ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್.! ಅಬ್ಬಬ್ಬಾ ಕಾರಿನ ಬೆಲೆ ನೀವು ಕನಸಲ್ಲೂ ಕೇಳಿರಲು ಸಾಧ್ಯವಿಲ್ಲ ನೋಡಿ!!

ಸುದ್ದಿ

ವಿಕ್ರಾಂತ್ ರೋಣ ಸಿನೆಮಾದಲ್ಲಿ ನಟಿಸಿದ ಪೋಷಕ ನಟ ರಾಮು ಅವರು ಕಿಚ್ಚ ಸುದೀಪ್ ಅವರ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ವಿಕ್ರಾಂತ್ ರೋಣ ಸಿನೆಮಾದ ನಿರ್ದೇಶಕ ಅನೂಪ್ ಬಂಡಾರಿ ಅವರಿಗೆ ಕಿಚ್ಚ ಸುದೀಪ್ ದುಬಾರಿ ಕರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಅನ್ನೋ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದರೆ ಕಿಚ್ಚಿ ಸುದೀಪ್ ಅವರು ಅನೂಪ್ ಅವರಿಗೆ ಕಾರನ್ನು ಉಡುಗೊರೆಯಾಗಿ ಯಾವ ಕಾರಣಕ್ಕೆ ಕೊಟ್ಟಿದ್ದಾರೆ ನೋಡೋಣ ಬನ್ನಿ. ಸುದೀಪ್ ಸರ್ ಅವರು ನನ್ನ ಬದುಕಿನಲ್ಲಿ ರಾಮನಂತೆ ನಾನು ಅವರಿಗೆ ಹನುಮಂತ ನಿದ್ದಹಾಗೆ. ಅವರು ನಮ್ಮ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಮಾತ್ರ ಆಗಿರದೆ ನಮ್ಮ ಚಿತ್ರದ ಕ್ಯಾಪ್ಟನ್ ಕೂಡ ಹೌದು.

ಒಂದು ಚಿತ್ರ ಬೆಳ್ಳಿ ಪರದೆಯ ಮೇಲೆ ಕೆಲವು ಗಂಟೆ ಪ್ರದರ್ಶನಗೊಂಡರು ಅದರ ನಿರ್ಮಾಣದ ಹಿಂದನ ಪರಿಶ್ರಮಕ್ಕೆ ವರ್ಷಗಳ ತಂಡದ ಪ್ರಯತ್ನ ಬೇಕಾಗುತ್ತದೆ. ಕಿಚ್ಚ ಸುದೀಪ್ ಅವರು ಎಲ್ಲರನ್ನು ಆತ್ಮೀಯರಾಗಿ ಕಂಡರೂ ಕೆಲವೊಂದು ಜನರ ಹತ್ತಿರ ಮಾತ್ರ ತುಂಬಾ ಸಲುಗೆಯಿಂದ ಇರುತ್ತಾರೆ ಅಂತವರಲ್ಲಿ ನೀವು ಕೂಡ ಒಬ್ಬರು ನಿಮಗೆ ಅವರೊಂದಿಗೆ ಒಡನಾಟ ಹೇಗಾಗುತ್ತದೆ ಎಂದು ಸಂದರ್ಶನದಲ್ಲಿ ಕೇಳಿದ ಪ್ರೆಶ್ನೆಗೆ.

ರಾಮು ಅವರು ಕಿಚ್ಚನ ಅಭಿಮಾನಿಯಾಗಿ ತುಂಬಾ ಸಂತೋಷವಾಗುತ್ತದೆ, ಅದೇ ರೀತಿ ತೆರೆ ಹಿಂದೆ ಅವರ ಸಾಮಾಜಿಕ ಕಾರ್ಯ ಯಾರಿಗೂ ತಿಳಿದಿಲ್ಲ. ಅವರ ಮನೆಗೆ ಗುಲ್ಬರ್ಗ,ಧಾರವಾಡ, ಬಿಜಾಪುರದಿಂದೆಲ್ಲ ಅಭಿಮಾನಿಗಳು ಬಂದರೆ ಅವರಿಗೆ ಊಟ ಮಾಡಿಸದೇ ಹಾಗೆ ಕಳಿಸುವುದೇ ಇಲ್ಲ. ಸುದೀಪ್ ಸರ್ ಸೆಲ್ಫಿ ಕೊಡಲಿಲ್ಲ ಅಂತ ತುಂಬಾ ಜನರು ಹೇಳುತ್ತಾರೆ.

