ತೆಲುಗಿನ ಖ್ಯಾತ ಗಾಯಕಿಯಾದ ಮಂಗ್ಲಿ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ತೆಲುಗು ವರ್ಣಿಕೆಯಲ್ಲಿ ಕಣ್ಣೇ ಅದಿರಿಂದಿ ಹಾಡು ಹಾಡುವ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಹೌದು ಲಂಬಾಣಿ ಹುಡುಗಿ ಹಾಡಿದ್ದ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿತ್ತು. ರಾಬರ್ಟ್ ಚಿತ್ರದ ಕಣ್ಣೀ ಅದಿರಿಂದಿ ಹಾಡು ಹಾಡಿದ ಮಂಗ್ಲಿ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹೌದು ಎಲ್ಲದಕ್ಕಿಂತ ಹೆಚ್ಚಾಗಿ ಈ ಹಾಡಿನಿಂದಗಿ ಮಂಗ್ಲಿ ಅವರಿಗೆ ಕನ್ನಡ ಸಿನಿರಸಿಕರ ಮನ್ಸಸ್ಸಿನಲ್ಲಿ ಒಂದೊಳ್ಳೆ ಸ್ಥಾನ ಸಿಕ್ಕಿತು.
ಇನ್ನು ಕನ್ನಡ ಸಿನಿರಸಿಕರಿಗೆ ಗಾಯಕಿಯಾಗಿ ಪರಿಚಯವಾದ ಮಂಗ್ಲಿ ಈಗ ನಟಿಯಾಗಿ ಕನ್ನಡಿಗರ ಮುಂದೆ ಬರಲಿದ್ದಾರೆ. ಹೌದು ಕನ್ನಡದ ಸ್ಟಾರ್ ನಟನ ಎದುರು ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕನ್ನಡದ ಸೂಪರ್ ಸ್ಟಾರ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಜೊತೆ ಮಂಗ್ಲಿ ಮೊದಲ ಬಾರಿಗೆ ನಟಿಸುತ್ತಿದ್ದು ಶಿವಣ್ಣ ಅವರ 124 ನೇ ಚಿತ್ರದಲ್ಲಿ ಗಾಯಕಿ ಮಂಗ್ಲಿ ಅಭಿನಯಿಸುತ್ತಿದ್ದಾರಂತೆ. ಈ ಚಿತ್ರಕ್ಕೆ ತೆಲುಗಿನ ನಿರ್ದೇಶಕ ರಾಮ್ ಧುಲಿಪುಡಿ ಅವರು ನಿರ್ದೇಶನ ಮಾಡಲಿದ್ದಾರೆ.
ಈ ಹಿಂದೆ ಲಂಬಾಣಿ ಚಿತ್ರದಲ್ಲಿ ನಟಿಸಿರುವ ಮಂಗ್ಲಿ ಅವರಿಗೆ ನಟನೆ ಮಾಡುವ ಅನುಭವವೂ ಇದ್ದು ಜುಲೈ ತಿಂಗಳಿನಿಂದ ಈ ಕನ್ನಡ ಸಿನೆಮಾದ ಚಿತ್ರಿಕಾರಣ ಆರಂಭವಾಗಲಿದೆ ಎಂದು ಹೇಳುತ್ತಿದ್ದಾರೆ. ಹಾಡಿನ ಮೂಲಕ ಮಂಗ್ಲಿ ಅವರನ್ನು ಮೆಚ್ಚಿ ಕೊಂಡಿರುವ ಕನ್ನಡಿಗರ ಇನ್ನು ನಟಿಯಾಗಿ ಹೇಗೆ ಸ್ವೀಕರಿಸುತ್ತಾರೆ ಎಂದು ಕಾಡುನೋಡಬೇಕು. ಸದ್ಯ ಮಂಗ್ಲಿ ಅವರಿಗೆ ಕನ್ನಡದ ಹಾಗೂ ತೆಲುಗು ಎರಡರಲ್ಲೂ ಬೇಡಿಕೆ ಹೆಚ್ಚಿದೆ. ಇದಕ್ಕೂ ಮುಂಚೆ ಪುಷ್ಪ ಸಿನೆಮಾದ ಹು ಅಂತೀಯ ಮಾವ ಕನ್ನಡ ವರ್ಷನ್ ಸಾಂಗ್ ಹಾಡಿದ್ದ ಮಂಗ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು.
ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಚಿತ್ರದ ರಾರಾ ರಕ್ಕಮ್ಮ ತೆಲುಗು ವರ್ಣಿಕೆಯ ಸಾಂಗ್ ಹಾಡಿ ಭಾರಿ ಫೇಮಸ್ ಆಗಿದ್ದರು. ಇನ್ನು ಈ ಹಾಡನ್ನು ಹಾಡಲು ಮಂಗ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ.?
ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಸಿನೆಮಾದ ಟ್ರೈಲರ್ ಲಾಂಚ್ ಪ್ರಿ ರಿಲೀಸ್ ಇವೆಂಟ್ ಶೋ ಬೆಂಗಳೂರಿನ ಪಸಿದ್ಧ ಮಾಲ್ ನಲ್ಲಿ ಭರ್ಜರಿಯಾಗಿ ಜರುಗಿತು. ಕಾರ್ಯಕ್ರಮಕ್ಕೆ ಕನ್ನಡದ ಸಿನೆಮಾರಂಗದ ಕಲಾವಿದರ ದಂಡೆ ಆಗಮಿಸಿ ಶುಭಾಶಯಗಳನ್ನು ಕೊರಿದ್ದಾರೆ.
ಹಾಗೂ ಕಿರುತೆರೆಯ ಕೆಲ ನಟರು ಕೂಡ ಆಗಮಿಸಿ ಚಿತ್ರತಂಡಕ್ಕೆ ಶುಭಾಶಯಗಳನ್ನು ಕೊರಿದ್ದಾರೆ. ರಂಗಿ ತರಂಗ ಖ್ಯಾತಿಯ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ವಿಕ್ರಂತ್ ರೋಣ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಬಿಡುಗಡೆಗೆ ಕ್ಷಣಗಣನೆ ಶುರು ಮಾಡಿದೆ. ಇನ್ನು ಚಿತ್ರದ ಮೋಸ್ ಸೆನ್ಸೇಷನ್ ಹಾಡು ರಾರಾ ರಾಕ್ಕಮ್ಮ ಹಾಡು ಭಾರತದಲ್ಲೇ ಸದ್ದು ಮಾಡಿದ್ದು ಅದರಲ್ಲೂ ಕನ್ನಡ ಹಾಗೂ ತೆಲುಗಿನಲ್ಲಿ ಸದ್ದು ಭಾರಿ ಸದ್ದು ಮಾಡುತ್ತಿದೆ.
ಇನ್ನು ಈ ಹಾಡು ತೆಲುಗಿನಲ್ಲಿ ಇಷ್ಟೊಂದು ಹವಾ ಕ್ರಿಯೇಟ್ ಮಾಡಲು ಕಾರಣ ಮಂಗ್ಲಿ ಅವರ ವಾಯ್ಸ್ ಎನ್ನಬಹುದು. ಹೌದು ಈ ಹಾಡನ್ನು ಹಾಡಲು ಮಂಗ್ಲಿ ಅವರು ಬರೋಬ್ಬರಿ 9 ಲಕ್ಷ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ಧಿ ಎಲ್ಲೆಡೆ ಭಾರಿ ವೈರಲ್ ಆಗಿದೆ. ನೀವು ವಿಕ್ರಂತ್ ರೋಣ ಚಿತ್ರ ನೋಡಲು ಕಾಯುತ್ತಿದ್ದೀರಾ ಹಾಗಾದರೆ ನಿಮ್ಮ ನೆಚ್ಚಿನ ಚಿತ್ರ ಮಂದಿರ ಯಾವುದೂ ಕಾಮೆಂಟ್ ಮಾಡಿ ತಿಳಿಸಿ..