ಕನ್ನಡ ಚಿತ್ರರಂಗದ ಕಣ್ಮಣಿ ಡಾ. ರಾಜ್ ಕುಮಾರ್ ಅವರು ಕನ್ನಡ ಸಿನೆಮಾರಂಗದ ದಂತಕಥೆ ಎಂದರೆ ತಪ್ಪಾಗಲಾರದು. ರಾಜ್ ಕುಮಾರ್ ಅವರ ಜೊತೆ ನಟಿಸಬೇಕು ಎಂಬ ಆಸೆಯನ್ನು ಇಟ್ಟುಕೊಂಡು ನಾಯಕರು ಹಾಗೂ ನಾಯಕಿಯರು ಬಹಳಷ್ಟು ಮಂದಿ ಇದ್ದರು. ಆದರೆ ರಾಜ್ ಕುಮಾರ್ ಅವರ ಜೊತೆ ನಟಿಸಲು ಅದೃಷ್ಟವನ್ನು ಪಡೆದುಕೊಂಡು ಬಂದವರು ಕೆಲವೇ ಕೆಲವರು ನಟ ನಟಿಯರು.
ರಾಜ್ ಕುಮಾರ್ ಅವರ ಬ್ಯಾನರ್ ಅಡಿಯಲ್ಲಿ ಮೂಡಿಬರುವ ಚಿತ್ರಕ್ಕೆ ರಾಜ್ ಕುಮಾರ್ ಅವರ ಜೊತೆ ಹಾಗೂ ಅದರ ಪಾತ್ರಕ್ಕೆ ತಕ್ಕಂತೆ ಹೋಲಿಕೆಯದರೆ ಸಾಕು ಯಾವ ನಟಿಯಾಗಿದ್ದರೂ ಸಹ ಅವರಿಗೆ ಅವಕಾಶ ಸಿಕ್ಕರೂ ಕೆಲವೊಂದು ಕಾರಣಗಳಿಂದ ರಾಜ್ ಕುಮಾರ್ ಅವರ ಜೊತೆ ನಟನೆ ಮಾಡುವುದನ್ನು ಕೆಲ ನಟ – ನಟಿಯರು ಕಳೆದುಕೊಳ್ಳುತ್ತಿದ್ದರು.
ಹೀಗೆ ಅವಕಾಶವನ್ನು ಕಳೆದುಕೊಂಡು ನಟಿಯರಲ್ಲಿ ಕನ್ನಡದ ಶೃತಿ ಕೂಡ ಒಬ್ಬರು. ಶೃತಿ ಅವರು ಯಾವ ಕಾರಣಕ್ಕಾಗಿ ರಾಜ್ ಕುಮಾರ್ ಅವರ ಜೊತೆ ನಟಿಸಲಿಲ್ಲ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ. ನಟಿ ಶೃತಿಯವರು ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್, ರಮೇಶ್ ಹೀಗೆ ಅನೇಕ ದಿಗ್ಗಜ ನಾಯಕರ ಜೊತೆ ಅಭಿನಯ ಮಾಡಿದ್ದರು. ಆದರೆ ಡಾ. ರಾಜ್ ಕುಮಾರ್ ಅವರ ಜೊತೆ ಅಭಿನಯ ಮಾಡದಿದ್ದಕ್ಕೆ ಹಲವು ಬಾರಿ ಬೇಸರವನ್ನು ಮಾಡಿಕೊಂಡ ಪ್ರಮಾಯವು ಇದೆ.
ಶೃತಿ ಅವರು ರಾಜ್ ಕುಮಾರ್ ಅವರ ಬ್ಯಾನರ್ ಅಡಿಯಲ್ಲಿ ಆಸೆಗೊಬ್ಬ ಮೀಸೆಗೊಬ್ಬ ಸಿನೆಮಾದ ಮೂಲಕ ತಂಗಿಯ ಪಾತ್ರದಲ್ಲಿ ಮೊದಲು ಬಾರಿ ಬಣ್ಣವನ್ನು ಹಚ್ಚಿದ್ದರು. 90ರ ದಶಕದಲ್ಲಿ ರಾಜ್ ಕುಮಾರ್ ಅವರು ಬಹಳ ಕಡಿಮೆ ಸಿನೆಮಾದಲ್ಲಿ ಅಭಿನಯ ಮಾಡುತ್ತಿದ್ದರು, ಹೀಗಿದ್ದರು ಸಹ ರಾಜ್ ಕುಮಾರ್ ಅವರ ಜೊತೆ ನಟಿಸಲು ಮನೆಯ ಬಾಗಿಲಿಗೆ ಬಂದ ಅವಕಾಶವನ್ನು ತಿಳಿಯಲು ಸಾಧ್ಯವಾಗಲಿಲ್ಲ, ಅವಕಾಶ ನನಗೆ ಬಂದಿತ್ತು ಎಂದು ತಿಳಿದು ಕೊಳ್ಳುವಷ್ಟರಲ್ಲಿ ಸಮಯ ಕೈ ಮೀರಿ ಹೋಗಿತ್ತು ಎಂದರು ನಟಿ ಶೃತಿ.
‘ಜೀವನ ಚೈತ್ರ’ ಸಿನೆಮಾದಲ್ಲಿ ದೊರೆ ಭಗವಾನ್ ಅವರು ಶೃತಿ ಅವರ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಒಂದು ಪಾತ್ರವನ್ನು ಸೃಷ್ಟಿಸಿದ್ದರು. ಆ ಸಮಯದಲ್ಲಿ ಹಲವಾರು ಸಿನೆಮಾಗಳಲ್ಲಿ ನಿರತರಾಗಿದ್ದ ಕಾರಣ ರಾಜ್ ಕುಮಾರ್ ಅವರ ಜೊತೆ ತೆರೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಅಂದು ಒದಗಿಬಂದ ಅವಕಾಶಗಳು ಕಳೆದುಕೊಂಡಿದ್ದರಿಂದ ಇಂದಿಗೂ ಬೇಸರವಾಗುತ್ತದೆ ಎನ್ನುತ್ತಾರೆ ನಟಿ ಶೃತಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.