ಸಮಂತಾ ಹಾಗು ನಾಗ ಚೈತನ್ಯ ವಿಚ್ಛೇದನಕ್ಕೆ ಸಾಲಿಂಗ ಕಾಮ ಕಾರಣನ..? ಅಸಲಿ ಸತ್ಯ ಬೇರೇನೇ ಇದೇ

Uncategorized

ಕಳೆದ ವರ್ಷ ಅತ್ಯಂತ ಹೆಚ್ಚಾಗಿ ಹಾಗೂ ದೊಡ್ಡ ಮಟ್ಟದಲ್ಲಿ ಸುದ್ದಿ ಆದಂತಹ ವಿಚಾರವೇನೆಂದರೆ ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ದಿ. ಇಬ್ಬರು ಕೂಡ ಹಲವಾರು ವರ್ಷಗಳ ಕಾಲ ಪ್ರೀತಿಸಿ ಎರಡು ಧರ್ಮಗಳ ಪ್ರಕಾರ ಅದ್ದೂರಿಯಾಗಿ ಮನೆಯವರ ಸಮ್ಮುಖದಲ್ಲಿ ಮದುವೆಯಾದವರು. ಆದರೆ ಅಚಾನಕ್ಕಾಗಿ ನಾಲ್ಕು ವರ್ಷಗಳ ಕಾಲದ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದು ಏಕೆ ಎನ್ನುವುದು ಎಲ್ಲರಿಗೂ ಕೂಡ ಯಕ್ಷಪ್ರಶ್ನೆಯಾಗಿದೆ.
ಯಾಕೆಂದರೆ ಇಡೀ ಚಿತ್ರರಂಗದಲ್ಲಿ ಎಲ್ಲರೂ ಕೂಡ ನಾಗಚೈತನ್ಯ ಹಾಗೂ ಸಮಂತಾ ರವರನ್ನು ಫೇವರಿಟ್ ಜೋಡಿ ಎಂಬುದಾಗಿ ಕರೆಯುತ್ತಿದ್ದರು. ಇದ್ದಕ್ಕಿದ್ದ ಹಾಗೆ ಈ ಫೇವರಿಟ್ ಜೋಡಿ ಮದುವೆ ಬಂಧನದಿಂದ ಸಂಬಂಧವನ್ನು ಕಳಿಸಿ ಕೊಂಡಿದ್ದೇನೆ ಎನ್ನುವುದೇ ಯಾರಿಗೂ ತಿಳಿಯದಂತಹ ಪ್ರಶ್ನೆಯಾಗಿದೆ. ಕೆಲವು ಮೂಲಗಳ ಪ್ರಕಾರ ಸಮಂತ ರವರು ನಿರ್ವಹಿಸುತ್ತಿದ್ದಂತಹ ಗ್ಲಾಮರಸ್ ಪಾತ್ರಗಳು ನಾಗಚೈತನ್ಯ ರವರ ಕೋಪಕ್ಕೆ ಕಾರಣವಾಗಿದ್ದು ಇದು ವಿವಾಹ ವಿಚ್ಛೇದನಕ್ಕೆ ಕೂಡ ದಾರಿಯಾಗಿತ್ತು ಎಂಬುದಾಗಿ ಹೇಳಲಾಗುತ್ತಿದೆ. ಇನ್ನು ಕೆಲವು ಮೂಲಗಳ ಪ್ರಕಾರ ನಟಿ ಸಮಂತಾ ರವರು ಅವರ ಕಾಸ್ಟ್ಯೂಮ್ ಹಾಗೂ ಮೇಕಪ್ ಡಿಸೈನರ್ ಜೊತೆ ಇರುವಂತಹ ಸಂಬಂಧವೇ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಹೌದು ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜೊತೆ ಸಮಂತಾ ರವರು ಸಂಬಂಧವನ್ನು ಹೊಂದಿದ್ದಾರೆ ಎಂಬುದಾಗಿ ಕೆಲವು ಮೂಲಗಳು ಹೇಳುತ್ತಿವೆ. ಆದರೆ ಪ್ರೀತಂ ಹಾಗೂ ಇನ್ನೂ ಕೆಲವರು ಅವರನ್ನು ಬಲ್ಲವರು ಹೇಳುವಂತೆ ಪ್ರೀತಮ್ ಒಬ್ಬ ಸಲಿಂಗಿ ಆಗಿದ್ದಾನೆ. ಈಗಾಗಲೇ ಆತನಿಗೆ ಗೆಳೆಯ ಕೂಡ ಇದ್ದಾನೆ ಆತ ಹೇಗೆ ಸಮಂತ ಅವರೊಂದಿಗೆ ಸಂಬಂಧ ಹೊಂದಲು ಸಾಧ್ಯ ಎಂಬುದಾಗಿ ಎಲ್ಲರೂ ಹೇಳುತ್ತಿದ್ದಾರೆ.
ಈ ಮಾತನ್ನು ಪುಷ್ಟೀಕರಿಸುವಂತೆ ತೆಲುಗು ಚಿತ್ರರಂಗದ ವಿವಾದಾತ್ಮಕ ನಟಿಯಾಗಿರುವ ಶ್ರೀ ರೆಡ್ಡಿ ರವರು ಕೂಡ ಇದನ್ನೇ ಹೇಳುತ್ತಾರೆ. ಇಷ್ಟು ಮಾತ್ರವಲ್ಲದೆ ಇಬ್ಬರು ದಂಪತಿಗಳು ಎಲ್ಲವನ್ನೂ ಮರೆತು ಒಂದಾಗಿ ಎಂಬ ನಿವೇದನೆಯನ್ನು ಕೂಡ ಇಟ್ಟಿದ್ದಾರೆ. ಇವರಿಬ್ಬರ ವಿವಾಹ ವಿಚ್ಛೇದನಕ್ಕೆ ನಿಜವಾದ ಕಾರಣ ಎನ್ನುವುದು ಇನ್ನೂ ಕೂಡ ರಹಸ್ಯವಾಗಿ ಉಳಿದುಕೊಂಡಿದ್ದು ಈ ವಿಚಾರದ ಕುರಿತಂತೆ ಆಗಾಗ ಗಾಳಿಸುದ್ದಿಗಳು ಹೊರಬರುತ್ತಲೇ ಇವೆ. ಸದ್ಯಕ್ಕೆ ಇಬ್ಬರು ಕೂಡ ತಮ್ಮ ಸಿನಿಮಾಗಳಲ್ಲಿ ನಿರತರಾಗಿದ್ದಾರೆ.


Leave a Reply

Your email address will not be published. Required fields are marked *