ರಶ್ಮಿಕಾ ಮಂದಣ್ಣಗೆ 2024 ರಿಂದ ಕಷ್ಟಗಳು ಎದುರಾಗಲಿವೆ:ರಶ್ಮಿಕ ಮಂದಣ್ಣ ಜೀವನದ ಕುರಿತಂತೆ ಶಾಕಿಂಗ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!?

ಸುದ್ದಿ

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಶ್ಮಿಕ ಮಂದಣ್ಣ ಈಗಾಗಲೇ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳಲ್ಲಿ ಇರುವಂತಹ ಎಲ್ಲಾ ಚಿತ್ರರಂಗದಲ್ಲಿ ಕೂಡ ರಶ್ಮಿಕ ಮಂದಣ್ಣ ನವರು ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಯಾವುದೇ ಭಾಷೆಯನ್ನು ತೆಗೆದುಕೊಂಡರೂ ಕೂಡ ಬಹುಬೇಡಿಕೆ ನಟಿಯನ್ನು ಆಯ್ಕೆ ಮಾಡಬೇಕು ಎಂದರೆ ರಶ್ಮಿಕಾ ಮಂದಣ್ಣನ ಅವರ ಮೊದಲ ಆಯ್ಕೆಯಾಗಿರುತ್ತಾರೆ ಎಂದು ಹೇಳಬಹುದಾಗಿದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಕೂಡ ಕಾಲಿಟ್ಟು ಮೊದಲಾದವರೊಂದಿಗೆ ನಟಿಸುತ್ತಿದ್ದಾರೆ ನಮ್ಮೆಲ್ಲರ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ. ಇತ್ತೀಚೆಗಷ್ಟೇ ಅವರ ಜನ್ಮದಿನದ ವಿಶೇಷವಾಗಿ ಎರಡು ಹೊಸ ಚಿತ್ರದ ಘೋಷಣೆ ಕೂಡ ನಡೆದಿತ್ತು. ಹೌದು ತಮಿಳಿನಲ್ಲಿ ತಲಪತಿ ವಿಜಯ್ ಅವರ ಜೊತೆಗೆ ಹಾಗೂ ಹಿಂದಿಯಲ್ಲಿ ರಣಬೀರ್ ಕಪೂರ್ ಅವರ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸುವ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಯಶಸ್ವಿಯಾಗಿರುವ ರಶ್ಮಿಕಾ ಮಂದಣ್ಣ ನವರ ಜೀವನದಲ್ಲಿ ಮುಂದಿನ ವರ್ಷಗಳಲ್ಲಿ ಕೆಟ್ಟದ್ದು ನಡೆಯಲಿದೆ ಎಂಬುದಾಗಿ ಖ್ಯಾತ ಸೆಲೆಬ್ರಿಟಿ ಜ್ಯೋತಿಷ್ಯ ಆಗಿರುವ ವೇಣು ಸ್ವಾಮಿಯವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ರಶ್ಮಿಕ ಮಂದಣ್ಣ ನವರು ಪ್ರತಿಯೊಂದು ವಿಚಾರಗಳನ್ನು ಕೂಡ ವೇಣು ಸ್ವಾಮಿಯವರನ್ನು ಕೇಳಿಕೊಂಡೆ ಮಾಡುತ್ತಿದ್ದರಂತೆ. ಆದರೆ ಯಾವಾಗ ವಿಜಯ್ ದೇವರಕೊಂಡ ರವರ ಜೊತೆಗೆ ರಶ್ಮಿಕ ಮಂದಣ್ಣ ಅವರ ಹೆಸರು ಕೇಳಿಬಂದಿತೋ ಆಗ ವೇಣು ಸ್ವಾಮಿಯವರು ನಿನಗೆ ಮದುವೆ ಪ್ರೀತಿಯಲ್ಲ ಸರಿಯಾಗಿ ಹೊಂದಿ ಬರುವುದಿಲ್ಲ ಆತನನ್ನು ಬಿಟ್ಟುಬಿಡು ಎನ್ನುವುದಾಗಿ ಹೇಳಿದಾಗ ನನ್ನ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದನ್ನು ಬಿಡಿ ಎಂಬುದಾಗಿ ಹೇಳಿ ಮುನಿಸಿಕೊಂಡು ಹೋಗಿದ್ದರಂತೆ.

ಇದನ್ನು ಸ್ವತಹ ವೇಣು ಸ್ವಾಮಿ ಅವರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನೊಂದು ಆಶ್ಚರ್ಯಕರ ಸಂಗತಿಯನ್ನು ವೇಣು ಸ್ವಾಮಿಯವರು ಹಂಚಿಕೊಂಡಿದ್ದಾರೆ. ಅದೇನೆಂದರೆ ಯಶಸ್ಸಿನ ಸಾಗರದಲ್ಲಿ ತೇಲಾಡುತ್ತಿರುವ ರಶ್ಮಿಕಾ ಮಂದಣ್ಣ ನವರಿಗೆ 2024 ರಿಂದ ಕಷ್ಟಗಳು ಆರಂಭವಾಗುತ್ತವೆ ಎಂಬುದಾಗಿ ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು ಅಭಿಮಾನಿಗಳಿಗೆ ಬೇಸರ ಹಾಗೂ ಹತಾಶೆಯನ್ನು ತರಿಸಿದೆ ಎಂದು ಹೇಳಬಹುದಾಗಿದೆ. ಇದರ ಕುರಿತಂತೆ ಮುಂದಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಹಾಗೂ ಇದು ನಿಜವಾಗಿ ನಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಸಾಮಾನ್ಯವಾಗಿ ಇಂದಿನ ಮಾಡರ್ನ್ ಜಗತ್ತಿನಲ್ಲಿ ಜೋತಿಷ್ಯ ಶಾಸ್ತ್ರಗಳನ್ನು ನಂಬುವವರು ಕಡಿಮೆಯಾಗಿದ್ದಾರೆ ಆದರೆ ವೇಣು ಸ್ವಾಮಿಗಳು ಈ ಹಿಂದೆ ಕೂಡ ಸಮಂತ ಹಾಗೂ ನಾಗಚೈತನ್ಯ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ಮೊದಲೇ ಭವಿಷ್ಯವನ್ನು ನುಡಿದಿದ್ದರು. ಅದು ನೂರಕ್ಕೆ ನೂರರಷ್ಟು ನಿಜವಾಗಿತ್ತು ಹೀಗಾಗಿ ಅಂದಿನಿಂದಲೂ ವೇಣು ಸ್ವಾಮಿಯವರ ಹೇಳುತ್ತಿರುವ ಮಾತುಗಳು ಹಲವಾರು ಬಾರಿ ನಿಜ ಆಗಿದ್ದು ಅವರ ಮಾತಿನ ಕುರಿತಂತೆ ಹೆಚ್ಚಿನ ಜನರಿಗೆ ನಂಬಿಕೆ ಇದೆ. ಹಾಗಾಗಿ ಇದು ಕೂಡ ಎಲ್ಲರೂ ಈ ಸಮಯದಲ್ಲಿ ನೆನಪಿಟ್ಟುಕೊಳ್ಳಬೇಕಾಗಿರುವಂತಹ ಅಂಶವಾಗಿದೆ.


Leave a Reply

Your email address will not be published. Required fields are marked *