ನಮಸ್ತೆ ಪ್ರೀತಿಯ ವೀಕ್ಷಕರೆ, ಕಿರುತೆರೆ ಲೋಕದಲ್ಲಿ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಕಿಚ್ಚ ಸುದೀಪ್ ಅವರು ನಡೆಸಿ ಕೊಡುತ್ತಿರುವ ಬಿಗ್ ಬಾಸ್ ಶೋ. ಈ ಸೀಸನ್ ಬಿಗ್ ಬಾಸ್ ಓಟಿಟಿ ನಲ್ಲಿ ಅನೇಕ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ, ಪ್ರತಿಯೊಬ್ಬರ ಜೀವನದಲ್ಲೂ ಸಾಕಷ್ಟು ಕಷ್ಟ ನೋವುಗಳನ್ನ ಪಟ್ಟು ಮೇಲೆ ಬಂದಿರುತ್ತಾರೆ. ಹೊರಗಿನ ಲೋಕಕ್ಕೆ ಅವರು ಸಾಕಷ್ಟು ಸಂತೋಷವಾಗಿದ್ದಂತೆ ಕಾಣಿಸಿದ್ರು ಮನಸ್ಸಿನಲ್ಲಿ ನೂರಾರು ನೋವುಗಳು ಅವರನ್ನು ಕಾಡುತ್ತಲೇ ಇರುತ್ತದೆ.
ಕನ್ನಡ ಮಾಧ್ಯಮದಲ್ಲಿ ತನ್ನದೇಯಾದ ವಾಕ್ ಚತುರ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೋಮಣ್ಣ ಅವರು ಇದೀಗ ಬಿಗ್ ಬಾಸ್ ನಲ್ಲಿ ತಮ್ಮ ಮನಸ್ಸಿನ ನೋ-ವಿ-ನ ಕಥೆಯನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಮಾಧ್ಯಮ ಲೋಕದಲ್ಲಿ ಸೋಮಣ್ಣ ಅವರು ತನ್ನದೇ ಆದಂತಹ ಸಾಧನೆ ಮಾಡಿದ್ದಾರೆ. ನಾನು ನನ್ನ ಸಾಧನೆ ಎನ್ನುವ ಸಾಧಕರ ಯಶೋಗಾಥೆ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಸೋಮಣ್ಣ ಇದೀಗ ಬಿಗ್ ಬಾಸ್ ಓಟಿಟಿ ಸೀಸನ್ 1ಗೆ ಎಂಟ್ರಿ ಕೊಟ್ಟಿದ್ದಾರೆ.
ಹೌದು ಸೋಮಣ್ಣ ನ್ಯೂಸ್ ಫಸ್ಟ್ ಕನ್ನಡ ವಾಹಿನಿಯಲ್ಲಿ ಕೆಲಸಮಾಡುತ್ತಿರುವ ವೇಳೆ ಬೆಳಿಗ್ಗೆ ಸಂದರ್ಶನ ನಡೆಸಿ ಮದ್ಯಾಹ್ನ ದ ಸಂದರ್ಭದಲ್ಲಿ ಕೋರ್ಟ್ ಗೆ ಹಾಜರಾಗುತ್ತಿದ್ದರಂತೆ. ಪ್ರತಿ ದಿನ ಸಂದರ್ಶನ ಚಾನಲ್ ಎಂದು ಬ್ಯುಸಿಯಾಗುತ್ತಿದ್ದ ಸೋಮಣ್ಣ ತನ್ನ ಹೆಂಡತಿಗೆ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಇದೆ ಕಾರಣಕ್ಕೆ ಸೋಮಣ್ಣ ಹೆಂಡತಿ ಡೈ-ವೋ-ರ್ಸ್ ಕೊಡಲು ಮುಂದಾಗಿದ್ದು ಸಂದರ್ಶನ ಮುಗಿದ ಬಳಿಕ ಕೋರ್ಟ್ ಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿತ್ತಂತೆ, ಇದೀಗ ಅವರ ಪತ್ನಿ ಅವರಿಂದ ದೂರ ಉಳಿದಿದ್ದಾರಂತೆ.
ಆದರೆ ಸೋಮಣ್ಣ ಮಾತ್ರ ತಮ್ಮ ಪತ್ನಿ ನೆನಪಲ್ಲಿ ಕಾಯುತ್ತಿದ್ದಾರಂತೆ ಇಂದಿಗೂ ತಮ್ಮ ಪತ್ನಿಯನ್ನ ನೆನಪು ಮಾಡಿಕೊಳ್ಳುತ್ತಾ ಇದ್ದಾರಂತೆ, ಬಿಗ್ ಬಾಸ್ ಓಟಿಟಿಗೆ ಬರುತ್ತಿರುವಗಲು ಆಕೆಗೆ ಕಾಲ್ ಮಾಡಿ ವಿಷಯ ತಿಳಿಸಿದ್ದರಂತೆ ಚನ್ನಾಗಿ ಅಡಿ ಗೆದ್ದು ಬಾ ಎಂದು ವಿಶ್ ಕೂಡ ಮಾಡಿದ್ದರಂತೆ, ಒಟ್ಟಾರೆ ಸೋಮಣ್ಣ ಮನಸ್ಸಿನಲ್ಲಿ ಸಾಕಷ್ಟು ಪಶ್ಚಾತಾಪ ಕಾಡುತ್ತಿದ್ದು, ಮತ್ತೆ ಅವರ ಪತ್ನಿ ಹಾಗೂ ಅವರು ಬಿಗ್ ಬಾಸ್ ನಿಂದ ಹೊರಬಂದ ಮೇಲಾದರೂ ಒಂದಾಗುತ್ತಾರ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಅಷ್ಟೇ ಅಲ್ಲದೇ ಸೋಮಣ್ಣ ಇದೆ ಕಾರಣಕ್ಕೆ ಮನೆಯವರನ್ನು ಕೂಡ ದೂರ ಮಾಡಿಕೊಂಡಿದ್ದರಂತೆ, ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇಯಾದ ನೋವು ಇರುತ್ತದೆ ಕೆಲವರು ಅದನ್ನ ಹೇಳಿಕೊಳ್ಳುತ್ತಾರೆ ಆದರೆ ಇನ್ನು ಕೆಲವರು ತನ್ನ ಮನಸಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಆದರೆ ಈ ಬಾರಿಯ ಬಿಗ್ ಬಾಸ್ ಓಟಿಟಿ ಸೀಸನ್ 1 ಅನೇಕ ಕಾರಣದಿಂದ ಟಿಕೆಗೆ ಗುರಿಯಾಗಿತ್ತು. ಆದರೆ ನಾನು ಯಾರು ಎನ್ನುವ ಒಂದು ವೇದಿಕೆಯ ಮೂಲಕ ಅನೇಕ ಸ್ಪರ್ದಿಗಳ ಭಾವನಾತ್ಮಕ ಕ್ಷಣಗಳಿಗೆ ಕಾರಣವಾಯಿತು ಎನ್ನುವುದಕ್ಕೆ ಇದೇ ಸಾಕ್ಷಿ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.