ರಕ್ಷಕನಾದ ಪೋಲಿಸ್ ಪೇದೆಗೆ ಸಂರಕ್ಷಕ ಹನುಮಂತನ ರೂಪ ನೀಡಿ ಅದ್ಭುತ ಚಿತ್ರ ರಚಿಸಿದ ಕರಣ್ ಆಚಾರ್ಯ. ಎಲ್ಲಿ ಗೊತ್ತಾ..?

ಸುದ್ದಿ

ರಾಜಸ್ಥಾನದ ನೇತ್ರೆಸ್ ಕರೌಲಿಯಲ್ಲಿ ನಡೆದಂತಹ ಹಿಂ ಸಾ ಚಾ ರದ ಘಟನೆ ಸುದ್ದಿಯೊಂದು ಕೆಲವೇ ದಿನಗಳ ಹಿಂದೆ ದೇಶವ್ಯಾಪಿಯಾಗಿ ದೊಡ್ಡ ಸುದ್ದಿಯಾಗಿತ್ತು. ಈ ವೇಳೆ ಸುದ್ದಿಯ ನಡುವೆ ಒಂದು ಸಂದರ್ಭದಲ್ಲಿ ಹಿಂ ಸಾ ಚಾ ರ ನಡೆದಂತಹ ಪ್ರದೇಶದಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮೆರೆದಂಥ ಧೈರ್ಯ ಹಾಗೂ ಸಾಹಸ ಘಟನೆಯೊಂದು ವರದಿಯಾಗಿತ್ತು ಕಾನ್ಸ್ಟೇಬಲ್ ನಿತ್ರೆಸ್ ಶರ್ಮ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ದೊಡ್ಡ ಸದ್ದು ಮಾಡಿದ್ದಲ್ಲದೆ ದೇಶದಲ್ಲೆಡೆ ಮೆಚ್ಚುಗೆಗಳು ಸಹ ಹರಿದುಬಂದಿದ್ದವು.

ರಾಜಸ್ಥಾನದ ಕರೌಲಿಯಲ್ಲಿ ಇಂದು ನೂತನ ಸಂವತ್ಸರದ ಸಂಭ್ರಮದ ವೇಳೆ ಕೋ ಮು ಗ ಲ ಭೆ ಯ ಭುಗಿಲೆದ್ದ ಕಾರಣ ಅದು ತೀವ್ರ ರೂಪಕ್ಕೆ ತಿರುಗಿತ್ತು. ಈ ವೇಳೆಯಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು ಜನರು ಬೆಂಕಿಯಲ್ಲಿ ಸಿಲುಕಿ ಪ್ರಾಣ ರಕ್ಷಣೆಗೆ ಪರದಾಡುತ್ತಿದ್ದರು. ಆಗಲೇ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯರು ಹಾಗೂ ಮಗುಒಂದನ್ನು ರಕ್ಷಿಸಲು ಮುಂದಾಗಿದ್ದ ನೇತ್ರೆಸ್ ಶರ್ಮಾ ಅವರು ಬೆಂಕಿಯ ನಡುವೆಯೇ ಅವರನ್ನು ಕಾಪಾಡಿ, ಮಗುವನ್ನು ಎತ್ತಿಕೊಂಡು ಬರುವಾಗ ಕ್ಯಾಮರಾಗಳು ಅವರ ಈ ಸಾಹಸವನ್ನು ಸೆರೆ ಹಿಡಿದಿದ್ದಾರೆ.

ಹೀಗೆ ವೈರಲ್ ಆದ ಫೋಟೋವನ್ನು ನೋಡಿ ಅಸಂಖ್ಯಾತ ಜನರು ಮೆಚ್ಚುಗೆ ಗಳನ್ನು ಹರಿಸುವಾಗಲೇ ನೆಟ್ಟಿಗರೊಬ್ಬರು ಆಧುನಿಕ ತಂತ್ರಜ್ಞಾನದ ಕಲೆಯ ಜಾದೂಗಾರ ಕರಣ್ ಆಚಾರ್ಯ ಅವರಿಗೆ ಈ ಫೋಟೋ ವನ್ನು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ, ಕರಣ್ ಅವರು, ಈ ಕಾನ್ಸ್ಟೇಬಲ್ ಅವರಿಗೆ ಹೊಗಳಿಕೆ ನೀಡಲೇಬೇಕು, ದಯವಿಟ್ಟು ಈ ಫೋಟೋವನ್ನು ರಕ್ಷಕ ಹನುಮಾನ್ ರೂಪದಲ್ಲಿ ಚಿತ್ರಿಸಿ ಎನ್ನುವ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ನೆಟ್ಟಿಗರೊಬ್ಬರು ಮಾಡಿದ ಮನವಿಗೆ ಸ್ಪಂದಿಸಿದ ಕರಣ್ ಆಚಾರ್ಯ ಅವರು ಸಹಾ ಮನವಿಗೆ ತಕ್ಕ ಹಾಗೆ ಬಹಳ ಅಂದವಾದ ಚಿತ್ರವನ್ನು ರಚನೆ ಮಾಡಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಕನ್ಸ್ ಟೇಬಲ್ ನೇತ್ರೆಸ್ ಅವರನ್ನು ಹನುಮಾನ್ ರೂಪಕ್ಕೆ ಪರಿವರ್ತಿಸಿ ಅದ್ಭುತವಾದ ಒಂದು ಕಲಾಕೃತಿಯನ್ನು ರಚಿಸಿದ್ದು, ಕರಣ್ ಆಚಾರ್ಯ ಅವರು ಈ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನೆಟ್ಟಿಗರು ಕರಣ್ ಆಚಾರ್ಯ ಅವರನ್ನು ಎಂದಿನಂತೆ ನಿಮ್ಮ ಕಲೆ ಹಾಡಿ ಹೊಗಳಿದ್ದಾರೆ. ಇವರ ಕಲೆಗೆ ನಿಮ್ಮ ಮೆಚ್ಚುಗೆ ಹಾಗೂ ಪ್ರೋತ್ಸಾಹ ಇರಲಿ ಒಂದು ಮೆಚ್ಚುಗೆ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *