ಕನ್ನಡ ಚಿತ್ರರಂಗದ ಮಾರ್ಕೆಟ್ ಹಾಗೂ ಗೌರವವನ್ನು ಜಾಗತಿಕವಾಗಿ ಹೆಚ್ಚಿನವರಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಅಗ್ರಗಣ್ಯನಾಗಿ ಕಾಣಿಸಿಕೊಳ್ಳುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಚಿತ್ರರಂಗಕ್ಕೆ ಯಾವುದೇ ಶಿಫಾರಸು ಇಲ್ಲದ ತಮ್ಮ ಸ್ವಂತ ಪರಿಶ್ರಮದ ಮೂಲಕ ಬಂದವರು. ಅಂದು ಸಿನೆಮಾಗಳಿಗಾಗಿ ಅಲೆದಾಡುತ್ತಿದ್ದರು ಆದರೆ ಇಂದು ಸಿನಿಮಾಗಳ ನಿರ್ಮಾಪಕರು ನಮ್ಮ ಜೊತೆಗೆ ಒಂದು ಸಿನಿಮಾ ಮಾಡಿ ಎಂಬುದಾಗಿ ರಾಕಿಂಗ್ ಸ್ಟಾರ್ ಯಶ್ ರವರ ಮನೆಯ ಮುಂದೆ ಸಾಲಾಗಿ ನಿಂತಿದ್ದಾರೆ. ನಿಜಕ್ಕೂ ಕೂಡ ರಾಕಿಂಗ್ ಸ್ಟಾರ್ ಯಶ್ ರವರು ಬೆಳೆದುಬಂದಿರುವ ಹಾದಿ ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿ. ಒಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಲಗಿದ್ದರು ಇಂದು ಮೆಜೆಸ್ಟಿಕ್ನಲ್ಲಿ ಅವರ ನೂರಡಿ ಕಟೌಟ್ ಎದ್ದು ನಿಂತಿರುತ್ತದೆ.
ರಾಕಿಂಗ್ ಸ್ಟಾರ್ ಯಶ್ ರವರು ಸಿನಿಮಾಗೂ ಬರುವುದಕ್ಕಿಂತ ಮುಂಚೆ ಕಿರುತೆರೆಯ ಧಾರವಾಹಿಯಲ್ಲಿ ಕಾಣಿಸಿಕೊಂಡವರು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ-ನಿರ್ದೇಶಕರು ಅವಮಾನಗಳನ್ನು ಸಹಿಸಿಕೊಂಡು ರಾಕಿ ಬಾಯ್ ಆಗಿ ನಿಂತವರು. ಇನ್ನು ರಾಕಿಂಗ್ ಸ್ಟಾರ್ ಯಶ್ ರವರ ಸಿನಿಮಾ ಜೀವನದಲ್ಲಿ ಕೆಜಿಎಫ್ ಚಾಪ್ಟರ್ 1 ಹಾಗೂ 2 ಖಂಡಿತವಾಗಿ ಸಾಧನೆಯ ಮೈಲಿಗಲ್ಲಾಗಿದೆ. ಈಗಾಗಲೇ ಮೊದಲ ಭಾಗದಿಂದ ಆಗಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಹೆಸರನ್ನು ಸ್ಥಾಪಿಸಿರುವ ರಾಕಿಂಗ್ ಸ್ಟಾರ್ ಯಶ್ ರವರು ಇದೇ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್ 2 ಮೂಲಕ ಕನ್ನಡ ನಿಜವಾದ ತಾಕತ್ತನ್ನು ತೋರಿಸಲು ಹೊರಟಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ನಿಜಕ್ಕೂ ಕೂಡ ಈ ಚಿತ್ರ ಜಾಗತಿಕವಾಗಿ ದೊಡ್ಡಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಾಗಿ ಸಿನಿಮಾ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ.
ಎಲ್ಲದಕ್ಕಿಂತ ಹೆಚ್ಚಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ಜಾಗತಿಕವಾಗಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ದಾಟುತ್ತದೆ ಎಂಬುದಾಗಿ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಯಶ್ ಅವರನ್ನು ಹೊರತುಪಡಿಸಿ ರವೀನ ತಂಡನ್ ಸಂಜಯ್ ದತ್ ಶ್ರೀನಿಧಿ ಶೆಟ್ಟಿ ಹೀಗೆ ಹಲವಾರು ತಾರಾಗಣವೇ ಇದೆ. ಖಂಡಿತವಾಗಿ ಈ ಬಾರಿ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣಲಿದೆ ಏಕೆಂದರೆ ಕನ್ನಡಿಗರಿಗಿಂತ ಹೆಚ್ಚಾಗಿ ಪರಭಾಷಿಕರಿಗೆ ನಮ್ಮ ಹೆಮ್ಮೆಯ ಚಿತ್ರದ ಕುರಿತಂತೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಕಾರಣಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರ ಸೂಪರ್ ಹಿ’ಟ್ ಆಗುತ್ತದೆ ಎನ್ನುವ ಊಹಿಸಲಾಗಿದೆ.
ಇನ್ನು ಇತ್ತೀಚೆಗೆಷ್ಟೇ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಧರಿಸಿರುವ ವಾಚ್ ಕುರಿತಂತೆ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಹೌದು ಈ ವಾಚ್ ಬೆಲೆ ಬರೋಬ್ಬರಿ 3.50 ಕೋಟಿ ರೂಪಾಯಿ. ಒಂದು ಸಿನಿಮಾವನ್ನೇ ಮಾಡಬಲ್ಲಂತಹ ಬೆಲೆ ಈ ವಾಚ್ ಗೆ ಇದೆ. ಇನ್ನು ಇದರ ಬೆಲ್ಟನ್ನು ಮೊಸಳೆಯ ಚರ್ಮದಿಂದ ಮಾಡಲಾಗಿದೆ. ಹಲವಾರು ಶತಮಾನಗಳ ಇತಿಹಾಸ ಇರುವ ಈ ವಾಚ್ ಭಾರತದಲ್ಲಿ ಕೇವಲ ಕೆಲವೇ ಕೆಲವು ಮಂದಿ ಬಳಿ ಇದೆ. ಅವರಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಕೂಡ ಒಬ್ಬರು. ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಅತ್ಯದ್ಭುತ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ.