ವಿಂದ್ಯ ಅವರ ದೂರವಾದ ಸಂಸಾರವನ್ನು ಒಂದು ಮಾಡಿದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ! ನಿಜಕ್ಕೂ ಏನಾಗಿತ್ತು ನೋಡಿ

ಸುದ್ದಿ

ಕರ್ನಾಟಕದ ಜನರ ಮೆಚ್ಚಿನ ಕನ್ನಡ ಕಿರುತೆರೆ ಲೋಕದಲ್ಲಿ ಜನರಿಗೆ ಮನೋರಂಜನೆ ನೀಡುವಲ್ಲಿ ಎತ್ತಿದ ಕೈ ಈಗಾಗಲೇ ಸೀರಿಯಲ್ ಗಳು ಜೊತೆ ರಿಯಾಲಿಟಿ ಶೋಗಳು ಕೂಡ ಪ್ರಸಾರವಾಗುತ್ತಿದೆ. ಈಗಾಗಲೇ ಯಶಸ್ವಿಯಾಗಿ ಮುಕ್ತಯಗೊಂಡಿರುವ ಶೋಗಳಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಶೋ ಕೂಡ ಒಂದು. ಕನ್ನಡಿಗರ ಮೆಚ್ಚಿನ ಶೋ ನಮ್ಮಮ್ಮ ಸೂಪರ್ ಸ್ಟಾರ್ ಕೂಡ ಒಂದು ಅದರಲ್ಲಿ ನಟಿ ತಾರಾ, ಸೃಜನ್ ಲೋಕೇಶ್, ನಟಿ ಅನುಪ್ರಭಾಕರ್ ಮುಖ್ಯ ಜಡ್ಜ್ ಆಗಿ ಜನರ ಗಮನ ಸೆಳೆದಿದ್ದರು. ಇನ್ನು ಸ್ಪರ್ದಿಗಳಾಗಿ ತುಂಟ ಹುಡುಗ ರೋಹಿತ್ ಮತ್ತು ಅವರ ತಾಯಿ ವಿಂದ್ಯ ಈ ಜೋಡಿ ಕರ್ನಾಟಕದ ಜನರ ಮನ ಗೆದಿದ್ದರೂ.
ಹಾಗೇ, ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ವಿಂದ್ಯ ಅವರು, ಅವರ ವೈಯಕ್ತಿಕ ಜೀವದಲ್ಲಿ ಸಾಕಷ್ಟು ನೋವನ್ನು ತಿಂದಿದ್ದಾರೆ. ಈ ಬಗ್ಗೆ ನಮ್ಮಮ್ಮ ಸೂಪರ್ ಸ್ಟಾರ್ ವೇದೇಕೆಯಲ್ಲಿ ಅವರು ಹೇಳಿಕೊಂಡಿದ್ದರು. ನವೆಂಬರ್ ಕೊನೆಯ ವಾರದಲ್ಲಿ ಶೋ ಗ್ರಾಂಡ್ ಓಪನಿಂಗ್ ಮಾಡಲಾಗಿತ್ತು. ಈ ಸಮಯದಲ್ಲಿ ಪ್ರತಿಯೊಂದು ಕುಟುಂಬದವರನ್ನು ವೀಕ್ಷಕರಿಗೆ ಪರಿಚಯ ಮಾಡಲಾಗಿತ್ತು. ವಿಂದ್ಯ ಅವರು ಅವರ ಕುಟುಂಬದ ತಮ್ಮ ವೈಯಕ್ತಿಕ ಜೀವನದ ಬದುಕಿನ ಬಗ್ಗೆ ಹೇಳುತ್ತಾ ಭಾವುಕರಾದರು.
ಮತ್ತು ವೇದಿಕೆ ಮೇಲೆ ರೋಹಿತ್ ತುಂಟುತನ ನೋಡಿ ಸೃಜನ್ ಲೋಕೇಶ್ ಅವರು ವಿಂದ್ಯ ಅವರಿಗೆ ಸೃಜನ್ ಪ್ರೆಶ್ನೆ ಮಾಡಿದರು. ಇವನು ನಿಮ್ಮ ಹೊಟ್ಟೆಯಲ್ಲಿ ಇದ್ದಾಗ ಏನು ತಿಂತಾಯಿದ್ದೆ ಅಮ್ಮ? ಅಂತ ಆ ಮಾತಿಗೆ ಉತ್ತರಿಸಿದ ಅವರು ಇಲ್ಲ ಸರ್ ಅವನು 7 ತಿಂಗಳಿಗೆ ಹುಟ್ಟಿದವನು ಅವನು ಫ್ರೀ ಮೆಚ್ಚುರ್ ಬೇಬಿ ಎಂದರು. ಇವನು ಇಷ್ಟು ತುಂಟು ತನದಿಂದನೇ ಇಷ್ಟು ಬೇಗ ಬಂದಿರೋದು ಅಂತ ಸೃಜನ್ ನಗುತ್ತಾ ಹೇಳುದರು. ನಂತರ ವಿಂದ್ಯ ಅವರ ಕುಟುಂಬದಅವರನ್ನು ನಟಿ ಅನುಪಮಾ ಗೌಡ ಪರಿಚಯ ಮಾಡಿಕೊಟ್ಟರು.

ವಿಂದ್ಯ ಅವರ ತಂದೆ ತಾಯಿ ಅವರಿಗೆ ಕಣ್ಣು ಕಾಣಿಸುವುದಿಲ್ಲ ಅವರಿಗೆ ಕಣ್ಣಿಲ್ಲದಿದ್ದರೂ ಮಗಳ ಜೀವನ ಚನ್ನಗಿರಬೇಕು ಎಂದು ಇವಾಗ್ಲೂ ಇಬ್ಬರು ಕೆಲಸ ಮಾಡುತಿದ್ದರೆ. ಬೆಂಗಳೂರಿನ ಪ್ರತಿಷ್ಠಿತ ಹಾಸ್ಪಿಟಲ್ ನಲ್ಲಿ ಫೋನ್ ಬೂತ್ ನೋಡಿಕೊಳ್ಳುವ ಕೆಲಸವನ್ನು ಮಾಡುತಿದ್ದರೆ. ಹೀಗೆ ಸಾಕಷ್ಟು ವಿಚಾರವನ್ನು ಅನುಪಮಾ ಗೌಡ ಅವರು ವಿಂದ್ಯ ಅವರ ಕುಟುಂಬದ ಪರಿಚಯ ಮಾಡಿಕೊಟ್ಟರು.

ನಂತರ ಮಾತಾಡಿದ ವಿಂದ್ಯ ಅವರು ನನಗೆ ಮೂರು ಮಕ್ಕಳು ನನ್ನ ತಂದೆ ತಾಯಿ ಹಾಗೂ ನನ್ನ ಮಗ ಈ ಮೂವರನ್ನು ನಾನೇ ನೋಡಿಕೊಳ್ಳುತ್ತೇನೆ. ನಾನು ಕೆಲಸ ಮಾಡಬೇಕು. ಮಗನಿಗೆ ಒಳ್ಳೆಯ ಭವಿಷ್ಯ ನೀಡಬೇಕು, ಎಂದು ನೀನು ಕೆಲಸಕ್ಕೆ ಹೋಗು ನಾವು ಮಗುವನ್ನು ನೋಡಿಕೊಳ್ಳುತ್ತೇವೆ ಎಂದು ಅಪ್ಪ ಅಮ್ಮ ಹೇಳುತ್ತಾರೆ. ನನ್ನ ತಂದೆ ತಾಯಿ ಇಷ್ಟ ಸಪೋರ್ಟ್ ಮಾಡುತ್ತಿರುದ್ದಕ್ಕೆ ನಾನು ಪುಣ್ಯ ಮಾಡಿರುವೆ, ಎಂದರು ಆದರೆ ಅವರ ವೈವಾಹಿಕ ಜೀವನದಲ್ಲಿ ಒಂದು ದುರಂತವೇ ನಡೆದಿತ್ತು. ನನ್ನ ಜೀವನದ ಬಗ್ಗೆ ಸಾಕಷ್ಟು ಜನರು ಪ್ರೆಶ್ನೆಯನ್ನು ಕೇಳಿದರು.

ಆದರೆ ಎಲ್ಲಿಯೂ ಅದರ ಬಗ್ಗೆ ಮಾತಾಡಿಲ್ಲ. ಇದೀಗ ವಿಂದ್ಯ ಅವರು ಹಾಗೂ ಅವರ ಪತಿ ಒಂದಾಗಿದ್ದು ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ವಿಂದ್ಯ ಅವರ ಮಗ ಹಾಗೂ ಪತಿಯೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ವಿಂದ್ಯ ಅವರು ರಿಯಾಲಿಟಿ ಶೋಗೆ ಬಂದ ಮೇಲೆ ಇವರ ಮನಸ್ಸು ಕರಗಿದಂತೆ ಕಾಣುತ್ತಿದೆ. ಇದೀಗ ಶಿವು ಹಾಗೂ ವಿಂದ್ಯ ದಂಪತಿಗಗಳು ಒಂದಾಗಿದ್ದಾರೆ. ಮತ್ತೆ ಈ ಇಬ್ಬರು ದಂಪತಿಗಳು ಸಂತೋಷ್ದಿಂದ ಜೀವನವನ್ನು ಮುನ್ನಡೆಸಲಿ ಎಂದು ಅವರ ಅಭಿಮಾನಿಗಳ ಆಶಯ.


Leave a Reply

Your email address will not be published. Required fields are marked *