ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗ್ತೀನಿ ಅಂತ ಹೇಳಿದ್ದು ನಮ್ಮ ರಾಕಿಂಗ್ ಸ್ಟಾರ್ ಯಶ್ ಹೇಳಿದ ಹಾಗೇ ಮಾಡಿದ್ದಾರೆ. ಕೆಜಿಎಫ್ ಚಿತ್ರದಿಂದ ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವ ಹಾಗೇ ಮಾಡಿದ ನಮ್ಮ ಕೆಜಿಎಫ್ ಚಿತ್ರತಂಡ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಫ್ಯಾನ್ ಇಂಡಿಯ ಸ್ಟಾರ್ ಆಗಿ ಕುರುತಿಸಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದಿಂದ ಯಶ್ ಅವರ ಜೀವನ ಶೈಲಿಯೇ ಬದಲಾಗಿದೆ.
ಕೆಜಿಎಫ್ ಹಿಟ್ ಆದ ನಂತರ ಯಶ್ ಅವರ ಮುಂದಿನ ನಡೆ ಏನು ಎಂಬುದು ಎಲ್ಲರಿಗೂ ಸಾಕಷ್ಟು ಕುತೂಹಲ ಕೆರಳಿಸಿದೆ. ಈಗ ಯಶ್ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿ ಹೊರಹೋಮ್ಮಿದ್ದರೆ. ರಾಕಿಂಗ್ ಸ್ಟಾರ್ ಯಶ್ ಅವರು ಸಿನೆಮಾ ರಂಗದಲ್ಲಿ ಸಿಕ್ಕಾಪಟ್ಟೆ ಯಶಸ್ಸು ಪಡೆದ ಯಶ್ ಅವರ ವೈಯಕ್ತಿಕ ಬದುಕಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅವರು ಇಷ್ಟ ಪಟ್ಟು ಮದುವೆಯಾದ ಮುದ್ದಾದ ಹೆಂಡತಿ ಹಾಗೂ ಇಬ್ಬರು ಕ್ಯೂಟ್ ಮಕ್ಕಳಿದ್ದಾರೆ.
ಈ ಸಂಸಾರ ಸುಖ ಸಂಸಾರ ಎಂದು ಎಲ್ಲರೂ ಹೇಳುತ್ತಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು ಒಟ್ಟಾಗಿ ಸಿನಿ ಜರ್ನಿ ಶುರು ಮಾಡಿ ತಮ್ಮ ನಿಜ ಜೀವನದಲ್ಲಿ ಕೂಡ ಒಂದಾಗಿದ್ದರು. ಯಶ್ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಮಗಳ ಹೆಸರು ಐರಾ ಹಾಗೂ ಮಗನ ಹೆಸರು ಯಥಾರ್ವ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ಇವರು ಸಾಕಷ್ಟು ಅಭಿಮಾನಿಗಳು ಇದ್ದಾರೆ.
ದಂಪತಿಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಕ್ಕಳ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಟಿ ರಾಧಿಕಾ ಪಂಡಿತ್ ಮದುವೆ ಆದ ಮೇಲೆ ಬಣ್ಣದ ಲೋಕದಿಂದ ದೂರ ಸರಿದು ಮಕ್ಕಳಾದ ಮೇಲೆ ಅವರ ಲಾಲಾನೇ ಪಾಲನೆಯಲ್ಲಿ ಬ್ಯುಸಿಯಾದರೆ, ಪತಿ ಯಶ್ ಸಿನಿಮಾ ಜಗತ್ತಿನತ್ತ ಗಮನ ಹರಿಸುತ್ತಿದ್ದಾರೆ.
ಸದ್ಯಕ್ಕೆ ಐರಾಳಿಗೆ ಮೂರು ವರ್ಷ ತುಂಬಿದ್ದು. ಮುದ್ದಿನ ಮಗಳು ಐರಾ ಮೂರು ಭಾಷೆಯನ್ನು ಮಾತನಾಡುತ್ತಾಳೆ. ನಟಿ ರಾಧಿಕಾ ಪಂಡಿತ್ ಅವರ ಮಾತೃ ಭಾಷೆ ಕೊಂಕಣಿ, ಹಾಗೂ ಯಶ್ ಅವರ ಮಾತೃ ಭಾಷೆ ಕನ್ನಡ, ಜೊತೆಗೆ ಆಂಗ್ಲ ಭಾಷೆಯನ್ನು ಕಲಿಸಿದ್ದಾರೆ ಯಶ್ ದಂಪತಿಗಳು. ಅಂದಹಾಗೆ ಜನವರಿ 8ರಂದು ಯಶ್ ಅವರ ಹುಟ್ಟಿದ ದಿನವಿತ್ತು. 36 ನೇ ವಸಂತಕ್ಕೆ ಕಾಲಿಟ್ಟ ಯಶ್ ಅವರು ತಮ್ಮ ಕುಟುಂಬದವರ ಜೊತಗೆ ಹುಟ್ಟು ಹಬ್ಬವನ್ನು ಆಚರಿಕೊಂಡಿದ್ದಾರೆ.
ಅಪ್ಪನ ಹುಟ್ಟು ಹಬ್ಬಕ್ಕೆ ಮಗಳು ಐರಾ ಹಾಗೂ ಪುತ್ರ ಯಥಾರ್ವ ಅಪ್ಪನಿಗೆ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ಅಪ್ಪನಿಗೆ ಕೊಟ್ಟ ಉಡುಗೊರೆಯನ್ನು ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೃದಯದ ಚಿತ್ರ ಬರೆದು, ಅದರೊಳಗೆ ಐರಾ ಮತ್ತು ಯಥಾರ್ವ ಅಂಗೈ ಮುದ್ರೆ ಒತ್ತಿದ್ದರು.
ಈ ವಿಡಿಯೋ ನೋಡಿದ ಯಶ್ ರಾಧಿಕಾ ಪಂಡಿತ್ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ಧಿಯಲ್ಲಿ ಇರುವ ಮಗಳು ಐರಾ ಇತ್ತೀಚಿಗಷ್ಟೇ ಅಪ್ಪನ ಸಲಾಂ ರಾಕಿ ಬಾಯ್ ಹಾಡನ್ನು ಹಾಡಿದ್ದಾಳೆ. ಯಶ್ ಮುದ್ದಿನ ಮಗಳ ವಿಡಿಯೋವನ್ನು ಯಶ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮಗಳ ವಿಡಿಯೋ ಹಂಚಿಕೊಂಡ ಯಶ್ ‘ಪ್ರತಿದಿನ ಇದು ಇರಲೇಬೇಕು’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು.
ಹೀಗೆ ಹಲವಾರು ವಿಡಿಯೋ ಹಾಗೂ ಫೋಟೋಗಳನ್ನು ದಂಪತಿಗಳು ಶೇರ್ ಮಾಡುತ್ತಿರುತ್ತಾರೆ. ಇದೆ ತರ ಅವರ ಅಭಿಮಾನಿಗಳಿಗೆ ವಿಡಿಯೋ ಹಾಗೂ ಫೋಟೋಗಳನ್ನು ಅವಗಾವಾಗ ಹಾಕುತ್ತಿರಲಿ ಎಂದು ಅವರ ಅಭಿಮಾನಿಗಳು ಹೇಳುತ್ತಿರುತ್ತಾರೆ. ಐರಾ ಹಾಗೂ ಯಥಾರ್ವ ಈ ಮುದ್ದು ಮಕ್ಕಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು