ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಗುಡ್ ನ್ಯೂಸ್; ಮತ್ತೆ ಬಂದೇಬಿಟ್ಟರು ಡೈರೆಕ್ಟರ್ ಸಾಹೇಬರು..!!?

Entertainment Uncategorized

ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರನ್ನು ತೆಗೆದುಕೊಂಡಾಗ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಹಾಗೂ ನಿರ್ದೇಶಕ ನಾಗಿರುವ ರಿಯಲ್ ಸ್ಟಾರ್ ಉಪೇಂದ್ರ ರವರ ಹೆಸರಂತೂ ಖಂಡಿತವಾಗಿ ಬಂದೇ ಬರುತ್ತದೆ. ಯಾಕೆಂದರೆ ಈಗಾಗಲೇ ಅವರು ಹಲವಾರು ವರ್ಷಗಳ ಹಿಂದೆ ನಿರ್ದೇಶಕನಾಗಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಂದಿನ ಕಾಲಕ್ಕೆ ಹೋಲಿಸಿದರೆ ಸಾಕಷ್ಟು ನವನವೀನವಾಗಿ ಇದ್ದವು. ಆದರೆ ಹಲವಾರು ಸಮಯಗಳಿಂದ ರಿಯಲ್ ಸ್ಟಾರ್ ಉಪೇಂದ್ರ ರವರು ನಿರ್ದೇಶಕನಾಗಿ ಕಾಣಿಸಿಕೊಂಡಿರಲಿಲ್ಲ.

ಇತ್ತೀಚಿನ ದಿನಗಳಲ್ಲಿ ನಾಯಕನಟನಾಗಿ ಕೂಡ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳು ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ರವರು ಪ್ರಜಾಕೀಯ ದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದಾಗಿ ಸಿನಿಮಾ ಕಡೆಗೆ ಹೆಚ್ಚಿನ ಗಮನವನ್ನು ನೀಡಿರಲಿಲ್ಲ. ಹೀಗಾಗಿ ಅಭಿಮಾನಿಗಳು ಅವರನ್ನು ನಿರ್ದೇಶಕನ ಸ್ಥಾನದಲ್ಲಿ ನೋಡಲು ಕಾತರರಾಗಿ ಕುಳಿತಿದ್ದರು. ಈ ಹಿಂದೆಯೇ ರಿಯಲ್ ಸ್ಟಾರ್ ಉಪೇಂದ್ರ ರವರು ಖಂಡಿತವಾಗಿ ನಾನು ಮತ್ತೊಮ್ಮೆ ನಿರ್ದೇಶಕನಾಗಿ ಕಂಬ್ಯಾಕ್ ಮಾಡಲಿದ್ದೇನೆ ಎಂಬುದಾಗಿ ಖಾತ್ರಿ ನೀಡಿದ್ದರು.

ಕೊನೆಗೂ ಕೂಡ ಅಭಿಮಾನಿಗಳ ನಿರೀಕ್ಷೆ ಫಲಿಸಿದೆ ಎನ್ನುವುದಾಗಿ ಹೇಳಬಹುದಾಗಿದೆ. ಹೌದು ಇಂದು ರಿಯಲ್ ಸ್ಟಾರ್ ಉಪೇಂದ್ರ ರವರ ನಿರ್ದೇಶನದ ಸಿನಿಮಾದ ಅಧಿಕೃತ ಘೋಷಣೆ ನಡೆದಿದೆ. ಚಿತ್ರವನ್ನು ಜಿ ಮನೋಹರ್ ಹಾಗೂ ಟಗರು ಖ್ಯಾತಿಯ ಕೆಪಿ ಶ್ರೀಕಾಂತ್ ಅವರು ನಿರ್ಮಾಣ ಮಾಡಲಿದ್ದಾರೆ. ಚಿತ್ರದ ಟೈಟಲ್ ಕೂಡ ಈಗಾಗಲೇ ಸಾಕಷ್ಟು ಗೊಂದಲವನ್ನು ಮೂಡಿಸಿದೆ.
ಒಮ್ಮೆ ನೋಡಿದರೆ ಮೂರು ಎನ್ನುವ ಅರ್ಥವನ್ನು ನೀಡಿದರೆ ಇನ್ನೊಂದು ರೀತಿಯಲ್ಲಿ ಇಂಗ್ಲಿಷ್ ಅಕ್ಷರವಾಗಿರುವ ಯು ಐ ಅಂದರೆ ನೀನು ನಾನು ಎನ್ನುವ ಅರ್ಥವನ್ನು ನೀಡುತ್ತದೆ. ಇದರ ಅಧಿಕೃತ ಅರ್ಥವನ್ನು ಮುಂದಿನ ದಿನಗಳಲ್ಲಿ ಕಾದು ನೋಡಬಹುದಾಗಿದೆ. ಸದ್ಯಕ್ಕೆ ಈ ಚಿತ್ರ ಪಂಚ ಭಾಷೆಗಳಲ್ಲಿ ಹಾಗೂ ಇಂಗ್ಲಿಷ್ ನಲ್ಲಿ ಕೂಡ ಬಿಡುಗಡೆಯಾಗುವ ಸಾಧ್ಯತೆ ಕೂಡ ಇದೆ ಎಂಬುದಾಗಿ ತಿಳಿದುಬರುತ್ತದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜಾ ಸಿನಿಮ ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ರಿಯಲ್ ಸ್ಟಾರ್ ಉಪೇಂದ್ರ ರವರ ಜಮಾನ ಮತ್ತೆ ಹಿಂದಿರುಗಿ ಬಂದಿದೆ ಎಂಬುದಾಗಿ ಅಭಿಮಾನಿಗಳು ಹರ್ಷೋದ್ಗಾರ ವನ್ನು ವ್ಯಕ್ತಪಡಿಸುತ್ತಿದ್ದಾರೆ.


Leave a Reply

Your email address will not be published. Required fields are marked *