ರಕ್ಷಿತ್ ಶೆಟ್ಟಿ ವಿಜಯ್ ದೇವರಕೊಂಡ ಆಯ್ತು, ಈಗ ಕನ್ನಡ ಚಿತ್ರರಂಗದ ಖ್ಯಾತ ನಟನ ಮಗನನ್ನು ಮದುವೆಯಾಗುತ್ತಿದ್ದಾರಾ ರಶ್ಮಿಕ..!?

Entertainment

ಇತ್ತೀಚಿನ ದಿನಗಳಲ್ಲಿ ಭಾರತ ಚಿತ್ರರಂಗದಲ್ಲಿ ಕೇಳಿಸುತ್ತಿರುವ ದೊಡ್ಡ ಹೆಸರು ಎಂದರೆ ನಮ್ಮ ಕನ್ನಡಮೂಲದ ಕೊಡಗಿನ ಕುಮಾರಿ ಆಗಿರುವ ರಶ್ಮಿಕಾ ಮಂದಣ್ಣ ನವರ ಹೆಸರು. ರಶ್ಮಿಕ ಮಂದಣ್ಣ ಅವರು ಈಗಾಗಲೇ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಬಹುಬೇಡಿಕೆಯ ಹಾಗೂ ಅತ್ಯಂತ ಹೆಚ್ಚು ಜನಪ್ರಿಯರಾಗಿರುವ ನಟಿ ಎಂಬುದು ನಮಗೆಲ್ಲ ತಿಳಿದಿದೆ. ನಿಜಕ್ಕೂ ಕೂಡ ರಶ್ಮಿಕಾ ಮಂದಣ್ಣ ನವರು ಬೆಳೆದುಬಂದಿರುವ ರೀತಿ ನೋಡಿದರೆ ನಮಗೆ ಹೆಮ್ಮೆ ಆಗುತ್ತದೆ. ಆದರೆ ಕನ್ನಡಿಗರಿಗೆ ಅವರ ಮೇಲೆ ಇರುವಂತಹ ಅಭಿಪ್ರಾಯ ನಿಜಕ್ಕೂ ಕೂಡ ಕೆಟ್ಟದ್ದು ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಕೂಡ ರಶ್ಮಿಕ ಮಂದಣ್ಣ ನವರ ಕನ್ನಡ ಹಾಗೂ ಕರ್ನಾಟಕ ಮೇಲಿದ್ದ ನಿರ್ಲಕ್ಷದ ಭಾವ ಎಂದರೆ ತಪ್ಪಾಗಲಾರದು.

ಅದೇನೇ ಇರಲಿ ನಾವು ಈಗ ಮಾತನಾಡಲು ಹೊರಟಿರುವುದನ್ನು ರಶ್ಮಿಕ ಮಂದಣ್ಣ ನವರ ಕುರಿತಂತೆ ಹಾಗಾಗಿ ಕೆಟ್ಟ ವಿಚಾರಗಳನ್ನು ನೆನಪಿಸಿಕೊಳ್ಳುವುದು ಬೇಡ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿ ಈಗ ಪಂಚಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಚಿತ್ರರಂಗದ ನಟಿಯರಲ್ಲಿ ರಶ್ಮಿಕ ಮಂದಣ್ಣ ನವರು ಕೂಡ ಶಾಮಿಲ್ ಆಗುತ್ತಾರೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿರುವ ಪುಷ್ಪ ಚಿತ್ರದ ನಂತರ ರಶ್ಮಿಕ ಮಂದಣ್ಣ ನವರ ಬೇಡಿಕೆ ಎನ್ನುವುದು ಗಗನಕ್ಕೆ ಮುಟ್ಟಿದೆ ಎಂದರೆ ತಪ್ಪಾಗಲಾರದು.

ಇನ್ನು ಸಿನಿಮಾ ರಂಗದಲ್ಲಿ ರಶ್ಮಿಕ ಮಂದಣ್ಣ ಅವರ ಹೆಸರು ಹಲವಾರು ನಟರೊಂದಿಗೆ ಕೇಳಿಬಂದಿತ್ತು ಎಂಬುದು ನಿಮಗೆ ತಿಳಿದಿದೆ. ಮೊದಲಿಗೆ ಕಿರಿಕ್ ಪಾರ್ಟಿ ಸ್ಟಾರ್ ಆಗಿರುವ ರಕ್ಷಿತ್ ಶೆಟ್ಟಿ ರವರ ಜೊತೆಗೆ ನಿಶ್ಚಿತಾರ್ಥ ನಡೆದಿತ್ತು. ಆದರೆ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕ ಮಂದಣ್ಣ ಅರ್ಜುನ್ ರೆಡ್ಡಿ ಸ್ಟಾರ್ ಆಗಿರುವ ವಿಜಯ್ ದೇವರಕೊಂಡ ರವರ ಜೊತೆಗೆ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.

ಅಲ್ಲಿಂದ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ನಡುವಿನ ಕುರಿತಂತೆ ಹಲವಾರು ಗಾಸಿಪ್ಗಳು ಹರಡಲು ಆರಂಭವಾಗುತ್ತದೆ. ಇಬ್ಬರು ಕೂಡ ಪ್ರೀತಿಸುತ್ತಾರೆ ಅತಿಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಗಾಳಿಸುದ್ದಿಯಂತೆ ಹರಡಲು ಆರಂಭವಾಗುತ್ತದೆ. ಈಗಲೂ ಕೂಡ ಇಬ್ಬರು ಹಲವಾರು ಬಾರಿ ಕ್ಯಾಮರ ಕಣ್ಣಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಇದಕ್ಕಾಗಿ ಕುರಿತಂತೆ ಗಾಳಿಸುದ್ದಿಗಳು ಹೆಚ್ಚುತ್ತಿದೆ. ಆದರೆ ಸದ್ಯಕ್ಕೆ ರಶ್ಮಿಕ ಮಂದಣ್ಣ ಸುದ್ದಿಯಾಗುತ್ತಿರುವುದು ಬೇರೆ ವಿಚಾರಕ್ಕಾಗಿ. ಹೌದು ಇತ್ತೀಚೆಗೆ ನಡೆದಿರುವ ಸುದ್ದಿಯ ನಂತರ ರಶ್ಮಿಕ ಮಂದಣ್ಣ ಕನ್ನಡ ಚಿತ್ರರಂಗದ ಖ್ಯಾತ ನಟ ನಮ್ಮ ಮಗನನ್ನು ಮದುವೆಯಾಗುತ್ತಾರಾ ಎಂಬುದಾಗಿ ಕೇಳಿಬರುತ್ತಿದೆ. ಹಾಗಿದ್ದರೆ ಏನಿದು ವಿಚಾರ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಒಂದು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ನವರು ಕೂಡ ಅಲ್ಲಿದ್ದರು. ಇದೇ ಸಮಾರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಮಾತನಾಡುತ್ತಾ ನನ್ನ ಮಗ ಹೋಗುವ ಜಿಮ್ ಗೆ ರಶ್ಮಿಕ ಮಂದಣ್ಣ ಕೂಡ ಬರ್ತಾರಂತೆ. ಅದಕ್ಕೆ ನಾನು ನನ್ನ ಮಗನಿಗೆ ಮದುವೆಯಾಗೋದಲ್ವೇನೋ ಎಂಬುದಾಗಿ ಹೇಳಿದೆ ಎಂಬುದಾಗಿ ಹೇಳಿದ್ದಾರೆ. ಇದು ಕೇವಲ ತಮಾಷೆಯಾಗಿ ಹೇಳಿದ್ದು ಎನ್ನುವುದು ಆ ಸಮಾರಂಭದಲ್ಲಿ ತಿಳಿದುಬಂದಿದೆ. ಈ ಮಾತನ್ನು ಕೇಳಿ ಸ್ವತಹ ನಟಿ ರಶ್ಮಿಕಾ ಮಂದಣ್ಣ ನವರೇ ನಾಚಿ ನೀರಾಗಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

