ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅತ್ಯಂತ ಬಹು ಬೇಡಿಕೆಯಲ್ಲಿರುವ ನಟಿ ಎಂದರೆ ಅದು ಗುಳಿಕೆನ್ನೆಯ ರಚಿತರಾಮ್. ರಚಿತರಾಮ್ ರವರಿಗೆ ಈಗಾಗಲೇ ಹಲವಾರು ಸಿನಿಮಾಗಳ ಅವಕಾಶ ಬೆಂಬಿಡದೆ ಹುಡುಕಿಕೊಂಡು ಬರುತ್ತಿವೆ. ಕೆಲವು ಸಮಯಗಳ ಹಿಂದಷ್ಟೇ ತೆಲುಗು ಚಿತ್ರರಂಗಕ್ಕೆ ಕೂಡ ಹೋಗಿ ಬಂದಿದ್ದರು ಡಿಂಪಲ್ ಕ್ವೀನ್.
ಇಂದಿನ ವಿಚಾರದಲ್ಲಿ ನಾವು ಹೇಳುವುದಾದರೆ ಇತ್ತೀಚಿನ ದಿನಗಳಲ್ಲಿ ರಚಿತರಾಮ್ ರವರು ಲವ್ ಎನ್ನುವ ಹೆಸರನ್ನು ಹೊಂದಿರುವ ಸಿನಿಮಾಗಳಲ್ಲಿ ಸಾಕಷ್ಟು ಸತತವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಕುರಿತಂತೆ ರಚಿತರಾಮ್ ರವರ ಇತ್ತೀಚಿನ ದಿನಗಳಲ್ಲಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಹಾಗಿದ್ದರೆ ಅದೇನು ಎನ್ನುವುದನ್ನು ಹಾಗೂ ಇದಕ್ಕೆ ಕಾರಣವಾಗಿರುವುದು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಇತ್ತೀಚೆಗಷ್ಟೆ ರಚಿತರಾಮ್ ರವರು ಲವ್ ಯು ರಚ್ಚು ಐ ಲವ್ ಯು ಏಕ್ ಲವ್ ಯಾ ದಂತಹ ಸಿನಿಮಾಗಳಲ್ಲಿ ಸತತವಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಕೂಡ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಪ್ರೇಕ್ಷಕರು ರಚಿತರಾಮ್ ರವರು ಆ ತರಹದ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಅವರೊಬ್ಬ ಬೋಲ್ಡ್ ನಟಿ ಎಂಬುದಾಗಿ ಗುರುತಿಸಿದ್ದಾರೆ. ಇದು ರಚಿತಾರಾಮ್ ರವರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಅವರು ಇನ್ನು ಮುಂದೆ ಲವ್ ಎನ್ನುವ ಹೆಸರನ್ನು ಹೊಂದಿರುವ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬುದಾಗಿ ನಿರ್ಧಾರಕ್ಕೆ ಬಂದಿದ್ದಾರೆ.
ಈಗಾಗಲೇ ಲವ್ ಮಿ ಆರ್ ಹೇಟ್ ಮಿ ಎನ್ನುವ ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಚಿತ್ರದ ನಂತರ ಈ ತರಹದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದುವರೆಗೂ ನಾನು ನಿರ್ವಹಿಸಿದ ಪಾತ್ರದಲ್ಲಿ ಗೋಲ್ಡ್ ದೃಶ್ಯಗಳು ಇದ್ದರೆ ಅದಕ್ಕೊಂದು ಅರ್ಥ ಇರುತ್ತದೆ ಅದಕ್ಕಾಗಿ ನಾನು ನಟಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ರವರ ಹೇಳಿಕೆ ಹಾಗೂ ನಿರ್ಧಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಶೇರ್ ಮಾಡಿಕೊಳ್ಳಿ.
