ನಮಸ್ತೆ ಪ್ರೀತಿಯ ವೀಕ್ಷಕರೆ ಕನ್ನಡ ಚಿತ್ರರಂಗದಲ್ಲಿ 90 ದಶಕದಲ್ಲಿ ಗಂಡು ಹೈಕಳ ಹೃದಯವನ್ನು ಕದ್ದ ಕನಸಿನ ರಾಣಿ ಮಾಲಾಶ್ರೀ ಅವರು ಮತ್ತೆ ಸಿನಿಮರಂಗಕ್ಕೆ ಬರುತ್ತಿದ್ದಾರೆ. ತನ್ನ ಪತಿಯ ಅಗಲಿಕೆಯ ನೋವಿನ ವರ್ಷಗಳ ನಂತರ ಮಾಲಾಶ್ರೀ ನೈಟ್ ಕರ್ಫ್ಯೂ ಚಿತ್ರದ ಮೂಲಕ ಮತ್ತೆ ಸಿನೆಮಾಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಲಾಶ್ರೀಯವರು ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಹೆಸರುಗಳಿಸಿದ್ದರು.ಮಾಲಾಶ್ರೀ ಅವರು ಹುಟ್ಟಿದ್ದು 10 ಆಗಸ್ಟ್ 1973 ರಲ್ಲಿ. ಇವರು ಮೊದಲಿಗೆ ಬಾಲ ನಟಿಯಾಗಿ ಸಿನೆಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.ಇದುವರೆಗೂ ಸುಮಾರು 34 ಸಿನೆಮಾಗಲ್ಲಿ ನಟಿಸಿದ್ದಾರೆ.
ಇನ್ನೂ ಇವರು 1989 ರಲ್ಲಿ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಸಿನೆಮಾದಲ್ಲಿ ಒಬ್ಬ ದುರಂಕಾರದ ಗಂಡುಬೀರಿ ಮಹಿಳೆಯಾಗಿ ಅಭಿನಯಿಸಿ ಆ ಪಾತ್ರಕ್ಕೆ ಇಡೀ ಸಿನೆಮಾರಂಗವೇ ಜೈಕಾರ ಹಾಕಿತ್ತು. ಇನ್ನೂ ಗಜಪತಿ ಗರ್ವಭಂಗ, ಪ್ರತಾಪ್, ಕಿತ್ತೂರಿನ ಹುಲಿ, ಮತ್ತು ತವರುಮನೆ, ಚಾಮುಂಡಿ, ಕಿರಣ್ ಬೇಡಿ, ಶಕ್ತಿ, ವೀರ ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಲಾಶ್ರೀ ನಟಿಸಿದ ಹಲವು ಸಿನೆಮಾಗಳು ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು.ಹೀಗೆ ಕನ್ನಡ ಸಿನೆಮಾರಂಗದ ದೊಡ್ಡ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು.ಇನ್ನೂ ಮಾಲಾಶ್ರೀ ಅವರು ನಟಿಸಿರುವ ಹೆಚ್ಚಿನ ಸಿನೆಮಾದಲ್ಲಿ ಇವರೇ ಮುಖ್ಯ ಪಾತ್ರದಲ್ಲಿ ಇರುವುದರಿಂದ ನಾಯಕರು ಪಾತ್ರಗಳ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ವಿಶೇಷವಾಗಿದೆ. ಇದರಿಂದ ಇವರ ಅಭಿನಯಕ್ಕೆ ಹಲವು ಪ್ರಶಸ್ತಿಗಳು ದೊರಕಿತ್ತು.
