ರಾಕಿಭಾಯ್ ಘರ್ಜನೆಗೆ ಹೆದರಿ ಓಡಿದ ಮಗ ಯಥಾರ್ವ! ವಿಡಿಯೋ ಸಿಕ್ಕಾಪಟ್ಟೆ ವೈರಲ್

ಸುದ್ದಿ

ಕನ್ನಡದ ಹೆಮ್ಮೆಯ ಕೆಜಿಎಫ್ ಚಿತ್ರದಿಂದ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಯಶಸ್ಸಿನ ನಾಗಲೋಟದಲ್ಲೂ ತೆಲಾಡುತ್ತಿದ್ದಾರೆ, ತಮ್ಮ ಕೆಲಸ ದಿಂದ ಕೊಂಚ ಬಿಡುವು ಮಾಡಿಕೊಂಡು ತಮ್ಮ ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ದಾಖಲೆ ಮಟ್ಟದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಕನ್ನಡ ಸೇರಿದಂತೆ ಎಲ್ಲಾ ಸಿನಿಮಾ ಕ್ಷೇತ್ರದಲ್ಲೂ ರಾಕಿ ಭಾಯ್ ಹವಾ ಜೋರಾಗಿಯೇ ಇದೇ ಇದರಿಂದ ಚಿತ್ರತಂಡ ಹಾಗೂ ರಾಕಿ ಭಾಯ್ ಸಕ್ಕತ್ ಖುಷಿ ಮೂಡನಲ್ಲಿ ಇದ್ದಾರೆ.

ನಿನ್ನೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಯಶ್ ಅವರ ತಮ್ಮ ಮುದ್ದು ಮಕ್ಕಳಾದ ಐರಾ ಹಾಗೂ ಯಥಾರ್ವ ಜೊತೆ ಸಮಯ ಕೆಳೆಯುತ್ತಿದ್ದಾರೆ ಯಥಾರ್ವ ಅಪ್ಪನಿಗೆ ಐ ಲವ್ ಯೂ ಹೇಳಿ ನಾನು ದೈತ್ಯ ಡೈನೋಸರ್ ಎಂದು ಮುದ್ದಾಗಿ ಕಿರುಚುತ್ತಾನೆ. ಆಗ ಅಪ್ಪ ಯಶ್ ನಾನು ಈಗ ಹುಲಿಯಾಗುದನ್ನು ನೋಡು ಎಂದು ಗುರ್ಜಿಸಿದಾಗ ಯಥಾರ್ವ ಅಲ್ಲಿಂದ ಹೆದರಿ ಓಡಿ ಹೋಗುತ್ತಾನೆ. ಬಳಿಕ ಯಶ್ ಅಲ್ಲಿಯೇ ಇದ್ದ ಮಗಳನ್ನು ತಬ್ಬಿಕೊಂಡು ಗಣೇಶಾ ಓಡಿ ಹೋದ ಮಗಳೇ ಎಂದು ಮಗಳನ್ನು ಮುದ್ದು ಮಾಡುತ್ತಾರೆ.

ಬಾಲಿವುಡ್ ಬಾಕ್ಸ್ಅಫೀಕ್ಸ್ ನ ಅಡ್ಡದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಚಿತ್ರವನ್ನೇ ಹಿಂದಕ್ಕೆ ಹಾಕಿ ಯಶ್ ಅಭಿನಯದ ಕೆಜಿಎಫ್ ಸಿನಿಮಾ, ಯಶಸ್ವಿಯಾಗಿ ಬಾಕ್ಸ್ಅಫೀಸ್ ನಲ್ಲಿ ಕೊಳ್ಳೆ ಹಿಡೆಯುತ್ತಿದೆ. ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ ಚಿತ್ರಕ್ಕೆ ದೇಶದ ಎಲ್ಲಾ ಕಡೆಯಿಂದ ಮೆಚ್ಚುಗೆಯಾ ಮಹಾಪೊರವೆ ಹರಿದು ಬರುತ್ತಿದೆ. ಈಗಾಗಲೇ ಕೆಜಿಎಫ್ ಚಾಪ್ಟರ್ 2 ವರ್ಲ್ಡ್ ವೈಡ್ ಒಟ್ಟು ಕಲೆಕ್ಷನ್ 1200 ಕೋಟಿ ಗು ಅಧಿಕ ಬಾಚಿಕೊಂಡಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಇನ್ನು ಕೆಜಿಎಫ್ 2 ಚಿತ್ರ ತಾಯಿಯ ಸೆಂಟಿಮೆಂಟ್ ಕಥೆಯ ಜೊತೆಗೆ ಚಿತ್ರದ ಪ್ರತಿಯೊಬ್ಬ ಕಲಾವಿದನ ನಟನೆ, ನಿರ್ದೇಶನ, ಭುವನ್ ಗೌಡ ಅವರ ಛಾಯಾಗ್ರಾಹನ, ರವಿ ಬಸ್ರುರ್ ಅವರ ಸಂಗೀತ ಇವುಯಲ್ಲವೂ ಸೇರಿ ಕೆಜಿಎಫ್ ಚಾಪ್ಟರ್ 2 ಈ ವರ್ಷದ ಟಾಪ್ no1 ಚಿತ್ರವಾಗಿ ಹೊರಹೋಮ್ಮಿದೆ.
ಇನ್ನು ಕೆಜಿಎಫ್ 2 ನೋಡಿದ್ಮೇಲೆ ಚಾಪ್ಟರ್ 3 ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ನಮ್ಮ ಕನ್ನಡ ಸಿನಿಮಾ ಇಷ್ಟು ದೊಡ್ಡ ಮಟ್ಟಿಗೆ ಹೋಗುತ್ತದೆ ಅಂದರೆ ಇದು ನಮಗೆ ಹೆಮ್ಮೆಯ ವಿಷಯ ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತನ್ನು ಉಳಿಸಿಕೊಂಡಿದ್ದಾರೆ. ನೀವು ಕೆಜಿಎಫ್ ಚಾಪ್ಟರ್ 2 ನೋಡಿದ್ದರೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *