ಶಿವಣ್ಣ ಹಾಗೂ ವಿಷ್ಣುವರ್ಧನ್ ರವರು ಒಂದೇ ಸಿನಿಮಾದಲ್ಲಿ ನಟಿಸಬೇಕಾಗಿತ್ತು; ಆದರೆ ಅಲ್ಲಿ ಆಗಿದ್ದೇ ಬೇರೆ. ಯಾವುದು ಗೊತ್ತಾ ಆ ಸಿನಿಮಾ..!?

ಸುದ್ದಿ

ನಿಮಗೆಲ್ಲರಿಗೂ ತಿಳಿದಿರುವಂತೆ ಸಾಹಸಸಿಂಹ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಎಲ್ಲರಿಂದಲೂ ಕೂಡ ಗೌರವಿಸಲ್ಪಟ್ಟಂತಹ ನಟ. ಸ್ವತಹ ಕನ್ನಡ ಚಿತ್ರರಂಗದ ದೇವರು ಹಾಗೂ ನಟ ಸಾರ್ವಭೌಮ ಎಂದೇ ಖ್ಯಾತರಾಗಿರುವ ಡಾಕ್ಟರ್ ರಾಜಕುಮಾರ್ ಅವರು ಕೂಡ ವಿಷ್ಣುವರ್ಧನ್ ಅವರನ್ನು ತಮ್ಮ ಸಹೋದರರಂತೆ ಕಾಣುತ್ತಿದ್ದರು. ರಾಜಕುಮಾರ್ ರವರ ಹಿರಿಯ ಮಗನಾಗಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೂ ಕೂಡ ವಿಷ್ಣುವರ್ಧನ್ ರವರು ಎಂದರೆ ಎಲ್ಲಿಲ್ಲದ ಪ್ರೀತಿಯಂತೆ.

ಶಿವಣ್ಣ ವಿಷ್ಣುವರ್ಧನ್ ಅವರಿಗೆ ಸಾಕಷ್ಟು ಪ್ರೀತಿ ಹಾಗೂ ಗೌರವಗಳನ್ನು ನೀಡುತ್ತಿದ್ದರು. ಇನ್ನು ಒಂದು ಕಾರ್ಯಕ್ರಮದಲ್ಲಿ ವಿಷ್ಣುವರ್ಧನ ರವರೊಂದಿಗೆ ಸಿನಿಮಾದಲ್ಲಿ ನಟಿಸುವಂತಹ ಅವಕಾಶವಿತ್ತು ಆದರೆ ಆ ಕನಸು ಎನ್ನುವುದು ಕೊನೆಗೂ ಕನಸಾಗಿಯೇ ಕುಳಿತು ಎಂಬುದಾಗಿ ಭಾವುಕರಾಗಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಶಿವಣ್ಣ ಹಾಗೂ ವಿಷ್ಣುವರ್ಧನ್ ರವರು ಯಾವ ಸಿನಿಮಾದಲ್ಲಿ ಜೊತೆಯಾಗಿ ನಟಿಸಬೇಕಾಗಿತ್ತು ಎನ್ನುವುದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ಈ ವಿಚಾರ ಕೇಳಿದ ನಿಮಗೂ ಕೂಡ ಆಶ್ಚರ್ಯ ಆಗಬಹುದು ಆದರೆ ಇದು ನೂರಕ್ಕೆ ನೂರರಷ್ಟು ನಿಜ. ವಿಷ್ಣುವರ್ಧನ್ ರವರು ಹಾಗೂ ಶಿವಣ್ಣ ಒಂದೇ ಸಿನಿಮಾದಲ್ಲಿ ನಟಿಸಬೇಕಾಗಿತ್ತು. ಆದರೆ ಹಲವಾರು ಕಾರಣಗಳಿಂದಾಗಿ ಈ ಸಿನಿಮಾ ಸೆಟ್ಟೇರಲಿಲ್ಲ.

ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಸಾಹಿತ್ಯ ಬರಹಗಾರ ಚಿ ಉದಯಶಂಕರ್ ಅವರು ಮಹಾಭಾರತದ ಕೃಷ್ಣ ಅರ್ಜುನನನ್ನು ಇಟ್ಟುಕೊಂಡು ಈ ಜನರೇಷನ್ ಗೆ ಕಥೆ ಮಾಡಿ ಕೃಷ್ಣಾರ್ಜುನ ಎನ್ನುವ ಟೈಟಲ್ ಕೂಡ ಇಟ್ಟಿದ್ದರು. ಈ ಕುರಿತಂತೆ ಶಿವಣ್ಣನವರಿಗೆ ಹೇಳಿದಾಗ ವಿಷ್ಣುವರ್ಧನ್ ಅವರ ಜೊತೆಗೆ ಸಿನಿಮಾ ಮಾಡುವುದಕ್ಕೆ ನಾನಂತೂ ಸದಾ ಸಿದ್ಧ ಎನ್ನುವುದಾಗಿ ಹೇಳಿದರಂತೆ. ವಿಷ್ಣುವರ್ಧನ್ ರವರು ಕೂಡ ಶಿವಣ್ಣರವರ ಜೊತೆಗೆ ನಟಿಸಲು ಒಪ್ಪಿದ್ದರು. ಇನ್ನು ಕತೆಯನ್ನು ಅಣ್ಣಾವ್ರು ಹಾಗೂ ಪಾರ್ವತಮ್ಮನವರು ಕೂಡ ಒಪ್ಪಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದರು. ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಚಿ ಉದಯಶಂಕರ್ ಅವರು ತಮ್ಮ ಸಹೋದರಿಗೆ ನಿಗೆ ನೀಡಿದ್ದರು.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಚಿತ್ರೀಕರಣಗೊಂಡು ಒಂದು ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ದೊಡ್ಡಮಟ್ಟದ ದಾಖಲೆ ಮಾಡಬೇಕಾಗಿತ್ತು. ಆದರೆ ನಡೆದು ಬಂದಂತಹ ಹಲವಾರು ಸಮಸ್ಯೆಗಳಿಂದಾಗಿ ಸಿನಿಮಾ ಸೆಟ್ಟೇರಲೇ ಇಲ್ಲ. ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಕೂಡ ಶಿವಣ್ಣನವರು ಈ ಚಿತ್ರದ ಕುರಿತಂತೆ ನೆನೆದು ವಿಷ್ಣುವರ್ಧನ್ ರವರ ಜೊತೆಗೆ ಸಿನಿಮಾ ಮಾಡುವಂತಹ ಕನಸು ಕನಸಾಗಿಯೇ ಉಳಿದಿದೆ ಎಂಬುದಾಗಿ ಹೇಳಿಕೊಂಡಿದ್ದರು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ. ಇವರಿಬ್ಬರ ಈ ಸಿನಿಮಾದ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿಗಳು ನಿಮಗೆ ತಿಳಿದಿದ್ದರೆ ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *