ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ದೊಡ್ಮನೆ ಕುಟುಂಬ ಹಾಗೂ ಇಡೀ ಕರ್ನಾಟಕವೇ ಬಾಡಿ ಹೋಗಿದೆ. ಅಪ್ಪು ಇಲ್ಲದ ದಿನಗಳು ಕ್ಷಣಗಳು ಕಳೆಯಲು ಯಾರಿಂದಲೂ ಸಾಧ್ಯವಿಲ್ಲ ಬರೇ ನೋವುಗಳು ಮಾತ್ರ ಕಡಿಮೆಯಾಗಿಲ್ಲ. ಅಣ್ಣ ರಾಘಣ್ಣ ಅವರು ತಮ್ಮ ಅಪ್ಪು ಇಲ್ಲ ಎಂದು ತಿಳಿದಾಗ ತುಂಬಾ ಕುಗ್ಗಿ ಹೋಗಿದ್ದರು.
ಪ್ರತಿ ಒಂದು ಕಾರ್ಯಕ್ರಮದಲ್ಲೂ ರಾಘಣ್ಣ ಮಾತನಾಡುವಾಗ ಅಪ್ಪು ನೆನೆದು ತಮ್ಮ ಮನಸ್ಸಿನ ನೋವನ್ನು ಬದಿಗಿಟ್ಟು ಅಪ್ಪು ಅಭಿಮಾನಿಗಳಿಗೆ ಸಮಾದಾನ ಹೇಳುವ ಪ್ರಯತ್ನ ಮಾಡುತ್ತಿದ್ದರು. ಕಳೆದ ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದ ದಿನವೇ ಜೇಮ್ಸ್ ಸಿನಿಮಾ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿತು. ಅದಕ್ಕೂ ಮೊದಲು ಜೇಮ್ಸ್ ಚಿತ್ರದ ಫ್ರೀ ಇವೆಂಟ್ ನಲ್ಲಿ ರಾಘಣ್ಣ ಹಾಗೂ ಶಿವಣ್ಣ ಕಣ್ಣೀರು ಹಾಕುವ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣಲ್ಲಿ ನೀರು ತುಂಬಿತ್ತು.
ಮಾರ್ಚ್ 17 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿತ್ತು. ಆ ವೇಳೆ ವೇದಿಕೆ ಮೇಲೆ ಬಂದು ಮಾತನಾಡಲು ಶುರು ಮಾಡಿದ ರಾಘಣ್ಣ “ಈ ಕ್ಷಣ ದಲ್ಲಿ ನನಗೇ ಏನೇನಿಸುತ್ತದಯೋ ಹಾಗೇ ಮಾತುಗಳನ್ನು ಆಡುತ್ತೇನೆ. ನಾನು ಮಾತನಾಡುವಾಗ ಎಮೋಷನಲ್ ಆಗಬಾರದು ಅಂತ ಅಂದುಕೊಳ್ಳುತ್ತೇನೆ. ಆದರೆ ನನಗೆ ಅದು ಅಸಾಧ್ಯ.
ಆ ದೇವರು ಚನ್ನಾಗಿ ಓಡುತ್ತಿದ್ದ ಗಾಡಿ ನಿಲ್ಲಿಸಿದ್ಯಾಕೆ? ನಂಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಸ್ಟ್ರೋಕ್ ಆಗಿತ್ತು. ಆದರೂ ನಾನು ಇದ್ದೇನೆ. ಇನ್ನು ಮುಂದೆ ನನ್ನಿಂದ ಆಗುದಿಲ್ಲ. ಹುಡುಕಿಕೊಂಡು ಹೋಗುತ್ತೇನೆ ” ಎಂದು ರಾಘಣ್ಣ ಭಾವುಕರಾದರು. ಅಂದು ರಾಘಣ್ಣ ಆಡಿದ ಮಾತುಗಳನ್ನು ಕೇಳಿ ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತರು. ಆ ಸಮಯದಲ್ಲಿ ವೇದಿಕೆ ಮೇಲೆ ಬಂದ ಶಿವಣ್ಣ ರಾಘಣ್ಣನನ್ನು ತಬ್ಬಿಕೊಂಡು ಕಣ್ಣೀರಿಡುತ್ತ ತಮ್ಮ ರಾಘಣ್ಣನನ್ನು ಸಮಾಧಾನ ಪಡಿಸಿದರು.
ಆ ನೋವಿನ ನಡುವೆಯೂ ತಾವೇ ಸಮಾಧಾನ ಮಾಡಿಕೊಳ್ಳುತ್ತಾ ಮತ್ತೆ ಮಾತನ್ನು ಶುರು ಮಾಡಿದ ರಾಘಣ್ಣ “ಭಾವುಕನಾಗಿ ಹೀಗೆ ಹೇಳಿದೆ. ನೀಮ್ಮನೆಲ್ಲ ಬಿಟ್ಟು ನಾನೆಲ್ಲಿ ಹೋಗಲಿ. ಇಲ್ಲೇ ಇರುತ್ತೇನೆ ” ಎಂದು ಹೇಳಿದರು. ಆದೇ ವೇದಿಕೆಯ ಮೇಲೆ ಮಾತನಾಡಿದ ಶಿವಣ್ಣ “ರಘು ಮಾತನಾಡಿದ್ದು ನನಗೆ ತುಂಬಾ ನೋವಾಯಿತು. ಇವರಿಬ್ಬರು ನನಗಿಂತ ಚಿಕ್ಕವರು. ನಾನು ಹೇಗೆ ಇದನೆಲ್ಲ ನೋಡುತ್ತಾ ಇರಬೇಕು? ಹೊರಗಿನಿಂದ ನೋಡುವುದಕ್ಕೆ ನಗುತ್ತಾ ಇರುತ್ತೇವೆ.
ಆದರೆ ನನಗೆ ಮನಸ್ಸಿಗೆ ತುಂಬಾ ನೋವಾಗಿದೆ. ಅಪ್ಪ ಅಮ್ಮನ ಜೊತೆಗೆ ಚಿಕ್ಕವನು ಹೋಗಿದ್ದು ಬಹಳ ನೋವು ತಂದಿದೆ. ಆದರೆ ಇಂತಹ ತಮ್ಮನನು ನಾನು ಪಡೆಯಲು ತುಂಬಾ ಪುಣ್ಯ ಮಾಡಿದ್ದೆವು. ಅಪ್ಪು ಜೊತೆಗೆ ನಟಿಸೋ ಆಸೆ ಇತ್ತು. ಅದು ಸಾಧ್ಯವಾಗಲಿಲ್ಲ. ಸ್ಕ್ರಿಪ್ಟ್ ಕೂಡ ಕೇಳಿದ್ದೆವು ಎಂದು ಹೇಳಿದ್ದಾರೆ ಶಿವಣ್ಣ.
ಅಪ್ಪು ಅವರ ಕನಸಿನ ಕೂಸು ಶಕ್ತಿಧಮಕ್ಕೆ ಬಜ್ಜೆಟ್ ನಲ್ಲಿ ಅನುದಾನ ಘೋಷಿಸಿದ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಸರ್ ಅವರಗೆ ಶಿವಣ್ಣ ಧನ್ಯವಾದ ತಿಳಿಸಿದರು. ಅಪ್ಪು ಆಗಲುವಿಕೆಯ ನೋವನ್ನು ಮರೆಯಲಾಗದೆ ದಿನಾಲೂ ತಮ್ಮನ ಸಮಾಧಿ ಬಳಿ ಬಂದು ಕಾಲ ಕಳೆದು ಹೋಗುತ್ತಿದ್ದರು.
ಆದರೆ ಇದೀಗ ರಾಘಣ್ಣ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ವಿಚಿತ್ರ ಘುಟನೆಯೊಂದು ನಡೆದುಹೋಗಿದೆ. ನಿಜ, ರಾಘಣ್ಣ ಮಲಗಿದ್ದ ವೇಳೆ ಅಪ್ಪು ಸಾಕಿದ ಶ್ವನಾಒಂದು ಅವರ ಕಾಲಿನ ಬಳಿ ಬಂದು ಕುಳಿತು ಕೊಂಡಿದೆ. ಅಷ್ಟೇ ಅಲ್ಲದೇ ಆ ಶ್ವನಾ ಟೇಬಲ್ ಮೇಲೆ ಇಟ್ಟಿದ್ದ ಅಪ್ಪು ಫೋಟೋವನ್ನು ಬಾಯಲ್ಲಿ ಕಚ್ಚಿಕೊಂಡು ಬಂದು ರಾಘಣ್ಣನವರ ಕಾಲ ಮೇಲೆ ಮಲಗಿದೆ. ಆ ಘಟನೆಯನ್ನು ನೋಡಿ ರಾಘಣ್ಣ ನವರು ಕಣ್ಣೀರು ಹಾಕಿದ್ದಾರೆ. ಈ ಮುಖ ಪ್ರಾಣಿಗಳು ಇಷ್ಟ ಪಡುವ ನನ್ನ ತಮ್ಮನನ್ನು ಯಾಕೆ ಕಿತ್ತುಕೊಂಡೆ ದೇವರೇ.
ಅವನ ಬದಲು ನನ್ನಾದರೂ ಕರೆದುಕೊಂಡು ಹೋಗಬಾರದಿತ್ತಾ ಎಂದು ಅಪ್ಪು ನೆನೆದು ಅತ್ತರು ರಾಘಣ್ಣ. ಈ ಸುದ್ದಿ ಕೇಳಿ ಶಿವಣ್ಣ ಕೂಡ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರಿಗೂ ಮರೆಯಲು ಸಾಧ್ಯವಿಲ್ಲ ಅವರು ಮಾಡಿರುವ ಅದೆಷ್ಟೋ ದೇವರು ಮೆಚ್ಚುವಂತ ಕೆಲಸ ಅದೆಷ್ಟೋ ಬಡ ಜನರಿಗೆ ಸಹಾಯ ಹಸ್ತವಾಗಿ ನಮ್ಮ ಅಪ್ಪು ಅವರು ಅಭಿಮಾನಿಗಳಿಗೆ ದೇವರಾಗಿದ್ದಾರೆ. ಅಪ್ಪು ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು