ರಕ್ಷಿತ್ ಶೆಟ್ಟಿ ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೇಲೆ ಲವ್ ನಿರಾಸೆ ಮಾಡಿದ ರಮ್ಯಾ..!! ಏನಿದು ಬಿಸಿ ಬಿಸಿ ಸುದ್ಧಿ..?

ಸುದ್ದಿ

ನಮ್ಮ ಚಿತ್ರರಂಗದಲ್ಲಿ ಒಂದಲ್ಲ ಒಂದು ಸುದ್ಧಿ ಆಗುತ್ತಲೇ ಇರುತ್ತದೆ ಇದೀಗ ಬಂದ ಬಿಸಿ ಬಿಸಿ ಸುದ್ಧಿ. ಇತ್ತೀಚಿಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಜೊತೆಗೆ ಓಡಾಡುತ್ತಿರುವುದು ನಮ್ಮ ರಕ್ಷಿತ್ ಶೆಟ್ಟಿ ಅವರಿಬ್ಬರ ಓಡಾಡುತ್ತಿರುವುದು ಇಡೀ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಸುದ್ಧಿಯಾಗಿದೆ. ಅಷ್ಟರ ಮಟ್ಟಿಗೆ ಇವರಿಬ್ಬರ ಹೆಸರು ಚಾಲ್ತಿಯಲ್ಲಿದೆ. ನೀವಿಬ್ಬರು ಪ್ರೀತಿಸುತಿದ್ದೀರಾ ಎನ್ನುವುದರಿಂದ ಹಿಡಿದು, ಒಟ್ಟಿಗೆ ಸಿನಿಮಾ ಮಾಡಲಿದ್ದೀರಾ ಎನ್ನುವಲ್ಲಿಗೆ ಗಾಸಿಪ್ ಗಾಂಧಿನಗರದ ತುಂಬಾ ಹಾರಡಿಕೊಂಡಿದೆ.
ಈ ವಿಷಯದ ಕುರಿತು ಸ್ವತಃ ರಕ್ಷಿತ್ ಶೆಟ್ಟಿ ಮಾಧ್ಯಮಒಂದರಲ್ಲಿ ಮಾತನಾಡಿದ್ದಾರೆ. ರಮ್ಯಾ ಮತ್ತು ನನ್ನ ಜೊತೆಗಿನ ಬಾಂಧವ್ಯವನ್ನು ಅವರು ತೆರೆದು ಬಿಚ್ಚಿಟ್ಟಿದ್ದಾರೆ ಕ. ಅಸಲಿಯಾಗಿ ಇದುವರೆಗೂ ರಮ್ಯಾ ಅವರನ್ನು ರಕ್ಷಿತ್ ಶೆಟ್ಟಿ ಮುಖ ಮುಖಿ ಭೇಟಿ ಆಗದೇ ಇದ್ದರೂ, ಕಾಲೇಜು ದಿನಗಳಲ್ಲಿ ರಮ್ಯಾ ಅವರ ಮೇಲೆ ನನಗೆ ಕ್ರಶ್ ಆಗಿತ್ತು ಎನ್ನುವುದನ್ನು ಸ್ವತಃ ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿದ್ದಾರೆ.

ಅಂದು ರಮ್ಯಾ ಹೆಸರಾಂತ ನಟಿ. ಕಾಲೇಜು ದಿನಗಳಲ್ಲಿ ಅವರ ಮೇಲೆ ಕ್ರಶ್ ಆಗಿಯೇ ಆಗುತ್ತದೆ. ಬರೇ ನನಗೆ ಮಾತ್ರ ಅಲ್ಲ ರಮ್ಯಾ ಅವರನ್ನು ನೋಡಿದ ಪ್ರತಿಯೊಬ್ಬ ಗಂಡು ಪ್ರಾಣಿಗೂ ಲವ್ ಆಗಿಯೇ ಆಗುತ್ತೆ. ಹಾಗೆಯೇ ನನಗೂ ಆಗಿತ್ತು. ಅಷ್ಟೇ, ಆದರ ಹೊರತಾಗಿ ಉಳಿದೆಲ್ಲ ಶಬ್ಧ ಕೆಲಸಕ್ಕೆ ಬರದಿದ್ದು ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
ನಾನು ಯಾವುದೇ ಹುಡುಗಿಯ ಜೊತೆಗೆ ಫೋಟೋ ಶೇರ್ ಮಾಡಿದರು ಅದರ ಬಗ್ಗೆ ಕಥೆಕಟ್ಟಿ ಸಂಬಂಧ ಇದೇ ಅಂತ ಗಾಸಿಪ್ ಮಾಡುತ್ತಾರೆ. ಇಂತಹ ಸಿಲ್ಲಿ ವಿಷ್ಯಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ತಲೆ ಕೆಡಿಸಿಕೊಳ್ಳೊಕ್ಕೆ ನನಗೆ ಸಿನಿಮಾ ವಿಷಯ ತುಂಬಾ ಇದೇ ಎಂದು ರಕ್ಷಿತ್ ಶೆಟ್ಟಿ ಹೇಳಿದರು.

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ಜೊತೆಗಿನ ಸಿನಿಮಾದ ಬಗ್ಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ ನನ್ನ ‘ಉಳಿದವರು ಕಂಡಂತೆ’ ಚಿತ್ರದಲ್ಲಿ ರಮ್ಯಾ ಅವರೇ ನಾಯಕಿ ಆಗಬೇಕಿತ್ತು ಅನ್ನುವ ಆಸೆ ನನ್ನದಾಗಿತ್ತು. ಹಾಗಾಗಿ ಕಥೆ ಅವರಿಗೆ ಹೇಳಿದ್ದೆ. ಈ ಚಿತ್ರದ ಕಥೆಯು ನನಗೆ ಅರ್ಥವಾಗಲಿಲ್ಲ ಎಂದು ಅವರು ಒಪ್ಪಿಕೊಳ್ಳಲಿಲ್ಲ. ಮತ್ತೆ ನಾನು ಅವರೊಂದಿಗೆ ಕೆಲಸ ಮಾಡಲಿಲ್ಲ.
ಅವರ ಜೊತೆ ಕೆಲಸ ಮಾಡುವ ಆಸೆಇದೇ ಆದರೆ ಅದು ಸದ್ಯಕ್ಕಲ್ಲ ಎಂದು ಹೇಳಿದ್ದಾರೆ. ಏನೇ ಆಗಲಿ ನಮ್ಮ ಚಿತ್ರರಂಗದಲ್ಲಿ ಇಂತಹ ಕೆಲಸಕ್ಕೆ ಬರದೇ ಇರೋ ಘಟನೆ ತುಂಬಾ ನಡೀತಾ ಇರುತ್ತದೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಅಭಿಮಾನಿಗಳಿಗೆ ಉತ್ತಮವಾದ ಸಿನಿಮಾಗಳನ್ನು ನೀಡಿ ಅನ್ನುವುದೇ ನಮ್ಮ ಆಸೆ ಧನ್ಯವಾದಗಳು.


Leave a Reply

Your email address will not be published. Required fields are marked *