ಲವ್ ಮಾಕ್ಟೇಲ್ ಸಂದರ್ಭದಲ್ಲಿ ಯಾವ ನಿರ್ಧಾರಕ್ಕೆ ಹೋಗಿದ್ದರಂತೆ ಗೊತ್ತಾ ಡಾರ್ಲಿಂಗ್ ಕೃಷ್ಣ..!?

Entertainment

ನಮಸ್ಕಾರ ಸ್ನೇಹಿತರೇ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದಂತಹ ಲವ್ ಮಾಕ್ಟೇಲ್ ಚಿತ್ರದ ಗೆಲುವಿನ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ನೀಡುವ ಮೂಲಕ ಎಂದೆಂದು ಮರೆಯಲಾರದಂತಹ ಸಿನಿಮಾ ಅನುಭವವನ್ನು ನೀಡಿತ್ತು. ಆದರೆ ಈ ಚಿತ್ರವನ್ನು ಮಾಡಲು ಪಟ್ಟಂತಹ ಕಷ್ಟ ಕಂಡಿತವಾಗಿ ಯಾರಿಗೂ ಕೂಡ ತಿಳಿದಿರುವುದಿಲ್ಲ.
ಹೌದು ಲವ್ ಮಾಕ್ಟೇಲ್ ಸಿನಿಮಾಗೂ ಮೊದಲು ನಿಮಗೆಲ್ಲರಿಗೂ ಗೊತ್ತಿರುವಂತೆ ಡಾರ್ಲಿಂಗ್ ಕೃಷ್ಣ ರವರು ಹಲವಾರು ಫ್ಲಾಪ್ ಸಿನಿಮಾಗಳಿಂದ ಕಂಗೆಟ್ಟಿದ್ದರು. ಇನ್ನು ಲವ್ ಮಾಕ್ಟೇಲ್ ಚಿತ್ರದ ಸಂದರ್ಭದಲ್ಲಿ ನಡೆದಂತಹ ಹಲವಾರು ವಿಚಾರಗಳನ್ನು ಲವ್ ಮಾಕ್ಟೇಲ್ 2 ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಎಲ್ಲರ ಎದುರುಗಡೆ ಡಾರ್ಲಿಂಗ್ ಕೃಷ್ಣರವರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಸಂದರ್ಭದಲ್ಲಿ ಏನನ್ನು ಹೇಳಿದ್ದಾರೆ ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.
ಹೌದು ಗೆಳೆಯರೇ ಡಾರ್ಲಿಂಗ್ ಕೃಷ್ಣರವರು ಲವ್ ಮಾಕ್ಟೇಲ್ ಸಿನಿಮಾಗಾಗಿ ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದರು. ಅದಾಗಲೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ರವರು ಮದುವೆಯಾಗುವುದು ಎನ್ನುವುದಾಗಿ ತೀರ್ಮಾನವಾಗಿತ್ತು. ಇಬ್ಬರೂ ಸೇರಿಕೊಂಡು ಸಾಲಸೋಲ ಮಾಡಿಕೊಂಡು ಸಿನಿಮಾವನ್ನು ನಿರ್ಮಿಸುತ್ತಾ. ಮೇಕಪ್ ನಿಂದ ಹಿಡಿದು ನಿರ್ದೇಶನ ತನಕ ಎಲ್ಲವನ್ನು ಇಬ್ಬರೇ ನೋಡಿಕೊಳ್ಳುತ್ತಿದ್ದರು. ಚಿತ್ರೀಕರಣವನ್ನು ದಿನಕ್ಕೆ 20ರಿಂದ 30 ಸಾವಿರ ರೂಪಾಯಿ ಖರ್ಚಿನ ಒಳಗಡೆ ಗಾಗಿ ಮುಗಿಸಿ ಬಿಡುತ್ತಿದ್ದರು. ಚಿತ್ರ ಬಿಡುಗಡೆಯಾದಾಗ ಮೊದ-ಮೊದಲಿಗೆ ನಿರೀಕ್ಷಿತ ಪ್ರದರ್ಶನವನ್ನು ಕಾಣದೆ ಬಾಕ್ಸಾಫೀಸ್ ನಲ್ಲಿ ಕೂಡ ಮಂಕಾಗಿ ಕುಳಿತಿತ್ತು. ಇದರಿಂದಾಗಿ ಡಾರ್ಲಿಂಗ್ ಕೃಷ್ಣರವರು ಸಾಕಷ್ಟು ಡಿಪ್ರೆಶನ್ ಗೆ ಹೋಗಿದ್ದರು.
ತಮ್ಮ ಜೀವನವನ್ನು ಕೊನೆಗಾಣಿಸುವ ನಿರ್ಧಾರಕ್ಕೆ ಕೂಡಾ ಡಾರ್ಲಿಂಗ್ ಕೃಷ್ಣರವರು ಬಂದಿದ್ದರಂತೆ. ನಂತರ ಮಿಲನಾ ನಾಗರಾಜ್ ರವರ ಮುಖವನ್ನು ನೋಡಿ ಆ ಯೋಚನೆಯನ್ನು ಬಿಟ್ಟು ಬಿಟ್ಟಿದ್ದರಂತೆ. ನಂತರದ ದಿನಗಳಲ್ಲಿ ಲವ್ ಮಾಕ್ಟೇಲ್ ಯಾವ ರೀತಿಯ ವಿಜಯವನ್ನು ಸಾಧಿಸಿದೆ ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಲವ್ ಮಾಕ್ಟೇಲ್ 2 ಕೂಡ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಜಯವನ್ನು ಸಾಧಿಸಿದೆ. ಕಷ್ಟ ಪಟ್ಟರೆ ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ಇದೇ ಜೀವಂತ ಉದಾಹರಣೆ.


Leave a Reply

Your email address will not be published. Required fields are marked *