ವಿನೋದ್ ರಾಜ್ ಚಿತ್ರರಂಗದಿಂದ ಹೊರಹೋಗಲು ನಿಜಕ್ಕೂ ಕಾರಣ ಏನು ಗೊತ್ತಾ; ತಾಯಿ ಲೀಲಾವತಿ ಬಿಚ್ಚಿಟ್ಟ ರಹಸ್ಯ ಇಲ್ಲಿದೆ ನೋಡಿ..!?

Entertainment

ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ನಟ ಹಾಗೂ ನಟಿಯರ ನಟಿಸಿ ಹೋಗಿದ್ದಾರೆ. ಕೆಲವು ನಟರನ್ನು ನಮ್ಮ ಕನ್ನಡ ಪರೀಕ್ಷಕರು ಮರೆತರೆ ಇನ್ನೂ ಕೆಲವರು ಅವರು ನಟಿಸದೆ ಇದ್ದರೂ ಕೂಡ ಅವರನ್ನು ಸದಾಕಾಲ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅಂಥವರಲ್ಲಿ ಒಬ್ಬ ವ್ಯಕ್ತಿಯ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಈ ನಟ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಐಕಾನ್ ಆಗಿ ಇದ್ದರು. ಅಷ್ಟರಮಟ್ಟಿಗೆ ಇವರ ನೃತ್ಯವನ್ನು ಪ್ರೇಕ್ಷಕರು ಮೆಚ್ಚುತ್ತಿದ್ದರು.
ಹೌದು ನಾವು ಮಾತನಾಡುತ್ತಿರುವುದು ನಟ ವಿನೋದ್ ರಾಜ್ ಅವರ ಕುರಿತಂತೆ. ನಟ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿರುವ ಲೀಲಾವತಿ ಅವರ ಸುಪುತ್ರ. ನಟಿ ಲೀಲಾವತಿ ಅವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಹಾಗೂ ನಂತರದ ದಿನಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡವರು. ಯಾವುದೇ ಪಾತ್ರೆಗಳು ಇದ್ದರೂ ಕೂಡ ಲೀಲಾವತಿಯವರು ಲೀಲಾಜಾಲವಾಗಿ ಮಾಡಿ ಮುಗಿಸುತ್ತಿದ್ದರು. ನಟನೆಯಲ್ಲಿ ಅವರನ್ನು ಮೀರಿಸಬಲ್ಲ ಅಂತಹ ನಟಿ ಇನ್ನೊಬ್ಬರಿಲ್ಲ ಎನ್ನುವಷ್ಟರಮಟ್ಟಿಗೆ ಪ್ರತಿಭಾವಂತರಾಗಿದ್ದರು.
ಇನ್ನು ಅವರ ಮಗನಾಗಿರುವ ವಿನೋದ್ ರಾಜ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಅದಕ್ಕಿಂತ ಹೆಚ್ಚಾಗಿ ಒಬ್ಬ ಡ್ಯಾನ್ಸಿಂಗ್ ಐಕಾನ್ ಆಗಿ ಪ್ರಸಿದ್ಧರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಕೂಡ ವಿನೋದ್ ರಾಜ್ ರವರ ವೆಸ್ಟರ್ನ್ ಶೈಲಿಯ ಡ್ಯಾನ್ಸ್ ನಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಚಿಕ್ಕವಯಸ್ಸಿನಿಂದಲೂ ಕೂಡ ವಿನೋದ್ ರಾಜ್ ರವರು ಮೈಕಲ್ ಜಾಕ್ಸನ್ ರವರನ್ನು ನೋಡಿಕೊಂಡು ಡ್ಯಾನ್ಸ್ ಅನ್ನು ಕಲಿತುಕೊಂಡು ಬಂದವರು. ಆದರೆ ಇಂದು ಅಷ್ಟೊಂದು ಪ್ರತಿಭಾವಂತರಾಗಿದ್ದರೂ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗದಲ್ಲಿ ಯಾರಿಗೂ ಹೇಳದಂತೆ ಕಣ್ಮರೆಯಾಗಿದ್ದರು. ಇದು ನಿಜಕ್ಕೂ ಕೂಡ ಬೇಸರ ತರಿಸುವಂತಹ ವಿಚಾರ.
ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಮಿಂಚಬೇಕಾಗಿದ್ದ ವಿನೋದ್ ರಾಜ್ ರವರು ಇಂದು ತೋಟಗಾರಿಕೆ ಮಾಡಿಕೊಂಡು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ. ಹೌದು ನೆಲಮಂಗಲದಲ್ಲಿ ತಮ್ಮ ತಾಯಿ ಲೀಲಾವತಿ ರವರೊಂದಿಗೆ ತೋಟ ಮಾಡಿಕೊಂಡು ಕೃಷಿ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಕೂಡ ನೆಮ್ಮದಿಯಲ್ಲಿ ಇದ್ದಾರೆ ಎನ್ನುವುದು ಮೆಚ್ಚಬೇಕಾದ ವಿಚಾರ. ಕನ್ನಡ ಪ್ರೇಕ್ಷಕರು ವಿನೋದ್ ರಾಜ್ ರವರನ್ನು ಕನ್ನಡ ಕಿರುತೆರೆ ವಾಹಿನಿ ಪ್ರಸಾರ ವಾಗುವಂತಹ ಡ್ಯಾನ್ಸಿಂಗ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಬರಬೇಕೆನ್ನುವ ಬೇಡಿಕೆಯಿಟ್ಟಿದ್ದರು. ಆದರೆ ವಿನೋದ್ ರಾಜ್ ಅವರು ಇದ್ಯಾವುದಕ್ಕೂ ಕೂಡ ಬರಲಿಲ್ಲ.
ಕನ್ನಡ ಚಿತ್ರರಂಗ ದಲ್ಲಿ ಮಿಂಚಿ ಮರೆಯಬೇಕಾದ ವಿನೋದ್ ರಾಜ್ ರವರು ಯಾಕೆ ಚಿತ್ರರಂಗದಿಂದ ಹೊರ ಹೋಗುವಂತಾಯಿತು ಎಂಬುದು ಎಲ್ಲರ ತಲೆ ಕೆಡಿಸುವಂತಹ ಪ್ರಶ್ನೆಯಾಗಿದೆ. ಇದಕ್ಕೆ ಸ್ವತಹ ಅವರು ತಾಯಿಯಾಗಿರುವ ಲೀಲಾವತಿಯವರ ಉತ್ತರ ನೀಡಿದ್ದಾರೆ. ಅವರ ಮಗ ಎನ್ನುವ ಕಾರಣಕ್ಕಾಗಿ ಕೂಡ ಚಿತ್ರರಂಗದಲ್ಲಿ ವಿನೋದ್ ರಾಜ್ ರವರು ಸಾಕಷ್ಟು ವಿರೋಧಗಳನ್ನು ಎದುರಿಸುವ ಪರಿಸ್ಥಿತಿ ಕೂಡ ಬಂದಿತ್ತು. ಚಿತ್ರರಂಗದಿಂದ ವಿನೋದ್ ರಾಜ್ ಹೊರಹೋಗಲು ಯಾರು ಕಾರಣ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ.
ಹೌದು ಚಿತ್ರರಂಗದಲ್ಲಿರುವ ಕೆಲವು ನಿರ್ಮಾಣ ಸಂಸ್ಥೆಗಳು ಹಾಗೂ ನಿರ್ಮಾಪಕರು ಮತ್ತು ನಿರ್ದೇಶಕರು ವಿನೋದ್ ರಾಜ್ ರವರು ಚಿತ್ರರಂಗದಿಂದ ಹೊರಬರಲು ಕಾರಣ ಎಂಬುದನ್ನು ನಟಿ ಲೀಲಾವತಿ ಹೊರಹಾಕಿದ್ದಾರೆ. ಇತ್ತೀಚಿಗಷ್ಟೇ ಲಾಕ್ಡೌನ್ ಸಂದರ್ಭದಲ್ಲಿ ತಾಯಿ ಮಗ ಇಬ್ಬರು ಕೂಡ ತಮ್ಮ ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಬಡವರಿಗೆ ಔಷಧಿಗಳನ್ನು ನೀಡಿ ಸಹಾಯ ಮಾಡಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.


Leave a Reply

Your email address will not be published. Required fields are marked *