ರಶ್ಮಿಕಾ ಮಂದಣ್ಣ ಮಾಡದ ಜಾಹೀರಾತಿಲ್ಲ.. ಮಾರದ ಐಟಂಗಳೂ ಉಳಿದಿಲ್ಲ.. ಆದ್ರೆ ರಶ್ಮಿಕಾ ದುಡ್ಡಿಗಾಗಿ ಹೀಗೆಲ್ಲಾ ಮಾಡೋದು ಸರಿನಾ?

Uncategorized ಸುದ್ದಿ

ಚಿತ್ರರಂಗದಲ್ಲಿ ನಟ ನಟಿಯರು ಜನಪ್ರಿಯತೆ ಪಡೆದ ಮೇಲೆ ಅವರು ಕೇವಲ ಸಿನಿಮಾ ರಂಗಕ್ಕೆ ಮಾತ್ರ ಅಲ್ಲದೇ ಬೇರೆ ವಿದಾದ ಬ್ರಾಂಡ್ ಗಳ ರಾಯಭಾರಿಗಳಾಗಿ ಜಾಹಿರಾತುಗಳಲ್ಲಿ ಕಾಣಿಸಿಕೊಂಡು ಅದರಿಂದಲೂ ಸಹಾ ಆದಾಯವನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ ಅನೇಕ ಸಮಯದಲ್ಲಿ ದುಡ್ಡು ಮಾಡುವ ಅವಸರದಲ್ಲಿ ಸಿಕ್ಕ ಸಿಕ್ಕ ಜಾಹಿರಾತುನಲ್ಲಿ ಕಾಣಿಸಿಕೊಂಡಾಗ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹಿಗ್ಗಾ ಮುಗ್ಗ ಟ್ರೋ’ ಲ್ ಮಾಡಲಾಗುತ್ತದೆ.
ಇತ್ತೀಚಿಗೆ ಅಷ್ಟೇ ಕೊಂಡೋಮ್ ಜಾಹಿರಾತುನಲ್ಲಿ ಕಾಣಿಸಿಕೊಂಡ ನಿಧಿ ಅಗರ್ವಾಲ್, ಪಾನ್ ಮಸಾಲಾ ಜಾಹಿರಾತು ನಲ್ಲಿ ಕಾಣಿಸಿಕೊಂಡ ನಟ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಅಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಈಗ ಈ ಇಬ್ಬರ ನಟರ ನಂತರ ಸರದಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರದ್ದಾಗಿದೆ. ಹೌದು ನಟಿ ರಶ್ಮಿಕಾ ಮಂದಣ್ಣ ಕಿಂಗ್ ಫಿಶರ್ ಕಂಪನಿಯ ಮದ್ಯದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು. ನಟಿಯ ಈ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಅವರ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಮತ್ತು ತಮ್ಮ ಅಸಮಾಧಾನವನ್ನು ಹೊರಹಕಿದ್ದಾರೆ ನೆಟ್ಟಿಗರು. ನಟಿ ರಶ್ಮಿಕಾ ಮಂದಣ್ಣ ಹಾಗೂ ಬಾಲಿವುಡ್ ನಟ ವರುಣ್ ಧವನ್ ಈ ಮದ್ಯದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಸಮುದ್ರದ ಪಕ್ಕಾ ಚಿತ್ರಿಕಾರಣ ಮಾಡಲಾಗಿದೆ.

ನಟಿ ರಶ್ಮಿಕಾ ಮಂದಣ್ಣ ಅವರು ಈಗ ಬಹುಭಾಷೆ ನಟಿಯಾಗಿದ್ದು, ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಇರುವ ಇವರು ಇಂತಹ ಜಾಹೀರಾತಿನಲ್ಲಿ ಮಾಡಿದರೆ, ಅವರ ಅಭಿಮಾನಿಗಳು ಸ್ವಲ್ಪ ಜನರದರೂ ಅವರನ್ನು ಹಿಂಬಾಲಿಸುತ್ತಾರೆ. ಎನ್ನುವ ಭ’ಯ ಅನೇಕರನ್ನು ಕಾದಿದ್ದು ಇದೇ ಕಾರಣದಿಂದ ರಶ್ಮಿಕಾ ಮಂದಣ್ಣ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ಸಾಕಷ್ಟು ಜನಪ್ರಿಯಯಾತೆ ಹೊಂದಿರುವ ರಶ್ಮಿಕಾ ಮಂದಣ್ಣ ಹೀಗೆ ಮದ್ಯದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಎಷ್ಟು ಸರಿ? ಎಂದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರೆಶ್ನೆ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ನಂತರ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಈಗಾಗಲೇ ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಅವು ಇನ್ನೇನು ಬಿಡುಗಡೆ ಆಗಬೇಕಿದೆ. ಇನ್ನು ಪ್ರಸ್ತುತ ರಶ್ಮಿಕಾ ಮಂದಣ್ಣ ಹಲವು ಹೊಸ ಚಿತ್ರಗಳಲ್ಲಿ ತೊಡಗಿಕೊಂಡಿದ್ದು. ಬಾಲಿವುಡ್ ನಾಯಕ ರಾಣಬೀರ್ ಕಪೂರ್ ಅವರ ಹೊಸ ಚಿತ್ರ ಅನಿಮಲ್ ನಲ್ಲು ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಮನಾಲಿಯಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ.
ತಮಿಳು ನಟ ವಿಜಯ್ ಅವರ. ಮುಂದಿನ ಚಿತ್ರ ನಾಯಕಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ. ದುಲ್ಕರ್ ಸಲ್ಮಾನ್ ಅವರ ಹೊಸ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಏನೇ ಆಗಲಿ ನಮ್ಮ ಕನ್ನಡದ ಹುಡುಗಿ ಇಷ್ಟು ದೊಡ್ಡ ಮಟ್ಟಿಗೆ ಬೆಳೀತಾರೆ ಅಂದ್ರೆ ಹೆಮ್ಮೆಯ ವಿಷಯ ಅವರು ಸಿನಿಮಾ ರಂಗದಲ್ಲಿ ಇಷ್ಟು ಬ್ಯುಸಿ ಇರುವಾಗ ಇಂತಹ ಜಾಹೀರಾತಿನಲ್ಲಿ ನಟಿಸುವುದು ಬೇಡ ಅನ್ನುವುದು ಅಭಿಮಾನಿಗಳು ಬೇಸರ.

ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *