ರಾಜ್ ಕುಮಾರ್ ಅವರನ್ನು ಕಂಡು ನಟಿ ಮಂಜುಳಾ ಅವರು ಭಯದಿಂದ ನಡುಗುತ್ತಿದ್ದರು ಯಾಕೆ ಗೊತ್ತೇ.? ಶಾಕಿಂಗ್ ನ್ಯೂಸ್ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್ ಹಾಗೂ ನಟಿ ಮಂಜುಳಾ ಅಭಿನಯದ ಸಂಪತ್ತಿಗೆ ಸವಾಲ್ ಚಿತ್ರವನ್ನು ಪ್ರತಿಯೊಬ್ಬ ಅಭಿಮಾನಿಯು ಒಂದಲ್ಲ, ಎರಡಲ್ಲ ಸಾಕಷ್ಟು ಬಾರಿ ನೋಡಿಯೇ ಇರುತ್ತೀರಾ. ಏಕೆಂದರೆ ಆ ಚಿತ್ರದಲ್ಲಿ ರಾಜ್ ಕುಮಾರ್ ಹಾಗೂ ಮಂಜುಳಾ ಅವರು ಅದ್ಭುತವಾಗಿ ನಟಿಸಿದ್ದರು. ಸಂಪತ್ತಿಗೆ ಸವಾಲ್ ಚಿತ್ರ ನಟಿ ಮಂಜುಳಾ ಅವರಿಗೆ ಮೊದಲ ಸಿನೆಮಾ ವಾಗಿದ್ದರೆ ಅಣ್ಣಾವ್ರು ಅದಾಗಲೇ ಸ್ಯಾಂಡಲ್ವುಡ್ ನಲ್ಲಿ ಯಶಸ್ಸಿನ ಶಿಖರವನ್ನು ಏರಿದ್ದರು.
ಇನ್ನೂ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಬರುವ ಕೆಲವೊಂದು ಸನ್ನಿವೇಶದಲ್ಲಿ ಮಂಜುಳಾ ಅವರು ರಾಜ್ ಕುಮಾರ್ ಅವರಿಗೆ ಬೈಯಬೇಕಾಗಿತ್ತು, ಆದರೆ ಅಣ್ಣಾವ್ರು ಅದಾಗಲೇ ಕನ್ನಡದಲ್ಲಿ ದೊಡ್ಡ ಸ್ಟಾರ್ ನಟನಾಗಿ ಮಿಂಚುತ್ತಿದ್ದರು, ಆ ಸಂದರ್ಭದಲ್ಲಿ ಯಾರಾದರೂ ಅಣ್ಣಾವ್ರ ವಿ-ರು-ದ್ಧ ಮಾತಾನಾಡಿದರೆ ಅವರ ಅಭಿಮಾನಿಗಳು ಅದನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಆದ್ದರಿಂದ ನಟಿ ಮಂಜುಳಾ ಅವರು ಈ ಪಾತ್ರವನ್ನು ಮಾಡಲು ಶೋಟಿಂಗ್ ಸಮಯದಲ್ಲಿ ಭಯ ಪಡುತ್ತಿದ್ದರು.

ಹೌದು ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಮಂಜುಳಾ ಅವರದ್ದು ಗಂಡುಭೀರಿ ಪಾತ್ರ. ಮಂಜುಳಾ ಅವರಿಗೂ ಕೂಡ ಅವರ ತಂದೆಯ ರೀತಿ ಅಹಂಕಾರವಿರುತ್ತದೆ. ಮಂಜುಳಾ ಅವರ ಅಹಂಕಾರವನ್ನು ಇಳಿಸುವುದು ನಾಯಕನ ಪಾತ್ರವಾಗಿತ್ತು ಅಂದರೆ ಅಣ್ಣಾವ್ರ ಪಾತ್ರವಾಗಿತ್ತು. ಕೆಲವೊಂದು ಸಂಭಾಷಣೆಗಳಲ್ಲಿ ಮಂಜುಳಾ ಅವರು ರಾಜ್ ಕುಮಾರ್ ಅವರನ್ನು ಏಕವಚನದಲ್ಲಿ ಬೈಯುವ ಹಾಗೆ ಚಿ. ಉದಯ್ ಶಂಕರ್ ಅವರು ಸಂಭಾಷಣೆಯನ್ನು ಬೇರೆದಿದ್ದರು.

ನಟಿ ಮಂಜುಳಾ ಅವರು ಸಂಭಾಷಣೆಯನ್ನು ಕೇಳಿದ ನಂತರ ಚಿತ್ರದ ನಿರ್ದೇಶಕರ ಬಳಿ ಹಾಗೂ ಪಾರ್ವತಮ್ಮನವರ ಬಳಿ ನಾನು ಈ ರೀತಿ ರಾಜ್ ಕುಮಾರ್ ಅವರಿಗೆ ಏಕವಚನದಲ್ಲಿ ಬಯ್ಯವುದು ಎಷ್ಟು ಸರಿ ಎಂದು ಕೇಳುತ್ತಿದ್ದರು. ಆಗ ಪಾರ್ವತಮ್ಮನವರು ಈ ವಿಷಯವನ್ನು ರಾಜ್ ಕುಮಾರ್ ಅವರಿಗೆ ತಿಳಿಸುತ್ತಾರೆ.

ಆಗ ಅಣ್ಣಾವ್ರು ಮಂಜುಳಾ ಅವರನ್ನು ಕರೆದು ನೀವು ಯೋಚಿಸುತ್ತಿರುವುದು ಸರಿಯಾಗಿ ಇದೆ, ಆದರೆ ನಾನು ನಿಮಗೆ ಬಯ್ಯುವುದು ಅಥವಾ ನೀವು ನಮಗೆ ಬಯ್ಯುವುದು ಕೇವಲ ಸಿನೆಮಾದಲ್ಲಿ ಮಾತ್ರ ಆದ್ದರಿಂದ ಪ್ರೇಕ್ಷಕರು ಸಿನೆಮಾವನ್ನು ಸಿನೆಮಾವಾಗಿ ನೋಡುತ್ತಾರೆ ಆದ್ದರಿಂದ ನೀವು ಹೆಚ್ಚಾಗಿ ತಲೆಕೆಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಧೈರ್ಯವನ್ನು ತುಂಬಿದರು.

ಇಷ್ಟಕ್ಕೆ ಸುಮ್ಮನಾಗದೆ ರಾಜ್ ಕುಮಾರ್ ಅವರು ನೀವು ನನ್ನನ್ನು ಹೊಸದಾಗಿ ನಟಿಸುತ್ತಿರುವ ನಟ ಎಂದು ಅಂದುಕೊಂಡು ಪಾತ್ರವನ್ನು ಮಾಡಿ ಎಂದು ರಾಜ್ ಕುಮಾರ್ ಹೇಳಿರುತ್ತಾರೆ. ಈ ಒಂದು ಘಟನೆ ಎಲ್ಲರಿಗೂ ತಿಳಿದ ನಂತರ ಸಿನೆಮಾ ತೆರೆಕಂಡಾಗ ನಟಿ ಮಂಜುಳಾ ಅವರ ಬಗ್ಗೆ ಯಾರೂ ಕೂಡ ತಪ್ಪಾಗಿ ಅರ್ಥ ಮಾಡಿಕೊಳ್ಳುವುದಿಲ್ಲ ಹಾಗೂ ಈ ಕಾರಣಕ್ಕೆ ಚಿತ್ರ ಚಿತ್ರಮಂದಿರಗಳಲ್ಲಿ ನೂರು ದಿನಗಳ ಕಾಲ ಯಶಸ್ವಿಯಾಗಿ ಒಡಲು ಕಾರಣವಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟಾವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *