ರಯಾನ್ ಸರ್ಜಾ ನನ್ನು ಅಪ್ಪು ಎತ್ತಿಕೊಂಡಿರುವ ಫೋಟೋ ಹಂಚಿಕೊಂಡು ಕಣ್ಣೀರಾದ ಮೇಘನಾ ರಾಜ್ ಹೇಳಿದ್ದೇನು ನೋಡಿ!

ಸುದ್ದಿ

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಮೇಘನಾ ರಾಜ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹತ್ತು ವರ್ಷ ಆಗುತ್ತಿದೆ. ಇಷ್ಟು ವರ್ಷಗಳಲ್ಲಿ ಕನ್ನಡ ಮತ್ತು ಬೇರೆ ಭಾಷೆಗಳಲ್ಲಿ ಅಭಿನಯಿಸಿ ಯಶಸ್ಸು ಪಡೆದಿದ್ದಾರೆ ನಟಿ ಮೇಘನಾರಾಜ್. ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿ ಅವರದೇ ಆದ ಒಂದು ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿ ಯಶಸ್ವಿಯನ್ನು ಪಡೆದಿದ್ದಾರೆ ಮಲಯಾಳಂ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದರು ನಟಿ ಮೇಘನರಾಜ್. ಇಂದಿಗೂ ಮೇಘನಾ ಅವರಿಗೆ ಕೇರಳದಲ್ಲಿ ದೊಡ್ಡ ಅಭಿಮಾನ ಬಳಗ ಇದೆ ಅಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಅವರ ಧರ್ಮ ಪತ್ನಿ ಆಗಿರುವ ಮೇಘನಾರಾಜ್ ಅವರು ಒಂದು ಮಗುವಿನ ತಾಯಾಗಿ ಮಗನೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಮೇಘನಾರಾಜ್ ಅವರು ಅಭಿಮಾನಿಯೊಬ್ಬರು ಮಾಡಿರುವ ಕೆಲಸದಿಂದ ಭಾವುಕರಾಗಿದ್ದಾರೆ. ನಟಿ ಮೇಘನಾ ರಾಜ್ ಕನ್ನಡ ಚಿತ್ರದ ಖ್ಯಾತ ಹಿರಿಯ ಕಲಾವಿದ ದಂಪತಿಗಳಾದ ಸುಂದರ್ ರಾಜ್ ಮತ್ತು ಪ್ರಮೀಳಾ ಸುಂದರ್ ದಂಪತಿಗಳ ಮುದ್ದಿನ ಮಗಳು ಮೇಘನಾ ರಾಜ್ ಮೇಘನಾ ಅವರ ತಾಯಿ ಪ್ರಮೀಳಾ ಕನ್ನಡದ ಮಾತ್ರವಲ್ಲ ತಮಿಳು ಭಾಷೆಗಳಿಗೆ ಒಳ್ಳೆಯ ನಟಿ ಎಂದು ಖ್ಯಾತಿ ಪಡೆದುಕೊಂಡಿದ್ದರು.

ಅವರು ಚಿಕ್ಕವಯಸ್ಸಿನಿಂದಲೂ ಮೇಘನಾ ರಾಜ್ ಅವರ ಕನ್ನಡ ಚಿತ್ರರಂಗದ ಕಲಾವಿದರ ಜೊತೆಯಲ್ಲಿ ಆಡಿ ಬೆಳೆದವರು. ಹಾಗಾಗಿ ಮೇಘನರಾಜ ಅವರಿಗೆ ಚಿತ್ರರಂಗ ಅವರಿಗೆ ಹೊಸದೇ ನಾಗಿರಲಿಲ್ಲ. ಬಾಲನಟಿಯಾಗಿ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದು ಮೇಘನರಾಜ್ ನಂತರ ಮನೆಯವರ ಇಷ್ಟದ ಮೇರೆಗೆ ಓದಿನ ಕಡೆ ಗಮನ ಹರಿಸಿ, ಪದವಿ ಶಿಕ್ಷಣ ಪಡೆದ ಬಳಿಕ, ಕನ್ನಡ ಚಿತ್ರಕ್ಕೆ ನಟನೆಗೆ ಬಂದರು. ಕನ್ನಡ, ತಮಿಳು, ಮಲಯಾಳಂ, ಭಾಷೆಗಳ ನಟಿಸಿ ಅಭಿನಯಿಸಿ ಯಶಸ್ಸು ಪಡೆದವರು ನಟಿ ಮೇಘನಾರಾಜ್

ಕನ್ನಡ ಚಿತ್ರರಂಗದ ಮೆಚ್ಚಿನ ನಟ ಕನ್ನಡದ ಹುಡುಗ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಅವರನ್ನು ಎಂಟು ವರ್ಷಗಳ ಕಾಲ ಪ್ರೀತಿಸಿದರು. ಅವರಿಬ್ಬರು ಜೊತೆಯಾಗಿ ಎರಡು ಮೂರು ಚಿತ್ರಗಳಲ್ಲಿ ನಟಿಸಿದರು. ನಮ್ಮ ಚಂದನವನದ ಕ್ಯೂಟ್ ಜೋಡಿ ಎನಿಸಿಕೊಂಡಿದ್ದರು. ಎರಡು ಕುಟುಂಬದವರನ್ನು ಒಪ್ಪಿಸಿ 2018ರಲ್ಲಿ ಈ ಜೋಡಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಪ್ರಕಾರ ವಿವಾಹವಾದರು.

ಆದರೆ ಮದುವೆಯಾದ ಎರಡು ವರ್ಷಕ್ಕೆ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಅಗಲಿ ದೂರವಾದರೂ. ಇದು ಮೇಘನರಾಜ್ ಹಾಗೂ ಅವರ ಕುಟುಂಬದವರಿಗೂ ಸಹಿಸಲಾಗದ
ನೋವಾಗಿತ್ತು. ಆ ಸಮಯದಲ್ಲಿ ಮೇಘನಾ ರಾಜ್ ಅವರಿಗೆ ಇಡೀ ಕುಟುಂಬ ಹಾಗೂ ಚಿರು ಸರ್ಜಾ ಅವರ ಸ್ನೇಹಿತರು ಹಾಗೂ ಮೇಘನಾ ರಾಜ್ ಅವರ ಸ್ನೇಹಿತರು ಅವರ ಜೊತೆಯಾಗಿದ್ದರು. ಅವರ ಹೊಟ್ಟೆಯಲ್ಲಿದ್ದ ಮಗುವನ್ನು ಕೂಡ ಚಿರು ಇರುವಹಾಗೆ ನೋಡಿಕೊಂಡರು. ಮೇಘನಾ ರಾಜ್ ಅವರ ಇಂದು ನಗುನಗುತಾ ಇದ್ದಾರೆಂದರೆ ಅದಕ್ಕೆ ಕಾರಣ ಅವರ ಕುಟುಂಬ ಹಾಗೂ ಸ್ನೇಹಿತರು.
ಇಂದು ಮೇಘನಾ ರಾಜ್ ಅವರು ಮತ್ತೆ ಅಭಿನಯಿಸಿದ ಶುರುಮಾಡಿದ್ದಾರೆ. ಹಾಗೂ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಜಡ್ಜ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ಮೇಘನರಾಜ್. ಕೆಲವು ಸಿನಿಮಾಗಳಿಗೆ ಅಭಿನಯಿಸಲು ಸಹ ಒಪ್ಪಿಕೊಂಡಿದ್ದಾರೆ ರಿಯಾಲಿಟಿ ಶೋ ಜಡ್ಜ್ ಆಗಿ ಮೇಘನರಾಜ್ ಅವರು ತುಂಬಾ ಚೆನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಜನತೆ ತುಂಬಾ ಇಷ್ಟ ಮೆಚ್ಚಿಕೊಂಡಿದ್ದಾರೆ. ಸ್ಪರ್ಧಿಗಳಿಗೆ ಸಹ ಮೇಘನರಾಜ್ ಫೇವರೆಟ್ ಜಡ್ಜ್ ಆಗಿ ಹೊರಹೊಮ್ಮಿದ್ದಾರೆ.

ಇನ್ನೂ ಅವರ ಮುದ್ದು ಮಗ ರಾಯನ್ ಜೊತೆ ಸಹಾಯ ಹೆಚ್ಚಿನ ಸಮಯ ಕಳೆಯುತ್ತಾ ಸಂತೋಷವಾಗಿದ್ದಾರೆ. ಮಗನ ಮುದ್ದು ಮಾತುಗಳನ್ನು ಈಗ ನನ್ನ ಮನಸ್ಸಿನ ಎಲ್ಲಾ ನೋವುಗಳನ್ನು ದೂರ ಮಾಡುತ್ತಿದೆ ಎಂದು ಮೇಘನರಾಜ ಹೇಳಿಕೊಂಡಿದ್ದಾರೆ. ಆಗಾಗ ಮಗನ ಜೊತೆಗಿರುವ ಫೋಟೋ ಮತ್ತು ವಿಡಿಯೋಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಚಿರು ಸರ್ಜಾ ಅವರ ಅಭಿಮಾನಿಗಳು ಹಲವು ರೀತಿಯ ಫೋಟೋಗಳನ್ನು ಕ್ಲಿಕ್ ಮಾಡಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದರಲ್ಲಿ ಕೆಲವು ಫೋಟೋಗಳು ಪತ್ನಿ ಮೇಘನಾರಾಜ್ ಅವರಿಗೆ ತುಂಬಾ ಇಷ್ಟವಾಗುತ್ತದೆ. ಇತ್ತೀಚಿಗೆ ಅಭಿಮಾನಿಯೊಬ್ಬರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚಿರು ಸರ್ಜಾ ಮತ್ತು ರಾಯನ್ ಮೂವರು ಇರುವಹಾಗೆ ಫೋಟೋವನ್ನು ಎಡಿಟ್ ಮಾಡಿದ್ದರು. ಇದರಲ್ಲಿ ರಾಯನ್ ರನ್ನು ಅಪ್ಪು ಅವರು ಎತ್ತಿಕೊಂಡಿದ್ದು,
ಪಕ್ಕದಲ್ಲಿ ಚಿರು ನಿಂತಿರುವುದು, ಈ ಫೋಟೋ ನೋಡಿ ಮೇಘನಾ ರಾಜ್ ಅವರು ತುಂಬಾ ಭಾವುಕರಾಗಿದ್ದರು, ಚಿರು ಮತ್ತು ಅಪ್ಪು ಸಾರ್ ಇಬ್ಬರನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ಮತ್ತು ಚಿರು ಇಬ್ಬರು ಸಹ ಇಲ್ಲ ಎನ್ನುವ ನೋವು ಜಾಸ್ತಿಯಾಗಿದೆ. ಆದರೆ ಅಭಿಮಾನಿಗಳು ಈ ರೀತಿಯ ಮಾಡುವ ಮೂಲಕ, ನೆನಪುಗಳ ಹಸಿರಾಗಿ ಉಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಿಮಗೆ ನನ್ನ ನಮಸ್ಕಾರಗಳು ನಿಮ್ಮ ಈ ಪ್ರೀತಿ ನಮ್ಮ ಕುಟುಂಬದ ಮೇಲೆ ಹೇಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ.


Leave a Reply

Your email address will not be published. Required fields are marked *