ರಶ್ಮಿಕ ಮಂದಣ್ಣ ಅವರ ಬಗ್ಗೆ ನಮ್ಮದೊಂದು ಚಿಕ್ಕ ಮಾಹಿತಿ ರಶ್ಮಿಕ ಮಂದಣ್ಣ ಅವರು ಮೂಲತಃ ಕೊಡಗಿನವರು ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಈಗ ಕನ್ನಡ ಚಿತ್ರರಂಗವಲ್ಲದೆ ತೆಲುಗು ತಮಿಳು ಹಿಂದಿ ಸಾಕಷ್ಟು ಚಿತ್ರರಂಗದಲ್ಲಿ ಹೆಸರು ಮಾಡಿ ತನ್ನ ಅಭಿನಯದಿಂದ ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ ಇದು ಅವರಿಗೆ ಇರುವ ಒಂದು ಕಲೆ ಹಾಗೆ ಅವರ ಕಲೆ ಮತ್ತಷ್ಟು ಉತ್ತುಂಗ ಮಟ್ಟಕ್ಕೆ ಬೆಳೆಯಲಿ ಎನ್ನುವುದು ನಮ್ಮ ಆಶಯ ಪ್ರತಿ ಚಿತ್ರದಲ್ಲೂ ತನ್ನದೆಯಾದ ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳುತ್ತಿದ್ದಾರೆ.

ರಶ್ಮಿಕ ಮಂದಣ್ಣ ಅವರು ಅಭಿನಯಿಸಿರುವ ಪ್ರತಿಯೊಂದು ಚಿತ್ರ ಕೂಡ ಬಾಕ್ಸಾಫೀಸ್ ನಲ್ಲಿ ಯಶಸ್ವಿಯನ್ನು ಪಡೆದುಕೊಂಡಿದೆ ರಶ್ಮಿಕಾ ಮಂದಣ್ಣ ಅವರ ಅಭಿನಯದ ಪುಷ್ಪ ಚಿತ್ರ ಬಿಡುಗಡೆಯಾಗಿ ದೇಶದಾದ್ಯಂತ ಹಿಟ್ ಆಗಿದೆ ಚಿತ್ರ ನೋಡಿದ ಪ್ರತಿಯೊಬ್ಬರು ಅವರ ಅಭಿನಯದ ಬಗ್ಗೆ ಹೊಗಳಿಕೆ ಮಾತನಾಡುತ್ತಾರೆ ಅವರ ಹೆಸರನ್ನು ಕಂಡು ಸಾಕಷ್ಟು ಜನರು ಅವರ ಕಾಲನ್ನು ಅಳೆಯಲು ನೋಡುತ್ತಿದ್ದಾರೆ ಏನೇ ಆಗಲಿ ನಮ್ಮ ಕನ್ನಡದ ಹುಡುಗಿ ಬೇರೆ ಚಿತ್ರರಂಗದಲ್ಲಿ ಹೋಗಿ ಹೆಸರು ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಅಲ್ಲವೇ ಅವರು ಕೂಡ ಒಂದು ಇಂಟರ್ವ್ಯೂನಲ್ಲಿ ಕನ್ನಡದಲ್ಲಿ ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತವಾಗಿಯೂ ಮಾಡುತ್ತೇನೆ ಅಂತ ಹೇಳಿಕೊಂಡಿದ್ದರು.

ಅವರ ಆಸೆಯಂತೆ ಆದಷ್ಟು ಬೇಗ ಅದು ವಿಡಿಯೋದಲ್ಲಿ ಅನ್ನೋದು ನಮ್ಮ ಆಸೆ ರಶ್ಮಿಕ ಮಂದಣ್ಣ ಅವರು ಪಾರ್ಟಿ ಮೂಲಕ ರಕ್ಷಿತ್ ಶೆಟ್ಟಿ ಯಜಮಾನ ದ ಮೂಲಕ ಡಿ ಬಾಸ್ ದರ್ಶನ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೂಲಕ ಅಂಜನಿಪುತ್ರ ದ್ರುವ ಸರ್ಜಾ ಅವರ ಮೂಲಕ ಪೊಗರು ಎಷ್ಟು ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿ ಯಶಸ್ವಿಗೊಳಿಸಿದ್ದಾರೆ ನಮ್ಮ ಕನ್ನಡದ ಹುಡುಗಿ ಮತ್ತಷ್ಟು ಬೆಳೆಯಲಿ ಅನ್ನೋದು ನಮ್ಮ ಒಂದು ಕೋರಿಕೆ ಇವನ್ನು ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *