ರಮ್ಯಾ ಮಾಡಿದ ಕೆಲಸಕ್ಕೆ ವೇದಿಕೆಯ ಮೇಲೆ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜಕುಮಾರ್..!?

ಸುದ್ದಿ

ನಟಿ ರಮ್ಯಾ ರವರು ನಿಮಗೆಲ್ಲ ಗೊತ್ತಿರುವಂತೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಾಗಿ
ಮೆರೆದವರು. ಇಂದಿಗೂ ಕೂಡ ರಮ್ಯಾರವರು ನಟಿಸಿದ್ದರು ಅವರ ಬೇಡಿಕೆ ಹಾಗೂ ಜನಪ್ರಿಯತೆಯನ್ನು ವುದು ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟಿಯರಿಗಿಂತ ಹೆಚ್ಚಾಗಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ರಮ್ಯಾರವರು ಸಿನಿಮಾ ಬಿಟ್ಟು ಹಲವಾರು ವರ್ಷಗಳು ಕಳೆದಿರಬಹುದು ಆದರೂ ಕೂಡ ಇಂದಿಗೂ ಸೌಂದರ್ಯದಲ್ಲಿ ಯಾವ ಸ್ಟಾರ್ ನಟಿಗೂ ಕೂಡ ಕಡಿಮೆ ಇಲ್ಲದಂತೆ ಇದ್ದಾರೆ. ಅದಕ್ಕೆ ತಾನೆ ಸಿನಿಮಾದಲ್ಲಿ ಕೂಡ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ರಮ್ಯಾರವರಿಗೆ ಲಕ್ಷಾಂತರ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಮ್ಯ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮೊದಲಿನಿಂದಲೂ ಕೂಡ ಆತ್ಮೀಯ ಸ್ನೇಹಿತರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಎರಡನೇ ಸಿನಿಮಾ ವಾಗಿರುವ ಅಭಿ ಸಿನಿಮಾದ ಮೂಲಕ ರಮ್ಯಾರವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಹಲವಾರು ಸಂದರ್ಶನಗಳಲ್ಲಿ ಕೂಡ ನಾನು ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ರಾಜಕುಟುಂಬ ಕಾರಣ ಎಂಬುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಕೂಡ ಪುನೀತ್ ರಾಜಕುಮಾರ್ ಹಾಗೂ ಅವರ ಕುಟುಂಬದ ಜೊತೆಗೆ ರಮ್ಯಾರವರು ಉತ್ತಮ ಸಂಬಂಧವನ್ನು ಹೊಂದಿದ್ದರು. ಅಷ್ಟೇ ಏಕೆ ಅವರು ಪುನೀತ್ ರಾಜಕುಮಾರ್ ಅವರ ನಟನೆಯ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವಂತಹ ಯೋಜನೆಯನ್ನು ರಮ್ಯಾರವರು ಹಾಕಿಕೊಂಡಿದ್ದರು. ಆದರೆ ವಿಧಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.

ಹಲವಾರು ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದ ರಮ್ಯಾರವರು ತಮ್ಮ ಆತ್ಮೀಯ ಸ್ನೇಹಿತನ ಕೊನೆಯ ಸಂಸ್ಕಾರಕ್ಕೆ ಬೆಂಗಳೂರಿಗೆ ಓಡೋಡಿ ಬಂದಿದ್ದರು. ಈ ಸಂದರ್ಭದಲ್ಲಿ ಅಶ್ವಿನಿ ಅವರನ್ನು ಕೂಡ ಸಮಾಧಾನ ಮಾಡಿದ್ದರು. ಇನ್ನು ಇತ್ತೀಚಿಗಷ್ಟೇ ಖಾಸಗಿ ವಾಹಿನಿಯೊಂದು ವರ್ಷದ ಕನ್ನಡಿಗ ಎನ್ನುವ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ನೀಡಿದ್ದು ಈ ಪ್ರಶಸ್ತಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಪ್ರಧಾನ ಮಾಡಲು ರಮ್ಯಾ ರವರನ್ನು ಆಹ್ವಾನಿಸಿತ್ತು. ರಮ್ಯಾರವರು ಕೂಡ ಈ ಕಾರ್ಯ ಕೇಳಿದ ಕ್ಷಣವೇ ಓಡೋಡಿ ಬೆಂಗಳೂರಿಗೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಈ ಪ್ರಶಸ್ತಿಯನ್ನು ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಪ್ಪು ಅವರ ಕುರಿತಂತೆ ಹಲವಾರು ಕ್ಷಣಗಳನ್ನು ನೆನೆದು ಹಾಗೂ ಮಾತುಗಳನ್ನು ಆಡಿ ಭಾವುಕರಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿಡಿಯೋ ಟ್ರಿಬ್ಯೂಟ್ ನೋಡಿ ಕಣ್ಣೀರನ್ನು ಹಾಕಿದ್ದಾರೆ. ಈ ಸಂದರ್ಭದಲ್ಲಿ ರಮ್ಯಾರವರು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಮಾಧಾನ ಮಾಡಿದ್ದಾರೆ. ಇನ್ನು ಅಶ್ವಿನಿ ಅವರು ಕೂಡ ರಮ್ಯಾರವರ ಗೆಳತಿಯನ್ನುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಕೇವಲ ಒಂದು ಪ್ರಶಸ್ತಿ ಸಮಾರಂಭಕ್ಕೆ ವಿದೇಶದಿಂದ ಓಡೋಡಿ ಬಂದಂತಹ ರಮ್ಯಾರವರ ಅಪ್ಪು ಹಾಗೂ ಅಶ್ವಿನಿ ಅವರ ಮೇಲಿನ ಪ್ರೀತಿಯನ್ನು ಇಲ್ಲಿ ನಾವು ನೋಡಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *