ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಇಡೀ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ 2022 ಪ್ರಾರಂಭವಾಗಿ ಹಲವಾರು ಪಂದ್ಯಾಟಗಳು ಮುಗಿದಿವೆ. ಈ ಬಾರಿ ಬಹುತೇಕ ಎಲ್ಲಾ ತಂಡಗಳು ಕೂಡ ಹೊಸದಾಗಿ ನಿರ್ಮಾಣವಾಗಿವೆ ಎಂದು ಹೇಳಬಹುದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನೋಡುವುದಾದರೂ ಕೂಡ ವಿರಾಟ್ ಕೊಹ್ಲಿ ಅವರು ನಾಯಕನ ಸ್ಥಾನದಿಂದ ಕೆಳಗಿಳಿದ ಕೇವಲ ಬ್ಯಾಟ್ಸ್ಮನ್ ಆಗಿ ತಂಡದಲ್ಲಿ ಇದ್ದಾರೆ.
ತಂಡದ ಭರವಸೆಯ ಬ್ಯಾಟ್ಸ್ಮನ್ ಆಗಿದ್ದ ಸೌತ್ ಆಫ್ರಿಕಾ ಮೂಲದ ಎಬಿ ಡಿವಿಲಿಯರ್ಸ್ ರವರು ಐಪಿಎಲ್ ಗೆ ರಾಜೀನಾಮೆ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದ ಸೌತ್ ಆಫ್ರಿಕಾ ಮೂಲದ ಡುಪ್ಲೆಸಿಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿ ಡುಪ್ಲೆಸಿಸ್ ಅವರು ಅಧಿಕಾರ ವಹಿಸಿಕೊಂಡ ಮೇಲೆ ತಂಡ ಗಮನಾರ್ಹ ಪ್ರದರ್ಶನ ನೀಡುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಮೊದಲ ಪಂದ್ಯವನ್ನು ಸೋತರೂ ಕೂಡ ಎರಡನೇ ಪಂದ್ಯವನ್ನು ರೋಮಾಂಚಕವಾಗಿ ಗೆದ್ದಿದೆ.
ಅದರಲ್ಲಿ ಡುಪ್ಲೆಸಿಸ್ ರವರು ಕೇವಲ ನಾಯಕನಾಗಿ ಮಾತ್ರವಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಕೂಡ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದ್ದಾರೆ ಎಂದು ಹೇಳಬಹುದಾಗಿದೆ. ಈ ಬಾರಿಯ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಡುಪ್ಲೆಸಿಸ್ ರವರು ಮುಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಈ ಬಾರಿಯಂತೂ ಸಖತ್ ಖುಷಿಯಲ್ಲಿದ್ದಾರೆ. ಇನ್ನು ಮುಂದಿನ ಪಂದ್ಯಗಳಿಗೆ ತಾಂಡದ ಪ್ರಮುಖವಾಗಿ ಬ್ಯಾಟ್ಸ್ಮನ್ ಆಗಿರುವ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಬಂದು ಸೇರಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಮತ್ತೊಬ್ಬ ಪ್ರಮುಖ ವೇಗಿಯಾಗಿರುವ ಜೋಶ್ ಹೆಝಲ್ ವುಡ್ ಕೂಡ ಅತಿಶೀಘ್ರದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಇವರಿಬ್ಬರು ಬಂದ ನಂತರ ರಾಹುಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತಷ್ಟು ಸ್ಟ್ರಾಂಗ್ ಆಗಲಿದೆ.
ಆದರೆ ಸದ್ಯಕ್ಕೆ ಸದ್ದು ಮಾಡುತ್ತಿರುವ ವಿಚಾರವೇನೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನ ಆಗಿರುವ ಡುಪ್ಲೆಸಿಸ್ ರವರ ಜೊತೆಗೆ ಸೆಲ್ಫಿ ತೆಗೆದುಕೊಂಡಿರುವುದು. ಹೌದು ಅವರು ಇನ್ಯಾರೂ ಅಲ್ಲ ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ನಟಿ ಸಂಯುಕ್ತ ಹೆಗಡೆ. ಈಗ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿರುವ ಸಂಯುಕ್ತ ಹೆಗಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನನಾಗಿ ರುವ ಡುಪ್ಲೆಸಿಸ್ ರವರ ಜೊತೆಗೆ ಸೆಲ್ಫಿ ತೆಗೆದುಕೊಂಡು ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತಂತೆ ಪ್ರೇಕ್ಷಕರು ಬೇರೆಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು ಕೂಡ ಸಂಯುಕ್ತ ಹೆಗಡೆ ಹೋಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೇರ್ಸಿ ಹಾಗೂ ಕಪ್ತಾನ ಘೋಷಣೆ ಕಾರ್ಯಕ್ರಮದ ಪಾರ್ಟಿಗೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.