ರಚಿತರಾಮ್ ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು; ಗುಳಿಕೆನ್ನೆ ಚೆಲುವೆಯ ಒಟ್ಟು ಆಸ್ತಿ ಎಷ್ಟು..!?

Entertainment

ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಎಲ್ಲರ ನೆಚ್ಚಿನ ನಟಿ ಹಾಗೂ ಬಹುಬೇಡಿಕೆಯ ನಟಿ ಎಂದರೆ ಅದು ಖಂಡಿತವಾಗಿ ಕೇಳಿಬರುವ ಒಂದೇ ಒಂದು ಉತ್ತರವೆಂದರೆ ಡಿಂಪಲ್ ಕ್ವೀನ್ ರಚಿತಾ ರಾಮ್. ರಚಿತಾರಾಮ್ ರವರು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೇರೆಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಮಿಂಚಿ ಮೆರೆದವರು. ಇಂದು ಕನ್ನಡ ಚಿತ್ರರಂಗದಲ್ಲಿ ಅಷ್ಟೊಂದು ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ ಎಂದರೆ ಅದು ಅವರ ಪರಿಶ್ರಮಕ್ಕೆ ಹಿಡಿದಂತಹ ಕೈಗನ್ನಡಿಯಾಗಿದೆ.
ರಚಿತಾ ರಾಮ್ ರವರು ಮೊದಲು ಧಾರವಾಹಿಯಲ್ಲಿ ನಟಿಸುತ್ತಿದ್ದಂತಹ ನಟಿಯಾಗಿದ್ದರು. ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ಬುಲ್ ಚಿತ್ರಕ್ಕಾಗಿ ನಡೆದಂತಹ ಆಡಿಷನ್ ನಲ್ಲಿ ಇನ್ನೂರಕ್ಕೂ ಹೆಚ್ಚಿನ ಹುಡುಗಿಯರಲ್ಲಿ ಆಯ್ಕೆ ಆದಂತಹ ಪ್ರತಿಭಾನ್ವಿತೆ. ಬುಲ್ ಬುಲ್ ಚಿತ್ರದ ಯಶಸ್ಸಿನ ನಂತರ ರಚಿತರಾಮ್ ಕನ್ನಡ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ.
ಒಂದಾದಮೇಲೊಂದರಂತೆ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಈಗಾಗಲೇ ತಮ್ಮ ನಟನೆಗೆ ಹಲವಾರು ಪ್ರಶಸ್ತಿ ಬಿರುದು ಸನ್ಮಾನಗಳನ್ನು ಕೂಡ ಆ ರಚಿತರಾಮ್ ರವರು ಪಡೆದುಕೊಂಡಿದ್ದಾರೆ. ಇನ್ನು ರಚಿತಾರಾಮ್ ರವರ ಬಳಿ ಎಷ್ಟೊಂದು ಆಸ್ತಿ ಇರಬಹುದು ಎನ್ನುವುದಾಗಿ ಹಲವಾರು ಜನರು ಕುತೂಹಲರಾಗಿದ್ದಾರೆ. ಯಾಕೆಂದರೆ ರಚಿತರಾಮ್ ರವರು ಕನ್ನಡ ಚಿತ್ರರಂಗದಲ್ಲಿ ಕಳೆದ ಎಂಟು ವರ್ಷಗಳಿಂದ ಎಡಬಿಡದಂತೆ ನಟಿಸಿಕೊಂಡು ಬಂದಿದ್ದಾರೆ.
ಇನ್ನು ಅವರ ಆಸ್ತಿಯ ಕುರಿತಂತೆ ತಿಳಿಯುವುದಾದರೆ ರಚಿತಾರಾಮ್ ರವರು ಸದ್ಯದ ಮಟ್ಟಿಗೆ ಪ್ರತಿ ಚಿತ್ರಕ್ಕೆ 50 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇನ್ನು ಮನೆ ಕಾರು ಎಲ್ಲವನ್ನು ಸೇರಿ ಒಟ್ಟಾರೆಯಾಗಿ 20 ಕೋಟಿಗೂ ಅಧಿಕ ಆಸ್ತಿಯನ್ನು ರಚಿತರಾಮ್ ರವರು ಹೊಂದಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದೇ ರೀತಿ ರಚಿತರಾಮ್ ರವರಿಗೆ ಹೊಸ ಹೊಸ ಅವಕಾಶಗಳು ಇನ್ನಷ್ಟು ಹುಡುಕಿಕೊಂಡು ಬರಲಿ ಕನ್ನಡ ಪ್ರೇಕ್ಷಕರನ್ನು ರಂಜಿಸುವಂತಹ ಶಕ್ತಿಯನ್ನು ಆ ದೇವರು ಅವರಿಗೆ ನೀಡಲಿ ಎಂದು ಹಾರೈಸೋಣ.


Leave a Reply

Your email address will not be published. Required fields are marked *