ಆದರೆ ಅವರ ಅಭಿಮಾನಿ ಬಳಗ ದಿನ ದಿಂದ ದಿನಕ್ಕೆ ಹೆಚ್ಚಾಗಿದ್ದು ಎಲ್ಲರಿಗೂ ಸೆಲ್ಫಿ ನೀಡುತ್ತಲೇ ಇದ್ದಾರೆ ಶೋಟಿಂಗ್ ಹೋಗದೆ ದಿನಗಟ್ಟಲೆ ಜನರ ಸೆಲ್ಫಿಗಾಗಿಯೇ ಇರಬೇಕಾಗುತ್ತದೆ. ನನಗೆ ಅವರು ಏರ್ ಪೋರ್ಟ್ ನಿಂದ ಹೆಡ್ ಫೋನ್ ತಂದು ಕೊಟ್ಟಿದ್ದಾರೆ ಅದು ದುಬೈ ನಿಂದ ಅವರು ತಂದಿದ್ದು ಇದರಲ್ಲೇ ಗೊತ್ತಾಗುತ್ತದೆ ಅವರು ನಮ್ಮನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎಂದು.

ರಾ ರಾ ರಕ್ಕಮ್ಮ ಹಾಡಿಗೆ ಜಾನಿ ಮಾಸ್ಟರ್ ಅವರಿಗೆ 18ಲಕ್ಷ ಮೌಲ್ಯದ ಕಾರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಕಿಚ್ಚ. ಅವರ ಬಾಡಿ ಗಾರ್ಡ್ ಅವರಿಗೆ ಬುಲೆಟ್ ಬೈಕ್ ಒಂದನ್ನು ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದರು. ಅಷ್ಟು ಮಾತ್ರ ಅಲ್ಲದೆ ವಿಕ್ರಾಂತ್ ರೋಣ ಚಿತ್ರದ ನಿರ್ದೇಶಕ ಅನೂಪ್ ಬಂಡಾರಿ ಅವರಿಗೆ ಗಿಫ್ಟ್ ನೀಡಿದ್ದಾರೆ ಎಂದು ರಾಮು ಅವರು ಸಂದರ್ಶನದಲ್ಲಿ ಹೇಳಿದ್ದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.

ಸಂದರ್ಶನ ಒಂದರಲ್ಲಿ ರಾಮು ಅವರು ಅನೂಪ್ ಅವರು ಕ್ಯಾಬ್ ನಲ್ಲಿ ಬಂದಿದ್ದನ್ನು ಸುದೀಪ್ ಸರ್ ನೋಡಿದ್ದರು. ಬಳಿಕ ಹೈದ್ರಾಬಾದ್ ಬಂದ ಸಮಯದಲ್ಲಿ ಅನೂಪ್ ಅವರಿಗೆ ಒಂದು ಕಾರ್ ತೆಗೆದುಕೊಂಡು ಉಡುಗೊರೆಯಾಗಿ ನೀಡಿದರು. ಈ ಮೂಲಕ 25ಲಕ್ಷ ರೂ ಮೌಲ್ಯದ ಕೀಯಾ ಕಾರು ಅನೂಪ್ ಅವರ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.

ಕಿಚ್ಚ ಸುದೀಪ್ ಅವರು ಎಂದು ಸ್ವಾರ್ಥ್ ಬದುಕನ್ನು ಬಾಳಲಿಲ್ಲ ಎಂದು ರಾಮು ಅವರು ಹೇಳಿದ್ದಾರೆ. ಸಣ್ಣ ಪುಟ್ಟ ವಿಚಾರದಲ್ಲಿ ಖುಷಿ ಪಡುವ ಇವರ ಮನಸ್ಸು ಅಪ್ಪಟ ಬಂಗಾರ ಎಂದು ರಾಮು ಅವರು ಹೇಳಿದ್ದಾರೆ. ಪೋಷಕ ಪಾತ್ರದಾರಿ ಹಾಗೂ ಖಳನಾಯಕ ನಟ ರಾಮು ಅವರು ಸುದೀಪ್ ಅವರ ಜೊತೆ ರನ್ನ, ಮಾಣಿಕ್ಯ, ವಿಕ್ರಾಂತ್ ರೋಣ, ಇನ್ನು ಹಲವಾರು ಸಿನೆಮಾದಲ್ಲಿ ಅವರ ಜೊತೆ ನಟಿಸಿದ್ದಾರೆ.

ಇನ್ನು ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ 3ಡಿ ಹಾಗೂ 2ಡಿ ಯಲ್ಲಿ ದೇಶದಾದ್ಯಂತ ಬಿಡುಗಡೆಯಾಗಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನೀವು ಇನ್ನು ವಿಕ್ರಾಂತ್ ರೋಣ ಸಿನೆಮಾ ನೋಡಿಲ್ಲ ಅಂದರೆ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *