನದ ಗಳಿಕೆಯಲ್ಲಿ ರಾಜಮೌಳಿ ನಿರ್ದೇಶನದ RRR ಚಿತ್ರವನ್ನು ಮೀರಿಸುವ ಸಾಧ್ಯತೆ ಪಕ್ಕ. ಅಮೆರಿಕದಲ್ಲಿ ಏ.13ರಂದೇ ಪ್ರೀಮಿಯರ್ ಶೋ ಇರಲಿದೆ. ಅಮೆರಿಕ ಒಂದರಲ್ಲೇ 1000ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಕೆಜಿಎಫ್ ಚಪ್ಟರ್ 2 ಬಿಡುಗಡೆಗೊಳ್ಳುತ್ತಿದೆ. ವಿದೇಶಗಳಲ್ಲಿ ತೆಲುಗು ಪ್ರೇಕ್ಷಕರ ಸಂಖ್ಯೆ ಹೆಚ್ಚಿರುವುದರಿಂದ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿದೆ.
ಯುರೋಪಿನ ಬಹುತೇಕ ಕಡೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನಗೊಳ್ಳುತ್ತಿದೆ. ಕೆಲವು ದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಸಿನೆಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಚಪ್ಟರ್ 2 ಪಾತ್ರವಾಗಿದೆ. ಅಮೆರಿಕ-ಬ್ರಿಟನ್ ಗ್ರೀಸ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಪಾಪುವ, ಗಣಿಯ, ಸಿಂಗಾಪುರ, ಜೇರ್ಡನ್, ಫಿಲಿಪೈನ್ಸ್, ಇಸ್ತ್ರೇಲ್, ಸೇರಿದಂತೆ ಹಲವಾರು ದೇಶಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಹವಾ ಸೃಷ್ಟಿ ಸಲಿದ್ದಾರೆ. ಮುಂಬೈನ ಗಲ್ಲಿಗಲ್ಲಿ ಸೇರಿದಂತೆ ಉತ್ತರಭಾರತದಲ್ಲಿ ಕೆಜಿಎಫ್ ಟು ಚಿತ್ರಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಎಲ್ಲಾ ಕಡೆಗಳಲ್ಲಿ ಜನರು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ. ಮುಂಬೈ ಮತ್ತು ಪುಣೆಯಲ್ಲಿ 6:00 ಗಂಟೆಗೆ ಪ್ರದರ್ಶನವಾಗುತ್ತಿದೆ. ಮುಂಚಿತವಾಗಿ ಬುಕಿಂಗ್ ನಲ್ಲಿ ರಾಜಮೌಳಿ ನಿರ್ದೇಶನದ “RRR” ಚಿತ್ರವನ್ನು ಈಗಾಗಲೇ ಹಿಂದಿಕ್ಕಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಲೆಕ್ಕಾಚಾರ ಪ್ರಕಾರ ಹಿಂದಿಯಲ್ಲಿ ಬಿಡುಗಡೆಯಾಗಲಿರುವ ಕೆಜಿಎಫ್ ಚಾಪ್ಟರ್ 2 ಮೊದಲ ದಿನದ ಗಳಿಕೆ 50 ಕೋಟಿ ರೂ. ಗೂ ಮೀರಿ ಗಳಿಕೆ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಪಕ್ಕದ ನಾಡು ತಮಿಳುನಾಡಿನಲ್ಲಿ ದಳಪತಿ ವಿಜಯ್ ಅಭಿನಯದ ಬೆಸ್ಟ್ ಸಿನಿಮಾ ಬಿಡುಗಡೆಯಾಗುತ್ತಿದ್ದು ಕೆಜಿಎಫ್ ಚಾಪ್ಟರ್2 ಗೆ ಬೇಡಿಕೆ ಏನು ಕಡಿಮೆಯಾಗಿಲ್ಲ ಎಂದು ಹಿಡಿ ಗಾಂಧಿನಗರ ಮಾತಾಡುತ್ತದೆ. ರಾಜ್ಯದ ಬೇರೆ ಬೇರೆ ಕಡೆಗಳಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ಟಿಕೆಟ್ ದರ ಕಡಿಮೆ ಇದೆ. ಆಂಧ್ರಪ್ರದೇಶ ತೆಲಂಗಾಣ ಬುಕ್ಕಿಂಗ್ ಇನ್ನೂ ಶುರುವಾಗಿಲ್ಲ. ತೆಲುಗು ಭಾಷೆಯಲ್ಲಿ ಅತಿ ಹೆಚ್ಚು ಕ್ರೇಜ್ ಇರುವುದರಿಂದ ಅತಿ ಹೆಚ್ಚು ಕಲೆಕ್ಷನ್ ಮಾಡುವುದು ಪಕ್ಕ.
ನಮ್ಮ ಕರ್ನಾಟಕದಲ್ಲಿ ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ಬುಕಿಂಗ್ ಶುರುವಾಗಿ ಕೆಲವೇ ನಿಮಿಷಗಳಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್ಫುಲ್ ಆಗಿವೆ. ಕರ್ನಾಟಕದಲ್ಲಿ ಸರಿಸುಮಾರು 550 ಸ್ಕ್ರೀನ್ಗಳು ಸಿನಿಮಾ ಪ್ರದರ್ಶನ ಕಾಣಲಿದ್ದು, ಅನೇಕ ಚಿತ್ರಮಂದಿರಗಳ ಬುಕಿಂಗ್ ಶುರು ಮಾಡಿಕೊಂಡಿದೆ. ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ರಾತ್ರಿ 1 ಗಂಟೆಯಿಂದ ಪ್ರದರ್ಶನ ಗೊಳ್ಳಲಿದೆ, ಆ ಪ್ರದರ್ಶನದ ಎಲ್ಲಾ ಟಿಕೆಟ್ಗಳನ್ನು ಯಶ್ ಅವರ ಅಭಿಮಾನಿಗಳೇ ಕರೆದಿದ್ದಾರೆ ಉಳಿದೆಲ್ಲ ಶೋಗಳು ಅಂದರೆ 3:00 4:00 ಗಂಟೆಗೆ ಶೋ ಇರಲಿದೆ ಸಾವಿರದ ನೂರು ಸೀಟು ಗಳಿರುವ ಬೆಂಗಳೂರಿನ ಊರ್ವಶಿ ಥಿಯೇಟರ್ ನ ಮೊದಲ ಪ್ರದರ್ಶನದ ಟಿಕೆಟ್ ಬುಕಿಂಗ್ ಶುರುವಾಗಿ ಕೆಲವೇ ಕ್ಷಣಗಳಲ್ಲಿ ಖಾಲಿಯಾಗಿವೆ.
ಆ ಪ್ರದರ್ಶನಕ್ಕೆ ಕ್ರಮವಾಗಿ 600 ರೂ 700ರೂ 800 ರೂ ಟಿಕೆಟ್ ದರ ಇದೆ. ಒಟ್ಟಾರೆ ಆ ಪ್ರದರ್ಶನ ಸಂಗ್ರಹ ಒಟ್ಟು ಏಳು ಲಕ್ಷ ರು ದಾಟಿದೆ ಎಂದು ಥಿಯೇಟರ್ನ ಮಾಲೀಕರು ತಿಳಿಸಿದ್ದಾರೆ. ಮೊದಲ ಐದು ಪದ ಪ್ರದರ್ಶನ ಇದೆ. ಕೆಲವು ಕಡೆ ಸಿಂಗಲ್ ಸ್ಕ್ರೀನ್ ಗಳಲ್ಲಿ ಏಳು ಪ್ರದರ್ಶನ ನಿಗದಿಯಾಗಿರುವುದು ಇದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರದ ಮೊದಲ ದಿನದ ಪ್ರದರ್ಶನಕ್ಕೆ ಟಿಕೆಟ್ ದರ ಏರಿಸಲಾಗಿದೆ. ಮುಂಬೈನಲ್ಲಿ ಗರಿಷ್ಠ ಟಿಕೆಟ್ ದರ 1500 ರು. ದೆಹಲಿ ಮತ್ತು ಬೆಂಗಳೂರಿನಲ್ಲಿ ಗರಿಷ್ಠ ದರ 2000ರು. ನಿಗದಿಯಾಗಿದೆ ಈ ಎಲ್ಲಾ ಬೆಳವಣಿಗೆ ಪ್ರಕಾರ ಕೆಜಿಎಫ್ ಚಾಪ್ಟರ್ 2 ಇತಿಹಾಸ ನಿರ್ಮಿಸುವುದು ಪಕ್ಕ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೆಲ್ಲದೆ ದೇಶದ ಪ್ರತಿಯೊಬ್ಬ ಸಿನಿಪ್ರೇಕ್ಷಕರು ಕೂಡ ಕೆಜಿಎಫ್ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ ಇದೇ 14ರಂದು ರಾಜ್ಯದಲ್ಲಿ ಮತ್ತೊಮ್ಮೆ ಸುನಾಮಿಯ ಅಪ್ಪಳಿಸುವುದು ಪಕ್ಕ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಯಾವತರ ಹಬ್ಬ ಮಾಡುತ್ತಾರೆಂದು ಕಾಯುತ್ತಿರುವ ಏನೇ ಆಗಲಿ ಕನ್ನಡ ಚಿತ್ರರಂಗದ ಹೆಮ್ಮೆಯ ವಿಷಯ ಕನ್ನಡ ಚಿತ್ರ ಮತ್ತಷ್ಟು ಬೆಳೆಯಲಿ ಉತ್ತುಂಗ ಮಟ್ಟಕ್ಕೆ ಹೋಗಲಿ ಜೈ ಕನ್ನಡಾಂಬೆ