ಯಾವ ಸ್ಟಾರ್ ನಟರ ಕೈಯಲ್ಲೂ ಬ್ರೇಕ್ ಮಾಡಲು ಸಾಧ್ಯ ಆಗದ ಅಣ್ಣಾವ್ರ ಆ ಒಂದು ದಾಖಲೆಯನ್ನು, ನಟಿ ಮಾಲಾಶ್ರೀ ಬ್ರೇಕ್ ಮಾಡಿದ್ದರು! ಅದು ಯಾವ ದಾಖಲೆ ತಿಳಿದರೆ ಇಡೀ ಚಿತ್ರರಂಗವೇ ನಡುಗಿ ಹೋಗುತ್ತೆ ನೋಡಿ!

ಸುದ್ದಿ

ನಮ್ಮ ಕನ್ನಡ ಸಿನೆಮಾರಂಗದಲ್ಲಿ ಡಾ. ರಾಜ್ ಕುಮಾರ್ ಅವರ ಹೆಸರು ಕೇಳಿದ ಕೂಡಲೇ ಎಲ್ಲಾ ಕಲಾವಿದರು, ಅಭಿಮಾನಿಗಳು ಎದ್ದು ನಿಂತು ಅವರಿಗೆ ಗೌರವ ಸಲ್ಲಿಸುತ್ತಾರೆ. ದೊಡ್ಮನೆ ಕುಟುಂಬ ಅಂದರೆ ಎಲ್ಲರಿಗೂ ಅಷ್ಟು ಪ್ರೀತಿ ಗೌರವ, ಅವರು ಬದುಕಿದ ರೀತಿ ಹಾಗೂ ತನ್ನ ಮೂವರು ಗಂಡು ಮಕ್ಕಳುನ್ನು ಬೆಳೆಸಿದ ರೀತಿ ಎಲ್ಲರಿಗೂ ಮಾದರಿಯಾಗಿದೆ. ಅಣ್ಣಾವ್ರು ಎಂದರೆ ಸರಳತೆ ಮತ್ತು ವಿನಾಯವಂತಿಕೆ ನೆನಪಾಗುತ್ತದೆ.

ಅವರು ಅಭಿಮಾನಿಗಳ ಜೊತೆ ತಿರುವ ಪ್ರೀತಿ ಅವರ ನಡೆ ಅವರ ನುಡಿ ಅವರ ವಿನಯ ಹಾಗೂ ಸರಳತೆಯಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಸರಿ ಸಾಟಿ ಯಾರೂ ಇಲ್ಲ. ನಮ್ಮ ಕನ್ನಡದ ಸಿನೆಮಾರಂಗಕ್ಕೆ ಅನೇಕ ನಟ ನಟಿಯರನ್ನು ಪರಿಚಯಿಸಿದವರು ಅಣ್ಣಾವ್ರು. ಹೀಗಾಗಿ ಅಣ್ಣಾವ್ರು ಕುಟುಂಬದ ಜೊತೆಗೆ ಸಾಕಷ್ಟು ನಟ ನಟಿಯರು ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ನಮ್ಮ ಚಂದನವನದ ಎವರ್ ಗ್ರೀನ್ ಸೂಪರ್ ಸ್ಟಾರ್ ಈ ನಮ್ಮ ಡಾ. ರಾಜ್ ಕುಮಾರ್. ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ, ರಸಿಕರ ರಾಜ, ಹೀಗೆ ಅನೇಕ ಬಿರುದುಗಳನ್ನು ಅಭಿಮಾನಿಗಳಿಂದ ಅಣ್ಣವ್ರಿಗೆ ಬಂದಿತ್ತು.

ಅಂದು ಅಣ್ಣಾವ್ರ ಹೊಸ ಚಿತ್ರ ಬಿಡುಗಡೆಯಾಗುತ್ತದೆ ಅಂದರೆ ಅಭಿಮಾನಿಗಳು ಊಟ ನಿದ್ದೆ ಇಲ್ಲದೆ ಕಾದು ಕುಲುಯುತ್ತಿದ್ದರು. ಆ ಕಾಲದಲ್ಲಿ ಅಣ್ಣಾವ್ರ ಸಿನೆಮಾಗಳು ಬಿಡುಗಡೆಯಾದರೆ ಚಿತ್ರ ಸೂಪರ್ ಹಿಟ್ ಆಗಿ ಚಿತ್ರಮಂದಿರಗಳಲ್ಲಿ 100 ದಿನ ಪ್ರದರ್ಶನ ಕಾಣುತಿತ್ತು. ಅವರ ಸಿನೆಮಾಗಳ ದಾಖಲೆಗಳನ್ನು ಬ್ರೇಕ್ ಮಾಡುವ ತಾಕತ್ತು ಯಾವ ನಟರಿಗೂ ಇರಲಿಲ್ಲ ಆದರೆ ರಾಜ್ ಕುಮಾರ್ ಅವರ ಆ ಒಂದು ದಾಖಲೆಯನ್ನು ಕನಸಿನ ರಾಣಿ ನಟಿ ಮಾಲಾಶ್ರೀ ಅವರು ಮುರಿದು ಹಾಕಿದ್ದಾರೆ. ಹಾಗಾದರೆ ನಟಿ ಮಾಲಾಶ್ರೀ ಅವರು ಮುರಿದಿರುವ ದಾಖಲೆ ಯುವುದು ನೋಡೋಣ ಬನ್ನಿ.

ಹೌದು ಡಾ. ರಾಜ್ ಕುಮಾರ್ ಅವರಿಗೆ ಕೇವಲ ನಟನೆ ಮಾತ್ರ ಅವರಿಗೆ ಒಲಿದಿರಲಿಲ್ಲ ಕಲೆಯ ಪ್ರತಿಯೊಂದು ಸಮಯದಲ್ಲೂ ನಟ ಕಲದೇವತೆಯನ್ನು ಆರದಿಸುತ್ತಿದ್ದರು. ಇಂಗ್ಲಿಷ್ ಆಗಿರಲಿ, ಹಳೆಗನ್ನಡವೇ ಆಗಿರಲಿ ಎಲ್ಲವನ್ನು ಚನ್ನಾಗಿ ನಿಭಾಯಿಸಿಕೊಂಡು ಯಾರಿಗೂ ನೋವಾಗದ ರೀತಿಯಲ್ಲಿ ಹೋಗುತ್ತಿದ್ದರು. ಆದರೆ ಡಾ. ರಾಜ್ ಕುಮಾರ್ ಕನ್ನಡ ಸಿನೆಮಾಗಳಲ್ಲಿ ಮಾತ್ರ ನಟಿಸಿದ್ದರು. ಪರಭಾಷ ಸಿನೆಮಾಗಳಲ್ಲಿ ನಟಿಸಲು ಅವರಿಗೆ ಸಾಕಷ್ಟು ಅವಕಾಶಗಳು ಬಂದರು ಅವರು ಒಪ್ಪಿಕೊಳ್ಳದೆ ತಿರಸ್ಕರಿಸಿದರು.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಿನೆಮಾಗಳನ್ನು ಕೊಡುಗೆಯಾಗಿ ನೀಡಿರುವ ರಾಜ್ ಕುಮಾರ್ ಅವರು ಇಂದಿಗೂ ಅಭಿಮಾನಿಗಳ ಹಾಗೂ ಜನರ ಮನಸ್ಸಿನಲ್ಲಿ ಜೇವಂತವಾಗಿದ್ದರೆ. ಡಾ. ರಾಜ್ ಕುಮಾರ್ ಅವರ ಸಾಧನೆಗೆ ರಾಷ್ಟ್ರಪ್ರಶಸ್ತಿ, ರಾಜ್ಯ ಫಿಲ್ಮ್ ಫೇರ್ ಪ್ರಶಸ್ತಿ, ಹೀಗೆ ಎಲ್ಲಾ ಪ್ರಶಸ್ತಿಗಳು ಅಣ್ಣವ್ರಿಗೆ ಒಲಿದು ಬಂದಿದೆ. ಇನ್ನು ಡಾ. ರಾಜ್ ಕುಮಾರ್ ಅವರು ಓದಿದ್ದು ಕೇವಲ 3ನೇ ತರಗತಿ. ಆದರೆ ಸುಮಾರು 200ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿ ಅವರನ್ನು ಜೀವಕ್ಕಿಂತ ಹೆಚ್ಚು ಇಷ್ಟ ಪಡುತ್ತಿದ್ದ ಅಭಿಮಾನಿಗಳನ್ನು ದೇವರೆಂದು ಕರೆಯುತ್ತಿದ್ದರು.

ಅದರ ಜೊತೆಗೆ ಮೊದಲ ದಾದಾ ಸಾಹೇಬ್ ಪ್ರಶಸ್ತಿ ಪಡೆದ ಕನ್ನಡದ ನಟ ಎಂದರೆ ಅದು ನಮ್ಮ ನೆಚ್ಚಿನ ನಟ ಡಾ. ರಾಜ್ ಕುಮಾರ್ ಅವರು 1960 ರಿಂದ 70ರ ವರೆಗೂ ಸಿನೆಮಾಗಳನ್ನು ಕನ್ನಡ ಸಿನೆಮಾರಂಗಕ್ಕೆ ಕೊಡುಗೆಯಾಗಿ ಸಿನೆಮಾಗಳನ್ನು ಅಣ್ಣಾವ್ರು ನೀಡಿದ್ದರು. ಆದರೆ ಯಾವ ಸ್ಟಾರ್ ನಟರು ಕೂಡ ಡಾ. ರಾಜ್ ಕುಮಾರ್ ಅವರು ಮಾಡಿರುವಂತಹ ದಾಖಲೆಯನ್ನು ಇಲ್ಲಿಯವರೆಗೂ ಯಾರೂ ಮುರುಯುವ ಪ್ರಯತ್ನಕ್ಕೆ ಕೈ ಹಾಕಲೇ ಇಲ್ಲ.

ಹೌದು, ಡಾ. ರಾಜ್ ಕುಮಾರ್ ಅವರು 1963ರ ಒಂದೇ ವರ್ಷದಲ್ಲಿ ಬರೋಬ್ಬರಿ 15 ಸಿನೆಮಾಗಳನ್ನು ಮಾಡಿ ಅತೀ ದೊಡ್ಡ ಸಾಧನೆಯನ್ನು ಮಾಡಿದ್ದರು. ಆದರೆ ಯಾವ ಸ್ಟಾರ್ ನಟರು ಕೂಡ ಈ ಒಂದು ಸಾಧನೆಯನ್ನು ಮುರಿದೇ ಇಲ್ಲ. ಕನ್ನಡ ಸಿನೆಮಾರಂಗದಲ್ಲಿ ಕನಸಿನ ರಾಣಿಯಾಗಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಮಾಲಾಶ್ರೀ ಅವರು ಒಂದೇ ಒಂದು ವರ್ಷದಲ್ಲಿ 19 ಸಿನೆಮಾಗಳಲ್ಲಿ ನಟಿಸುವ ಮೂಲಕ ಡಾ. ರಾಜ್ ಕುಮಾರ್ ಅವರ ದಾಖಲೆಗಳನ್ನು ಮುರಿದಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *