ವೇದ ಸಿನಿಮಾದಲ್ಲಿ ಯಾರು ಊಹಿಸಲಾಗದ ಸರ್ಪ್ರೈಸ್ ಸಿಗಲಿದೆ ಎಂದ ಶಿವಣ್ಣ ಏನದು ಗೊತ್ತಾ..!?

Uncategorized

ನಮಸ್ಕಾರ ಸ್ನೇಹಿತರೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಇದ್ದಷ್ಟು ದಿನ ನಮ್ಮ ಕನ್ನಡ ಚಿತ್ರರಂಗದಲ್ಲಿ ರಾಜನಂತೆ ಬಾಳಿ ಬದುಕಿ ಹೋದವರು. ದೊಡ್ಡಮನೆಯ ಹುಡುಗನಾಗಿ ಕನ್ನಡ ಚಿತ್ರರಂಗದಲ್ಲಿ ಗಮನಾರ್ಹ ಹಾಗೂ ಪ್ರಶಂಸಾರ್ಹ ಸಾಧನೆಗಳನ್ನು ಮಾಡಿ ಹೋಗಿದ್ದಾರೆ.
ನಿಜಕ್ಕೂ ಕೂಡ ಅವರನ್ನು ಕನ್ನಡ ಚಿತ್ರರಂಗ ಪಡೆದಿರುವುದಕ್ಕೆ ನಾವೆಲ್ಲ ಧನ್ಯರು ಎಂದು ಹೇಳಬಹುದಾಗಿದೆ. ಕೇವಲ ನಾಯಕನಟನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿ ಕೂಡ ಹೊಸ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅವರಂತಹ ನಟ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ವರ ಎಂದು ಹೇಳಬಹುದಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈಗಾಗಲೇ ಎಷ್ಟೊಂದು ಸಮಾಜ ಸೇವೆಗಳನ್ನು ಮಾಡಿದ್ದಾರೆ ಎನ್ನುವುದು ಕೂಡ ಅವರ ಮರಣದ ನಂತರ ನಮಗೆ ತಿಳಿದು ಬಂದಿದೆ. ಅಭಿಮಾನಿಗಳಾಗಿ ನಮಗೆ ಇಷ್ಟೊಂದು ಅವರ ಮರಣದ ವಿಚಾರ ಬೇಸರವನ್ನು ತರಿಸಿದೆ ಎಂದರೆ ಇನ್ನು ಅವರ ಒಡಹುಟ್ಟಿದವರು ಆಗಿರುವ ಶಿವಣ್ಣನವರಿಗೆ ಎಷ್ಟು ಬೇಸರವಾಗಿಲ್ಲ ಬೇಡ ನೀವೇ ಲೆಕ್ಕ ಹಾಕಿ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದಿರುವ ಜೇಮ್ಸ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ಬೇರೆ ಎಲ್ಲ ಸೆಲೆಬ್ರಿಟಿಗಳ ಜೊತೆಗೆ ಶಿವಣ್ಣ ಕೂಡ ಹಾಜರಿದ್ದರು. ಈ ಸಂದರ್ಭದಲ್ಲಿ ಶಿವಣ್ಣ ತನ್ನ ತಮ್ಮನಾಗಿರುವ ಅಪ್ಪು ಅವರನ್ನು ನೆನೆಸಿಕೊಂಡು ಭಾವುಕರಾಗಿ ಗದ್ಗದಿತರಾದರು. ಇದೇ ಮಾರ್ಚ್ 17 ರಂದು ಬಿಡುಗಡೆಯಾಗಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ ಚಿತ್ರಕ್ಕೆ ಶುಭವನ್ನು ಹಾರೈಸಿದ್ದಾರೆ. ಇಷ್ಟು ಮಾತ್ರವಲ್ಲದೆ ಪುನೀತ್ ರಾಜಕುಮಾರ್ ರವರ ಕುರಿತಂತೆ ಒಂದು ವಿಶೇಷವಾದ ವಿಚಾರವೊಂದನ್ನು ಹೊರಹಾಕಿದ್ದಾರೆ.
ಹೌದು ಮುಂದಿನ ದಿನಗಳಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ವೇದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಕೂಡ ಇದ್ದಾರೆ ಎನ್ನುವುದಾಗಿ ಶಿವಣ್ಣ ಹೇಳಿದ್ದಾರೆ. ಮಾಹಿತಿಗಳ ಪ್ರಕಾರ ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ಕರೆ ತಂದಂತೆ ಅಪ್ಪು ಅವರನ್ನು ವೇದ ಚಿತ್ರದಲ್ಲಿ ಗ್ರಾಫಿಕ್ಸ್ ಮೂಲಕ ಕಾರ್ಯ ತರುವ ಪ್ರಯತ್ನ ನಡೆಯಬಹುದು ಎಂದು ಕೇಳಿ ಬರುತ್ತಿದೆ. ಈ ಮೂಲಕ ಅಣ್ಣತಮ್ಮ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಅದೆಷ್ಟು ಅಭಿಮಾನಿಗಳ ಕನಸು ಈಡೇರಲಿದೆ ಎಂಬುದಾಗಿ ಕೇಳಿಬರುತ್ತಿದೆ.


Leave a Reply

Your email address will not be published. Required fields are marked *