ವಿಷ್ಣುವರ್ಧನ್ ಅವರ ಆರೋಗ್ಯ ಹದಗೆಡಲು ಹಿಂದಿನ ಅಸಲಿ ರಹಸ್ಯ ತಿಳಿದಿದೆಯೇ ನಿಮಗೆ ? ನೋಡಿ ಅಚ್ಚರಿಯ ಸಂಗತಿ

ಸುದ್ದಿ

ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಬಗ್ಗೆ ನಿಮಗೊಂದು ಬೇಸರದ ಸಂಗತಿ ನಿಮಗೆ ತಿಳಿಸುತ್ತೇವೆ ಬನ್ನಿ. ವಿಷ್ಣುವರ್ಧನ್ ಅವರು ದಿನಕಳೆದಂತೆ ಸ್ವಲ್ಪ ದಪ್ಪವಾಗುತ್ತಿದ್ದರು, ಇದನ್ನು ಕಂಡ ಅವರ ಆತ್ಮೀಯರು ವಿಷ್ಣುವರ್ಧನ್ ಅವರಿಗೆ ಯಾಕೆ ದಪ್ಪ ಆಗುತ್ತಿದ್ದೀಯ ಎಂದು ಕೇಳುತ್ತಿದ್ದರು. ವಿಷ್ಣುವರ್ಧನ್ ಅವರಿಗೆ ಯಾರಾದರೂ ದೊಡ್ಡ ಮನುಷ್ಯರು ಅಥವಾ ತುಂಬಾ ಆತ್ಮೀಯರು ಯಾವುದಾದರೂ ಒಂದು ವಿಷಯವನ್ನು ಹೇಳಿದರೆ ಆ ವಿಷಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು.

ಹೀಗೆ ಒಬ್ಬ ವ್ಯಕ್ತಿ ವಿಷ್ಣುವರ್ಧನ್ ಅವರಿಗೆ ಯಾಕೆ ಇಷ್ಟೊಂದು ದಪ್ಪ ಆಗಿದ್ದೀರಿ, ಸಿನೆಮಾದಲ್ಲಿ ಮಾಡಬೇಕಾದರೆ ದೇಹವನ್ನು ಸಮತೋಲನವಾಗಿ ಇಟ್ಟುಕೊಳ್ಳಬೇಕು ಅದಕ್ಕಾಗಿ ನೀವು ಹೊರದೇಶಕ್ಕೆ ಹೋಗಿ, ಅಲ್ಲಿ ರಕ್ತವನ್ನು ತೆಗೆದು ನಿಮ್ಮನ್ನು ಸಣ್ಣ ಮಾಡಿ ಕಳುಹಿಸುತ್ತಾರೆ ಎಂದಿದ್ದಾರೆ. ಈ ವಿಷಯ ವಿಷ್ಣುವರ್ಧನ್ ಅವರ ಮನಸ್ಸಿನಲ್ಲಿ ಆಳವಾಗಿ ಅಡಗಿತ್ತು ಮತ್ತು ತಾನು ಸಣ್ಣ ಆಗಲೇಬೇಕು ಎಂದು ವಿಷ್ಣುವರ್ಧನ್ ಅವರು ಒಂದು ಬಾರಿ ಹೊರದೇಶಕ್ಕೆ ಹೋಗಿ ರಕ್ತವನ್ನು ತೆಗೆಸಿಕೊಂಡು ಬಂದಿದ್ದರು.

ಆದರೆ ವಿಷ್ಣುವರ್ಧನ್ ಒಂದು ಬಾರಿ ಹೊರ ದೇಶಕ್ಕೆ ಹೋಗಿ ರಕ್ತವನ್ನು ತೆಗೆಸಿಕೊಂಡು ಬಂದ ಮೇಲೆ ಪುನಃ ಮೊದಲಿನಂತೆ ಆಗಲೇ ಇಲ್ಲ, ಅಂದಿನಿಂದ ಅವರಿಗೆ ಒಂದಲ್ಲ ಒಂದು ಅರೋಗ್ಯದ ಸಮಸ್ಯೆಗಳು ಕಾಡಲು ಪ್ರಾರಂಭವಾಯಿತು. ಈ ಹಿಂದೆ ವಿಷ್ಣುವರ್ಧನ್ ಎಡಕೈಯಲ್ಲಿ ಯಾರನ್ನಾದರೂ ಹಿಡಿದುಕೊಂಡಿದ್ದರೆ ಆ ವ್ಯಕ್ತಿಯನ್ನು ಬಿಡಿಸಿಕೊಳ್ಳುವುದಕ್ಕೆ ಬಹಳ ಕಷ್ಟವಾಗುತ್ತಿತ್ತು. ಆದರೆ ಟ್ರೇಟ್ಮೆಂಟ್ ತೆಗೆದುಕೊಂಡು ಬಂದಮೇಲೆ ಅವರಿಗೆ ಅರೋಗ್ಯದಲ್ಲಿ ಏರುಪೇರು ಆಗಲು ಶುರುಶುರುವಾಯಿತು.

ಆರೋಗ್ಯದಲ್ಲಿ ಎಷ್ಟು ಏರುಪೇರು ಆಯಿತು ಎಂದರೆ ಸಕ್ಕರೆ ಕಾಯಿಲೆ ಹಾಗೂ ಬ್ಲೆಡ್ ಪ್ರೆಶರ್ ಕೂಡ ಅವರಿಗೆ ಬಂತು. ವಿಷ್ಣುವರ್ಧನ್ ಅವರು ಯಾವುದೊ ಒಂದು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ತುಂಬಾ ಕೊರಗುತ್ತಿದ್ದರು. ಆದರೆ ಅವರು ಯಾರೊಂದಿಗೂ ಆ ವಿಷಯದ ಬಗ್ಗೆ ಚರ್ಚೆ ಮಾಡುತ್ತಿರಲಿಲ್ಲ.

ಅದನ್ನು ಬಿಟ್ಟರೆ ಬೇರೆ ಯಾವ ಚಿಂತೆಯೂ ವಿಷ್ಣುವರ್ಧನ್ ಅವರಿಗೆ ಇರಲಿಲ್ಲ. ಆರೋಗ್ಯವನ್ನು ತುಂಬಾ ಚನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗಿದ್ದರೂ ವಿಷ್ಣುವರ್ಧನ್ ಅವರ ಕೊನೆಯ ದಿನಗಳಲ್ಲಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರಲಿಲ್ಲ ಹೀಗಿರುವಾಗ ಕರ್ನಾಟಕ ಕಂಡ ನೆಚ್ಚಿನ ನಟನನ್ನು ನಾವು ಕಳೆದುಕೊಂಡೆವು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *