ರವಿಚಂದ್ರನ್ ಮಗನ ಮದುವೆಗೆ ಅತೀ ದುಬಾರಿ ಬೆಲೆಯ ಗಿಫ್ಟ್ ನೀಡಿದ ಹಂಸಲೇಖ! ಗಿಫ್ಟ್ ಬೆಲೆ ಎಷ್ಟು ಕೋಟಿ ಗೊತ್ತಾ ನೋಡಿ.

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಸಿನೆಮಾರಂಗದ ನಟ ಕ್ರೇಜಿ ಸ್ಟಾರ್ ರವಿಚಂದ್ರನ್. ಅಂದಿನ ಕಾಲದಲ್ಲೇ ಸಿನೆಮಾಗಳಲ್ಲಿನ ಹಾಡುಗಳೇ ಇರಲಿ, ಸಿನೆಮಾವೇ ಇರಲಿ, ಹೊಸತನದಿಂದ ವಿಶೇಷತೆಯಿಂದ ಚಿತ್ರವನ್ನು ಜನರಿಗೆ ಕೊಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ಕಾಲದಲ್ಲಿ ಇವರ ಸಿನೆಮಾಗಳು ಆ ಕಾಲಕ್ಕೆ ಹಿಟ್ ಸ್ಥಾನದಲ್ಲಿ ಇವರು ಕೂಡ ಸೇರಿದ್ದರು. ಆ ಕಾಲದಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಅವರ ಕಾಂಬಿನೇಶನ್ ನಲ್ಲಿ ಸಿನೆಮಾ ಬರುತ್ತದೆ ಎಂದರೆ ಚಿತ್ರ ಪ್ರೇಮಿಗಳಿಗೆ ಸಿನೆಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರು.

ಇವರಿಬ್ಬರ ಜುಗಲ್ ಬಂದಿಯಲ್ಲಿ ಬಿಡುಗಡೆಯಗುತ್ತಿದ್ದ ಸಿನೆಮಾಗಳು ಹಾಗೂ ಹಾಡುಗಳು ಸಿನಿಪ್ರೇಕ್ಷಕರನ್ನು ಮೋಡಿಮಾಡಿಸುತ್ತಿತ್ತು. ಇನ್ನು 1988 ರಲ್ಲಿ ಬಿಡುಗಡೆಗೊಂಡ ಅಂಜದಗಂಡು ಸಿನೆಮಾ ರವಿಚಂದ್ರನ್ ಅವರ ಹಿಟ್ ಸಿನೆಮಾಗಳ ಸಾಲಲ್ಲಿ ಸೇರಿಕೊಂಡಿದೆ. ಈ ಸಿನೆಮಾಕ್ಕೆ ಹಂಸಲೇಖ ಅವರು ಸಂಗೀತ ನಿರ್ದೇಶನ ಮಾಡಿದ್ದರು. ಹೀಗೆ ಹಂಸಲೇಖ ಅವರ ಜೊತೆಗೆ ರವಿಚಂದ್ರನ್ ಕುಟುಂಬಕ್ಕೆ ಒಳ್ಳೆಯ ಅಭಿನಭವಾ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವುದು ಮತ್ತೆ ಸಾಬೀತು ಪಡಿಸಿದ್ದಾರೆ.

ಇನ್ನು, ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಆಗಸ್ಟ್ 21ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆಗಸ್ಟ್ 20 ರಂದು ಮನೋರಂಜನ್ ಅವರ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು.

ಈ ಕಾರ್ಯಕ್ರಮವನ್ನು ವಧುವಿನ ಕಡೆಯವರು ಏರ್ಪಡಿಸಿದ್ದರು. ಆಗಸ್ಟ್ 20ಕ್ಕೆ ವಧುವಿನ ಕುಟುಂಬದ ಕಡೆಯಿಂದ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಡೆದಿಟ್ಟು. ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಅವರ ಆಪ್ತರೆನಿಸಿಕೊಂಡಿರುವ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ನಟಿ ಕುಶ್ಭೂ, ಉಮಾಶ್ರೀ, ನಟ ಶರಣ್, ಉಮಾಶ್ರೀ, ಮಾಸ್ಟರ್ ಆನಂದ್, ಗಾಯಕ ಹೇಮಂತ್, ನಿರೂಪಕ ಅಕುಲ್ ಬಾಲಾಜಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖರು ಆಗಮಿಸಿದ್ದರು.

ಆಗಸ್ಟ್ 21 ರಂದು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಮನೋರಂಜನ್. ಆಗಸ್ಟ್ 21 ರಂದು 8.30ರ ಶುಭ ಘಳಿಗೆಯಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತಾ ಎಂಬುವವರನ್ನು ವರಿಸಿದ್ದಾರೆ. ಆಗಸ್ಟ್ 22ಕ್ಕೆ ಚಿತ್ರರಂಗದ ಸ್ನೇಹತರಿಗೆ ಮನೋರಂಜನ್ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯದ ಗಣ್ಯರು ಆಗಮಿಸಿದ್ದರು.

ಈ ಆರತಕ್ಷತೆ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ, ಬಿಸ್ ಯಡಿಯೂರಪ್ಪ, ನಟರಾದ ಯಶ್, ದರ್ಶನ್, ಸುದೀಪ್, ನಟಿಯರಾದ ರಾಧಿಕಾ ಪಂಡಿತ್, ಸುಧಾರಣಿ, ಶ್ರುತಿ, ಹೀಗೆ ಅನೇಕರು ಆಗಮಿಸಿ ಶುಭ ಹಾರೈಸಿದ್ದಾರೆ. ಇನ್ನು ಸಂಗೀತ ನಿರ್ದೇಶಕ ಹಂಸಲೇಖ ಆಗಮಿಸಿ, ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

ಅಷ್ಟೇ ಅಲ್ಲದೆ, ಮದುಮಗನಿಗೆ ವಿಶೇಷ ಹಾಗೂ ದುಬಾರಿ ಬೆಲೆಯ ಉಡುಗೊರೆಯನ್ನು ನೀಡಿದ್ದಾರೆ. ಸದ್ಯಕ್ಕೆ ಹಂಸಲೇಖ ಅವರು ನೀಡಿರುವ ಈ ಉಡುಗೊರೆಯಲ್ಲಿ ದುಬಾರಿ ಬೆಲೆಯ ಒಡವೆ ಇರಬಹುದು ಎನ್ನುವ ಸುದ್ಧಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲೇ ಗಿಟ್ಟಗುತ್ತದೆ ಸ್ನೇಹಿತರೆ ರವಿಚಂದ್ರನ್ ಹಾಗೂ ಹಂಸಲೇಖ ಅವರ ಬಾಂಧವ್ಯ ಎಂತಹದ್ದು ಎನ್ನುವುದಕ್ಕೆ ಇದೇ ಸಾಕ್ಷಿ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *