ರಾಧಿಕಾ ಪಂಡಿತ್ ಎರಡು ಮಕ್ಕಳಾ ತಾಯಿಯಾದ್ರೂ ಈ ಫಿಗರ್ ಮೈಂಟೇನ್ ಮಾಡಿರೋದು ಹೇಗೆ? ನೋಡಿ

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ನಿಮಗೆ ಗೊತ್ತೇ ಇದೇ ಅದೆಷ್ಟೋ ಹೆಣ್ಣು ಮಕ್ಕಳು ಪಾಲಿಗೆ ಇವರು ಆದರ್ಶ್ ಇವರಂತೆ ಇರಬೇಕು ಅಂಥ ಸಾಕಷ್ಟು ಹೆಣ್ಣು ಮಕ್ಕಳು ಆಸೆ ಪಡುತ್ತಾರೆ. ನಟಿ ರಾಧಿಕಾ ಪಂಡಿತ್ ಅವರು ಸೀರಿಯಲ್ ನಿಂದ ದೊಡ್ಡ ಪರದೆಗೆ ಬಂದವರು ಬಳ್ಳಿ ಪರದೆಯಲ್ಲಿ ಇವರು ಅಭಿನಯಿಸಿದ ಎಲ್ಲಾ ಚಿತ್ರಗಳು ಸೂಪರ್ ಡೂಪರ್ ಹಿಟ್ ಅದಾವು.
ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ಮೇಲೆ ತಾನು ಇಷ್ಟ ಪಟ್ಟಂತ ಹುಡುಗನನ್ನು ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು ಅವತ್ತಿನಿಂದ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ದಾಂಪತ್ಯ ಜೀವನ ಸಂತೋಷದಿಂದ ನಡೆಸುತ್ತಿದ್ದಾರೆ. ಇದೇ ಮೊದಲು ಬಾರಿಗೆ ಒಬ್ಬ no1 ಆಕ್ಟರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ತಮ್ಮ ಅಭಿನಯವನ್ನು ಸಂಪೂರ್ಣ ನಿಲ್ಲಿಸಿ ತಮ್ಮ ಫ್ಯಾಮಿಲಿಗೆ ಕೊಟ್ಟಿದ್ದು ಇದೇ ಮೊದಲ ನಟಿ ಇದರಿಂದ ಇವರು ಅಭಿಮಾನಿಗಳು ಸಾಕಷ್ಟು ಬೇಸರ ಗೊಂಡಿದ್ದಾರೆ.

ಇದೀಗ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳು ಮೊದಲನೇ ಮಗಳು ಐರಾ ಹಾಗೂ ಎರಡನೇಯ ಮಗ ಯಥಾರ್ವ ಇವರಿಬ್ಬರು ಸಾಕಷ್ಟು ಚೂಟಿ ಇವರ ಮುದ್ದಾದ ವಿವಿಧ ಚಟುವಟಿಕೆಗಳ ವಿಡಿಯೋಗಳನ್ನು ಯಶ್ ಹಾಗೂ ರಾಧಿಕಾ ಪಂಡಿತ್ ಆಗಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ತಮ್ಮ ಇಷ್ಟು ವರ್ಷದ ಜರ್ನಿ ಯಲ್ಲಿ ಇದುವರೆಗೂ ತಪ್ಪಿಯು ಬೇರೆಯವರಿಗೆ ನೋವಾಗುವ ರೀತಿಯಲ್ಲಿ ಮಾತಾಡಿದವರಲ್ಲ.
ಇದರಿಂದ ಯಶಗೂ ತಮ್ಮ ಪತ್ನಿ ಯ ಮೇಲೆ ಸಾಕಷ್ಟು ಗೌರವ ಇದೇ ಇತ್ತೀಚಿಗೆ ನಡೆದ ಸಂದರ್ಶನಒಂದರಲ್ಲಿ ನನ್ನ ಪತ್ನಿ ರಾಧಿಕಾ ಪಂಡಿತ್ ದೆಸೆಯಿಂದ ನನ್ನ ಗೌರವ ಹೆಚ್ಚಾಯಿತಾ ಹೋಯಿತು ಎಂದು ರಾಕಿಂಗ್ ಸ್ಟಾರ್ ಯಶ್ ತನ್ನ ಪತ್ನಿಯನ್ನು ಮನತುಂಬಿ ಹೇಳುದ್ದರು. ಇಡೀ ಚಿತ್ರರಂಗ ರಾಧಿಕಾ ಪಂಡಿತ್ ಅವರನ್ನು ಗೌರವದಿಂದ ನೋಡುತ್ತಾರೆ.

ಇಷ್ಟು ಗೊತ್ತಿರುವ ನಟಿ ರಾಧಿಕಾ ಪಂಡಿತ್ ಅವರು ವಯಸ್ಸಿನಲ್ಲಿ ಏನು ಚಿಕ್ಕವರಲ್ಲ ಅವರಿಗಿಗ ಮೂವತ್ತೆಂತರ ಅಸುಪಾಸು. ತನ್ನ ಪತಿ ಯಶ್ ಗಿಂತ ಎರಡು ವರ್ಷ ದೊಡ್ಡವರು ರಾಧಿಕಾ ಪಂಡಿತ್. ಆದರೆ ಇವರನ್ನು ಯಾರೇ ನೋಡಿದ್ರು ಅವರು ದೊಡ್ಡವರು ಇವರು ದೊಡ್ಡವರು ಅನ್ನೋದಕ್ಕೆ ಸಾಧ್ಯನೇ ಇಲ್ಲ. ಆ ಪರಿ ನಮ್ಮ ರಾಧಿಕಾ ಪಂಡಿತ್ ಅವರು ತಮ್ಮ ಫಿಗರ್ ಮೈಂಟೇನ್ ಮಾಡಿದ್ದಾರೆ. ಇಡೀ ಚಿತ್ರರಂಗದಲ್ಲಿ ಮದುವೆಯಾಗಿ ಒಂದು ಮಗು ಆದರೆ ಸಾಕು ಅವರ ಬಾಡಿ ಶೇಪ್ ಬದಲಾಗುತ್ತೆ.

ಕನ್ನಡ ಚಿತ್ರರಂಗದಲ್ಲಿ ಅತೀ ಬೇಗನೆ ಎರಡು ಮಕ್ಕಳ ತಾಯಿ ಆದರು ರಾಧಿಕಾ ಪಂಡಿತ್ ಅವರ ಆದಷ್ಟು ಬೇಗ ನಮ್ಮ ಜೊತೇನೆ ದೊಡ್ಡವರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ಮಕ್ಕಳ ನಡುವೆ ಹೆಚ್ಚು ಗ್ಯಾಪ್ ಇರಬಾರದು ಅವರು ಆಡುತ್ತಲೇ ಬೆಳೆಯಬೇಕು ಅನ್ನೋ ಆಸೆ ಹೀಗಾಗಿ ತಮ್ಮ ಇಬ್ಬರು ಮುದ್ದಾದ ಮಕ್ಕಳ ಮದ್ಯೆ ವಯಸ್ಸಿನ ಅಂತರ ತುಂಬಾ ಕಡಿಮೆ ಇದೆ. ಇನ್ನು ಕೆಲವರು ರಾಧಿಕಾ ಅವರಿಗೆ ವಯಸ್ಸುಆಗ್ತಾಯಿದೆ ಅದುಕ್ಕೆ ಅಂತೆಲ್ಲ ಮಾತಾಡಿಕೊಳ್ತಾದ್ರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಾನಾಯಿತು ತನ್ನ ಮುದ್ದಾದ ಕುಟುಂಬ ಅಷ್ಟೇ ಅವರಿಗೆ ಗೊತ್ತಿರೋದು.

ಇತ್ತೀಚಿಗೆ ರಾಧಿಕಾ ಪಂಡಿತ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಪ್ರಚಾರಕ್ಕೆ ಪತಿ ಯಶ್ ಜೊತೆ ಬಂದಿದ್ದ ಅವರ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಯಶ್ ಹೆಂಡತಿ ಸೊ ಬ್ಯೂಟಿಫುಲ್ ಅಂತೆಲ್ಲ ಮಾತಾಡ್ತಾ ಇದ್ರೂ ಯಶ್ ನಿಜವಾಗ್ಲೂ ಲಕ್ಕಿ ಅಂತೆಲ್ಲ ಅನೇಕ ಸುದ್ದಿಗಳು ಹರಿದಾಡ್ತಾ ಇದ್ದವು. ನಟಿ ರಾಧಿಕಾ ಪಂಡಿತ್ ಅವರನ್ನು ನೋಡಿದವರೆಲ್ಲ ಅವರು ದೊಡ್ಡ ಸೆಲೆಬ್ರೇಟಿ ಹೆಂಡ್ತಿ ಅವರು ಡಯಟ್ ಮಾಡತ್ತಾರೆ. ಊಟ ತಿಂಡಿ ಯಲ್ಲದ್ರಲ್ಲೂ ಕಂಟ್ರೋಲ್ ಇರುತ್ತೆ ಅಂತ ಅಂದುಕೊಂಡರೆ ಅದು ನಿಮ್ಮ ಭಾವನೆ ತಪ್ಪು.

ರಾಧಿಕಾ ಪಂಡಿತ್ ಅವರು ಅಂದಿನಿಂದಲೂ ಅವರು ಈ ಡಯಟ್ ಸುದ್ದಿಗೆ ಹೋದವರಲ್ಲ. ಯಾವತ್ತೂ ತನ್ನ ಹೊಟ್ಟೆಗೆ ಮೊಸ ಮಾಡಿದವರಲ್ಲ. ಇಂದಿಗೂ ಚನ್ನಾಗಿ ತಿಂದು ಈ ಲೆವೆಲ್ ಗೆ ತಮ್ಮ ಫಿಟ್ನೆಸ್ ಮೈಂಟೇನ್ ಮಾಡಿದ್ದಾರೆ ಅಂದರೆ ಅದಕ್ಕೆ ಕಾರಣ ಅವರ ಮೆಂಟಾಲಿಟಿ. ಅದು ತಿಂದರೆ ದಪ್ಪ ಆಗ್ತೀನಿ ಇದು ತಿಂದರೆ ದಪ್ಪ ಆಗ್ತೀನಿ ಅನ್ನೋರಿಗೆ ಇದು ಒಳ್ಳೇ ಉದಾಹರಣೆ.

ರಾಧಿಕಾ ಪಂಡಿತ್ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಾಗ ತುಂಬಾ ಸಣ್ಣಇದ್ರು. ಈ ಒಂದು ಕಾರಣದಿಂದ ಅವರನ್ನು ತುಂಬಾ ಸಿನೆಮಾಗಳಿಂದ ಅವರನ್ನು ಕೈ ಬಿಡಲಾಗಿದೆ ಅಂತೆ. ಈ ವಿಚಾರವನ್ನು ನಟಿ ರಾಧಿಕಾ ಅವರೇ ಹೇಳಿಕೊಂಡಿದ್ದರು. ನಟಿ ರಾಧಿಕಾ ಪಂಡಿತ್ ಅವರು ಇಷ್ಟು ಫಿಟ್ ಅಂಡ್ ಫೈನ್ ಇರುವುದಕ್ಕೆ ಕಾರಣ ಅವರು ನಿತ್ಯ ಮಾಡುವ ಯೋಗ ಮತ್ತು ಯಾಕ್ಸಸೈಜ್ ಗಳು. ಈಗಲೂ ಅವರಿಗೆ ಟೈಮ್ ಸಿಕ್ಕಾಗೆಲ್ಲ ಮಾಡುತ್ತಾರೆ. ಯೋಗ, ಡ್ಯಾನ್ಸ್ ಜೊತೆಗೆ ತನ್ನ ಪುಟ್ಟ ಮಕ್ಕಳ ಹಿಂದೆ ದಿನವಿಡೀ ಓಡಾಡ್ತಾನೇ ಇರೋದು ಅವರ ಫಿಟ್ ನೆಸ್ ಕಾಂತಿಯನ್ನು ಹೆಚ್ಚಿಸಿದೆ.
ಹೀಗೆ ರಾಧಿಕಾ ಪಂಡಿತ್ ಅಭಿಮಾನಿಗಳು ನೀವು ಯಾವಾಗ ಮತ್ತೆ ಅಭಿನಯಕ್ಕೆ ಬರುತ್ತೀರಾ ಎನ್ನುವುದು ಪ್ರೆಶ್ನೆ ಈ ಪ್ರೆಶ್ನೆಗೆ ಸದ್ಯಕ್ಕೆ ಯಾವುದೇ ಉತ್ತರ ನೀಡದೆ ತಮ್ಮ ಇಬ್ಬರು ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇರೋದ್ರಿಂದ ಸದ್ಯಕ್ಕೆ ಯಾವ ಆಲೋಚನೆ ಕೂಡ ಮಾಡಿಲ್ಲ ಅನ್ನುತ್ತಾರೆ. ನಿಮ್ಮ ನೆಚ್ಚಿನ ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ನಿಮ್ಮ ಅನಿಸಿಕೆ ಯನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *