ಜೂನಿಯರ್ ರವಿಚಂದ್ರನ್ ಎಂದೇ ಹೆಸರಗಿದ್ದ ಆರ್ಕೆಸ್ಟ್ರಾ ಕಲಾವಿದ ಲಕ್ಷ್ಮಿ ನಾರಾಯಣ್ ಎಂಬುವರು ಇಂದು ವಿದ್ಯುತ್ ಶಾಕ್ ನಿಂದ ಸಾ’ವಿ’ಗಿದಾಗಿದ್ದಾರೆ. ಇಂದು ತುಮುಕೂರು ಜಿಲ್ಲೆಯಲ್ಲಿ ಇಂಥದೊಂದು ಅವಘಡ ನಡೆದುಹೋಗಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೇರೂರು ಗ್ರಾಮದ ನಿವಾಸಿ ಲಕ್ಷ್ಮಿ ನಾರಾಯಣ್ 35 ವರ್ಷದವರು ಸಾ’ವಿ’ಗಿದಾಗಿದ್ದಾರೆ. ಇವರು ಇಂದು ಸಂಪ್ ಗೆ ನೀರು ತುಂಬಿಸಲು ಸಲುವಾಗಿ ಮೋಟರ್ ಆನ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಗಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇವರು ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನಾಗಿ ಕೆಲಸ ಮಾಡುತ್ತಿದ್ದರು. ಸೇಮ್ ರವಿಚಂದ್ರನ್ ಅವರನ್ನು ಹೋಲುವ ಇವರನ್ನು ಎಲ್ಲರು ಜೂನಿಯರ್ ರವಿಚಂದ್ರನ್ ಎಂದೇ ಕರೆಯುತ್ತಿದ್ದರು. ಲಕ್ಷ್ಮಿ ನಾರಾಯಣ್ ಅವರು ಸೇಮ್ ರವಿಚಂದ್ರನ್ ಅವರ ಥರ ಬಟ್ಟೆ ಗಳನ್ನು ಹಾಕುತ್ತಿದ್ದರು.
ಲಕ್ಷ್ಮಿ ನಾರಾಯಣ್ ಅವರು ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಸೇರಿದಂತೆ ಹಲವೆಡೆ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾಡು ಹೇಳುವುದರ ಜೊತೆಗೆ ಕ್ರೀಜಿಸ್ಟಾರ್ ರವಿಚಂದ್ರನ್ ಅವರನ್ನು ಹೋಲುತ್ತಿದ್ದ ಅವರು ರವಿಚಂದ್ರನ್ ಅವರ ಅಭಿನಯವನ್ನು ಸೊಗಸಾಗಿ ಅಭಿನಯಿಸುವ ಮೂಲಕ ಜನರ ಮನೆ ಮಾತಾಗಿದ್ದರು.
ಲಕ್ಷ್ಮಿ ನಾರಾಯಣ್ ಅವರಿಗೆ ರವಿಚಂದ್ರನ್ ಅಂದರೆ ಪ್ರಾಣ ಪ್ರತಿ ವರ್ಷ ನಟ ರವಿಚಂದ್ರನ್ ಅವರು ಹುಟ್ಟುಹಬ್ಬ ದಂದು ಕ್ರೀಜಿಸ್ಟಾರ್ ರವಿಚಂದ್ರನ್ ಅವರ ಮನೆಗೆ ತಪ್ಪದೆ ಲಕ್ಷ್ಮಿ ನಾರಾಯಣ್ ಅವರು ಭಾಗಿಯಾಗುತ್ತಿದ್ದರು. ಈ ವಿಷಯ ತಿಳಿದ ಕೂಡಲೇ ಜೂನಿಯರ್ ರವಿಚಂದ್ರನ್ ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