ಇತ್ತೀಚಿಗೆ ಬಿಡುಗಡೆಯದ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷತ ವಿಕ್ರಾಂತ್ ರೋಣ ಸಿನೆಮಾವು ಬಿಡುಗಡೆಯದ ಎಲ್ಲಾ ಕ್ಷೇತ್ರದಲ್ಲಿಯೂ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಅದರ ಜೊತೆಗೆ ಬಿಡುಗಡೆಯದ ಮೊದಲ ದಿನವೇ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನೆಮಾವು ಕೆಜಿಎಫ್ ಚಿತ್ರದ ಎಲ್ಲಾ ದಾಖಲೆಗಳನ್ನು ಪುಡಿ ಗಟ್ಟಿದೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಸಿನೆಮಾ ನೋಡಿ ಖುಷಿಯಾಗಿ ಹೊರಬಂದಿದ್ದಾರೆ. ಕನ್ನಡದ ಹೆಮ್ಮೆಯ ಕೆಜಿಎಫ್ 2 ಚಿತ್ರದ ನಂತರ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ ಸಿನೆಮಾ ವಿಕ್ರಾಂತ್ ರೋಣ ಎನ್ನುವುದರಲ್ಲಿ ಬೇರೆ ಮಾತಿಲ್ಲ.
ಸಿನೆಮಾದ ಪೋಸ್ಟರ್, ಟೀಸರ್ ಹಾಗೂ ಲಿರಿಕಲ್ ಹಾದಿನಿಂದಲೇ ಅಭಿಮಾನಿಗಳ ಕುತೂಹಲವನ್ನು ಹೆಚ್ಚು ಮಾಡಿತ್ತು. ಅದಲ್ಲದೆ ಕನ್ನಡ, ಹಿಂದಿ, ತೆಲುಗು, ಹಾಗೂ ತಮಿಳು ನಲ್ಲಿ ಕೂಡ ಬಿಡುಗಡೆಯಾಗಿ ಅತೀ ಹೆಚ್ಚು ವೀಕ್ಷಣೆ ಕಂಡಿದೆ. ಹೀಗಾಗಿ ಎಲ್ಲರ ಗಮನವು ವಿಕ್ರಾಂತ್ ರೋಣ ಚಿತ್ರದ ಕಡೆಗೆ ಹಾರಿಸಿತು. ವಿಕ್ರಾಂತ್ ರೋಣ ಚಿತ್ರ ಜುಲೈ 28ಕ್ಕೆ ಭರ್ಜರಿಯಾಗಿ ತೆರೆಕಂಡಿತು.
ಸಿನೆಮಾ ನೋಡಿದ ಎಲ್ಲರೂ ಕೂಡ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಕೆಜಿಎಫ್ 2 ನಂತರ ಸ್ಯಾಂಡಲ್ವುಡ್ ನಲ್ಲಿ ಬಿಡುಗಡೆಯಗಿರುವ ಸಿನೆಮಾ ಇದಾಗಿದ್ದು, ಸಿನಿರಸಿಕರು ಈ ಚಿತ್ರದ ಮೇಲೆ ಇಟ್ಟಿರುವ ನಿರೀಕ್ಷೆ ಅಕ್ಷರಸಹ ಸುಳ್ಳಾಗಿಲ್ಲ. ವಿಶ್ವದಾದ್ಯಂತ ಸುದೀಪ್ ಅಭಿಮಾನಿಗಳು ಸಿನೆಮಾ ನೋಡಿದ್ದು, ಎಲ್ಲೆಡೆ ಹರ್ಷೋದ್ದಾರಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳು ಚಿತ್ರ ನೋಡಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಅದರಲ್ಲಿಯು ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನೆಮಾದ ಬಗ್ಗೆ ಈಗಾಗಲೇ ಎಲ್ಲಿ ನೋಡಿದರಲ್ಲಿ ವಿಮರ್ಶೆಗಳದ್ದೇ ಹಾವಳಿ.
ಅಷ್ಟೇ ಅಲ್ಲದೆ, ಸುದೀಪ್ ಅವರ ವಿಕ್ರಾಂತ್ ರೋಣ ಸಿನೆಮಾವು ಕೆಜಿಎಫ್ 2 ಚಿತ್ರದ ದಾಖಲೆಯನ್ನು ಮುರಿದು ಹಾಕಿ, ಆರನೇ ದಿನಕ್ಕೆ ಎಲ್ಲಾ ಚಿತ್ರಮಂದಿರಗಳಲ್ಲಿ ಇನ್ನು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯದ ಮೊದಲ ದಿವನೇ ವಿಕ್ರಾಂತ್ ರೋಣ ಚಿತ್ರ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಅದರ ಜೊತೆಗೆ ಸರಿಸುಮಾರು 2500 ಸ್ಕ್ರೀನ್ಗಳಲ್ಲಿ 9500 ಅಧಿಕ ಶೋಗಳು ಪ್ರದರ್ಶನ ಗೊಂಡಿದೆ ಎನ್ನಲಾಗಿದೆ.
3ಡಿ ಯಲ್ಲೂ ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಚಿತ್ರ ತೆರೆಕಂಡಿದೆ. ಇದರ ನಡುವೆ ಭಾರತದಲ್ಲಿ ಕನ್ನಡ ಮಲ್ಟಿಫ್ಲೆಕ್ಸ್ ಶೋಗಳ ಸಂಖ್ಯೆಯಲ್ಲಿ ವಿಕ್ರಾಂತ್ ರೋಣ ಸಿನಿಮಾವು ಕೆಜಿಎಫ್ ದಾಖಲೆಯನ್ನು ಉಡೀಸ್ ಮಾಡುವಲ್ಲಿ ಯಶಸ್ವಿಯಾಗಿವೆ. ಹೌದು, ವಿಕ್ರಾಂತ್ ರೋಣ ಚಿತ್ರವು ದೇಶಾದ್ಯಂತ 1047 ಕನ್ನಡ ಶೋಗಳು ದೊರಕಿವೆ. ಕೆಜಿಎಫ್ 2 ಚಿತ್ರಕ್ಕೆ 913 ಶೋಗಳು ಸಿಕ್ಕಿದ್ದವು.
ಈಗಾಗಲೇ ಸಿಕ್ಕ ಮಾಹಿತಿಯ ಪ್ರಕಾರ, ವಿಕ್ರಾಂತ್ ರೋಣ (1600), ಕೆಜಿಎಫ್ 2 (913) ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಿ ಮೊದಲ ಎರಡು ಸ್ಥಾನಗಳಲ್ಲಿವೆ. ತದನಂತರದಲ್ಲಿ , ಜೇಮ್ಸ್ (845), ಯುವರತ್ನ (718) ಮತ್ತು ಪೊಗರು (651) ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿ ಕ್ರಮವಾಗಿ ಟಾಪ್ 5 ಸ್ಥಾನದಲ್ಲಿವೆ ಎನ್ನಲಾಗಿದೆ. ಬಹು ನಿರೀಕ್ಷಿತ ಸಿನಿಮಾವನ್ನು ರಂಗಿತರಂಗ ಹಾಗೂ ರಾಜರಾಥ ಖ್ಯಾತಿಯ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ.
ಕೊರೊನಾ ಕಾರಣದಿಂದ ಹಲವಾರು ಬಾರಿ ಮುಂದೂಡಲ್ಪಟ್ಟ ನಂತರ ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ರಿಲೀಸ್ ಆಗಿದ್ದು, ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆರನೇ ದಿನ ವಿಕ್ರಾಂತ್ ರೋಣ ಅಂದಾಜು 6 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರವು ತನ್ನ ಕಲೆಕ್ಷನ್ಗಳಲ್ಲಿ ಕುಸಿತ ಕಂಡರೂ, ಇದು ಇನ್ನೂ ಶಂಶೇರಾ ಮತ್ತು ಏಕ್ ವಿಲನ್ ರಿಟರ್ನ್ಸ್ಗಳನ್ನು ಮೀರಿಸಿದೆ. ವಿಕ್ರಾಂತ್ ರೋಣ ಈ ವಾರ ಬಾಕ್ಸ್ ಆಫೀಸ್ ನಲ್ಲಿ 150 ಕೋಟಿ ದಾಟಲಿದೆ ಎನ್ನಲಾಗುತ್ತಿದೆ.
ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ಲಿನ್ ಫಾರ್ನ್ಡಿಸ್, ಮಧುಸೂಧನ್ ರಾವ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸುಮಾರು 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ವಿಕ್ರಾಂತ್ ರೋಣ ಸಿನಿಮಾಕ್ಕೆ ನಿರ್ಮಾಪಕರಾದ ಜಾಕ್ ಮಂಜು ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಮಾಡಿದ್ದಾರೆ. ಒಟ್ಟಿನಲ್ಲಿ ಅಭಿಮಾನಿ ದೇವರುಗಳು ವಿಕ್ರಾಂತ್ ರೋಣ ಸಿನಿಮಾವನ್ನು ಮನಸಾರೆ ಮೆಚ್ಚಿ ಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.