ಯಾರು ಎದುರುಗಡೆ ಬೇಕಾದರೆ ಸಿಗರೇಟ್ ಸೇದುತ್ತಾರೆ ಡಿ ಬಾಸ್; ಆದರೆ ಇವರ ಮುಂದೆ ಮಾತ್ರ ಯಾವತ್ತೂ ಮಾಡಲ್ಲ..!?

Cinema Entertainment

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಲೆದಾಡುತ್ತಿದ್ದರು. ಆದರೆ ಇಂದು ಕನ್ನಡ ಚಿತ್ರರಂಗದಲ್ಲಿ ದರ್ಶನ್ ರವರ ಕಾಲ್ ಶೀಟ್ ಗಾಗಿ ನಿರ್ಮಾಪಕ ಹಾಗೂ ನಿರ್ದೇಶಕರು ಸಾಲಿನಲ್ಲಿ ನಿಂತಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ಖಳನಟ ರಾಗಿರುವ ತೂಗುದೀಪ ಶ್ರೀನಿವಾಸ ರವರ ಮಗನಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯ ಮೇರೆಗೆ ಇಂದು ಜನಮೆಚ್ಚಿದ ನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಣಿಸಿಕೊಳ್ಳುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಗಳು ಎಂಬುದಾಗಿ ಕರೆಯುತ್ತಾರೆ. ಇದಕ್ಕಾಗಿಯೇ ಅವರಿಗೆ ಕರ್ನಾಟಕ ರಾಜ್ಯದಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ. ಕನ್ನಡ ಚಿತ್ರರಂಗಕ್ಕೆ ಬರುವಂತಹ ಪ್ರತಿಯೊಬ್ಬ ಹೊಸಬರಿಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬೆನ್ನುತಟ್ಟಿ ಪ್ರೋತ್ಸಾಹವನ್ನು ನೀಡುತ್ತಾರೆ.ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಜನ್ಮವನ್ನು ನೀಡಿದಂತಹ ಚಿತ್ರವೆಂದರೆ ಅದು ಮೆಜೆಸ್ಟಿಕ್. ಈಗಾಗಲೇ ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗಿ ಹಲವಾರು ವರ್ಷಗಳೇ ಕಳೆದಿವೆ. ಇತ್ತೀಚಿಗಷ್ಟೇ ಕ್ರಾಂತಿ ಚಿತ್ರದ ಚಿತ್ರೀಕರಣದಲ್ಲಿ ಬಿಡುವಿದ್ದಾಗ ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗಿ 20 ವರ್ಷ ಪೂರ್ಣಗೊಳಿಸಿರುವ ಸಂಭ್ರಮಾಚರಣೆಯನ್ನು ಕೂಡ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಒಂದು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಓಪನ್ ಮನುಷ್ಯ. ಯಾವುದೇ ಮುಚ್ಚುಮರೆ ಗಳನ್ನು ಇಟ್ಟುಕೊಳ್ಳದಂಥ ವ್ಯಕ್ತಿ. ಅವರು ಸಿಗರೇಟ್ ಸೇದುವುದು ನಿಮಗೆಲ್ಲ ಗೊತ್ತೇ ಇದೆ. ವಿಚಾರಗಳ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ತಾಯಿಯ ಎದುರುಗಡೆ ಬೇಕಾದರೂ ಸಿಗರೇಟ್ ಸದುತ್ತಾರೆ ಆದರೆ ಈ ಒಬ್ಬ ವ್ಯಕ್ತಿಯ ಎದುರುಗಡೆ ಸಿಗರೇಟ್ ಸೇದುವುದಿಲ್ಲವಂತೆ. ಹಾಗಿದ್ದರೆ ಆ ವ್ಯಕ್ತಿ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಗೆಳೆಯರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೆಜೆಸ್ಟಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಯಾರ ಪ್ರೋತ್ಸಾಹ ಕೂಡ ದರ್ಶನ್ ರವರ ಬೆನ್ನಹಿಂದೆ ಇರುವುದಿಲ್ಲ. ಆ ಸಂದರ್ಭದಲ್ಲಿ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಾಗಿರುವ ರಾಮಮೂರ್ತಿಯವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಇವರೇ ನಮ್ಮ ಚಿತ್ರದ ನಾಯಕ ನಟ ಎಂಬುದಾಗಿ ಆಯ್ಕೆ ಮಾಡುತ್ತಾರೆ. ಅಂದು ದರ್ಶನ್ ರವರಿಗೆ ಯಾವುದೇ ಫೇಮ್ ಇಲ್ಲದಿದ್ದರೂ ಕೂಡ ನಿರ್ಮಾಪಕ ರಾಮಮೂರ್ತಿಯವರು ದರ್ಶನ್ ರವರನ್ನು ಗುರುತಿಸಿ ಅವರಿಗೆ ಅವಕಾಶವನ್ನು ನೀಡಿದ್ದಕ್ಕಾಗಿ ದರ್ಶನ್ ರವರಿಗೆ ರಾಮಮೂರ್ತಿಯವರ ಮೇಲೆ ಅಪಾರವಾದ ಗೌರವವಿದೆ. ಇದಕ್ಕಾಗಿ ಅವರ ಮುಂದೆ ಬಾಕ್ಸ್ ಆಫೀಸ್ ಸುಲ್ತಾನ್ ಯಾವತ್ತೂ ಕೂಡ ಸಿಗರೇಟ್ ಸೇರುವುದಿಲ್ಲ.
ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರಚಿತಾ ರಾಮ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕ್ರಾಂತಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಹಲವಾರು ಸಿನಿಮಾಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈಯಲ್ಲಿವೆ. ಕ್ರಾಂತಿ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಎನ್ನುವುದು ಕೂಡ ಮತ್ತೊಂದು ಕುತೂಹಲಕರ ವಾಗಿರುವ ವಿಚಾರವಾಗಿದೆ. ಕ್ರಾಂತಿ ಚಿತ್ರ ಶಿಕ್ಷಣದ ಕುರಿತಂತೆ ಸಾಮಾಜಿಕ ಅರಿವನ್ನು ಮೂಡಿಸುವಂತಹ ಚಿತ್ರವಾಗಿದೆ ಎಂಬುದಾಗಿ ತಿಳಿದುಬಂದಿದೆ.


Leave a Reply

Your email address will not be published. Required fields are marked *