ಕೋಟಿ ನಿರ್ಮಾಪಕ ರಾಮು ಅವರು ನಿರ್ಮಿಸಿರುವ ಅರ್ಜುನ್ ಗೌಡ ಚಿತ್ರದ ಫ್ರೀ ರಿಲೀಸ್ ಈವೆಂಟ್ ನಲ್ಲಿ ನಟಿ ಮಾಲಾಶ್ರೀ ಭಾಗವಹಿಸಿದ್ದರು.ರಾಮು ಅವರು ಅಗಲಿದ ವರ್ಷಗಳ ನಂತರ ಅವರು ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದರು. ರಾಮು ನೆನಪಿಗಾಗಿ ಅವರ ಬ್ಯಾನರ್ ನಲ್ಲಿ ನಟಿಸಿದ ಎಲ್ಲಾ ನಟರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದರು. ರವಿಚಂದ್ರನ್, ಶಿವಣ್ಣ, ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ದೇವರಾಜ್, ಪ್ರಜ್ವಲ್ ದೇವರಾಜ್, ಸಾಧು ಕೋಕಿಲ ಹೀಗೆ ಹಲವಾರು ನಟರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಇದೇ ವೇಳೆ ಶಿವಣ್ಣ ಮಾತನಾಡುತ್ತ ನಟಿ ಮಾಲಾಶ್ರೀ ಅವರಿಗೆ ಒಂದು ಪ್ರಾಮಿಸ್ ಮಾಡಿದರು. ಇದುವರೆಗೂ ನಾನು ರಾಮು ಬ್ಯಾನರ್ ನಲ್ಲಿ ಆರು ಸಿನೆಮಾ ಮಾಡಿದ್ದೀನಿ ನಿಮ್ಮ ಪ್ರೊಡಕ್ಷನ್ ನಿಲ್ಲಿಸಬೇಡಿ ಇದೇ ಕೊನೆ ಸಿನೆಮಾ ಅಂಥ ಹೇಳಬೇಡಿ ನೀವು ಮುಂದುವರಿಸಿ ನಾವೆಲ್ಲರೂ ನಿಮ್ಮ ಜೊತೆಯಲ್ಲಿದ್ದೀವಿ, ಸಿಂಹ ನಿಮ್ಮ ಬ್ಯಾನರ್ ನಲ್ಲೆ ಮಾಡೋಣ. ನಾನು ಖಂಡಿತಾ ಮಾಡುತ್ತೇನೆ ಇದು ನಾನು ಮಾಡುತ್ತಿರುವ ಪ್ರಾಮಿಸ್ ಎಂದು ಶಿವಣ್ಣ ಮಾಲಾಶ್ರೀ ಅವರಿಗೆ ಮಾತು ಕೊಟ್ಟರು.
ಶಿವಣ್ಣನ ಕಂಡು ಭಾವುಕರಾದ ನಟಿ ಮಾಲಾಶ್ರೀ ಇತ್ತೀಚಿಗೆ ನಟಿ ಮಾಲಾಶ್ರೀ ಸಿನೆಮಾದ ಶೋಟಿಂಗ್ ನಲ್ಲಿದ್ದಾಗ ಅಲ್ಲಿಗೆ ಶಿವಣ್ಣ ಎಂಟ್ರಿ ಕೊಟ್ಟಿದ್ದಾರೆ. ಮಾತ್ರವಲ್ಲದೆ ತುಂಬಾ ಆತ್ಮೀಯವಾಗಿ ಮಾತನಾಡಿದ್ದಾರೆ. ಕುಟುಂಬದ ಜೊತೆ ಪ್ಯಾರಿಸ್ ಸೇರಿದಂತೆ ಇನ್ನಿತರ ಸ್ಥಳಕ್ಕೆ ಭೇಟಿ ನೀಡಿದರ ಬಗ್ಗೆ ಕೂಡ ಶಿವಣ್ಣ ಕುತೂಹಲದಿಂದ ಕೇಳಿದ್ದು ಅದಕ್ಕೆ ಮಾಲಾಶ್ರೀ ಅವರು ಪ್ರೀತಿಯಿಂದ ಉತ್ತರ ನೀಡಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ಶಿವಣ್ಣ ಶುಭಕೋರಿ ಅಲ್ಲಿಂದ ಹೊರಟರು.
ಮಾಲಾಶ್ರೀ ಮತ್ತು ಶಿವಣ್ಣ ಅಂದಿನ ಹಿಟ್ ಪೇರ್ ಅಗಿದ್ದು ವೈಯಕ್ತಿಕ ಬದುಕಿನಲ್ಲೂ ಕೂಡ ಒಳ್ಳೇ ಸ್ನೇಹಿತರು ಕೂಡ.ಈ ಮೂಲಕ ಶಿವಣ್ಣನನ್ನು ಕಂಡು ನಟಿ ಮಾಲಾಶ್ರೀ ಭವುಕರಾದ ವಿಡಿಯೋ ತುಂಬಾ ವೈ’ರಲ್ ಆಗಿದ್ದೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದೆ. ಈ ವಿಡಿಯೋ ನೀವು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.