ಸರಿಗಮಪ ಖ್ಯಾತಿಯ ಹನುಮಂತ ಮದುವೆಯಾಗುತ್ತಿರುವ ಟಾಪ್ ಆಂಕರ್ ಯಾರು ಗೊತ್ತಾ..!? ಈ‌ ಜೋಡಿ ಹೇಗಿದೆ ಗೊತ್ತಾ

ಸುದ್ದಿ

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಎನ್ನುವುದು ಹಲವಾರು ಪ್ರತಿಭೆಗಳಿಗೆ ಸಮಾಜದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿ ಮಿಂಚುವಂತಹ ಅವಕಾಶವನ್ನು ನೀಡಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಸೋಶಿಯಲ್ ಮೀಡಿಯಾ ಅನ್ನು ಬಳಸಿಕೊಂಡು ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಅವಕಾಶವನ್ನು ಸಂಪಾದಿಸಿರುವ ಹಲವಾರು ಪ್ರತಿಭೆಗಳು ಈಗಲೂ ಕೂಡ ನಮ್ಮ ಕಣ್ಣ ಮುಂದೆ ಇದ್ದಾರೆ.

ಕೆಲವು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಜನಪ್ರಿಯರಾಗಿ ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆಯಾದ ಹನುಮಂತ ಅವರ ಕುರಿತಂತೆ ನಿಮಗೆಲ್ಲ ಗೊತ್ತೇ ಇದೆ. ಹಾವೇರಿ ಜಿಲ್ಲೆಯಲ್ಲಿ ಕುರಿ ಕಾಯ್ಕೊಂಡು ಇದ್ದಂತಹ ಹನುಮಂತ ರವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಡು ಹಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ದೊಡ್ಡಮಟ್ಟದಲ್ಲಿ ವೈ’ರಲ್ ಆಗಿ ಸೋಶಿಯಲ್ ಮೀಡಿಯಾ ಸೆನ್ಸೇಷನಲ್ ಆಗಿದ್ದರು. ಪ್ರತಿಯೊಬ್ಬರು ಕೂಡ ಹನುಮಂತ ರವರಿಗೆ ಹಾಗೂ ಅವರಿಗೆ ಇರುವಂತಹ ಹಾಡುಗಾರಿಕೆಯ ಪ್ರತಿಭೆಯನ್ನು ಗುರುತಿಸಿ ವಾಹಿನಿಗಳು ಅವರಿಗೆ ತಮ್ಮ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಅವಕಾಶ ನೀಡಬೇಕು ಎನ್ನುವ ದೊಡ್ಡ ಮಟ್ಟದ ಅಭಿಯಾನ ಆರಂಭವಾಗಿತ್ತು. ಪ್ರೇಕ್ಷಕರ ಈ ಕೋರಿಕೆಯನ್ನು ಆಲಿಸಿದ ಜೀ ಕನ್ನಡ ವಾಹಿನಿ ಸರಿಗಮಪ ವಾಹಿನಿಯಲ್ಲಿ ಹಾಡುವ ಅವಕಾಶವನ್ನು ಹನುಮಂತ ಅವರಿಗೆ ನೀಡಿತು. ಅಲ್ಲಿಂದ ಮತ್ತೆ ಹನುಮಂತ ಹಿಂದಿರುಗಿ ನೋಡಿದ್ದೇ ಇಲ್ಲ. ಸರಿಗಮಪ ವಾಹಿನಿಯ ನಂತರ ಹಲವಾರು ಸಮಯಗಳ ಕಾಲ ಸುದ್ದಿ ಇಲ್ಲದೆ ಮೌನವಾಗಿದ್ದರು.

ನಂತರ ಮತ್ತೆ ಪ್ರಾರಂಭವಾದ ಸರಿಗಮಪ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಈಗಾಗಲೇ ಮೂರು ಸಿನಿಮಾ ಗಳಿಗಾಗಿ ಹನುಮಂತ ರವರು ಹಾಡನ್ನು ಕೂಡ ಹಾಡಿದ್ದಾರೆ. ಈ ಹಾಡುಗಳು ಇನ್ನು ಬಿಡುಗಡೆ ಆಗಬೇಕಾಗಿದೆ ಅಷ್ಟೇ. ಒಟ್ಟಾರೆಯಾಗಿ ತನ್ನ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಇತ್ತೀಚಿನ ದಿನಗಳಲ್ಲಿ ಹನುಮಂತ ರವರ ಮದುವೆ ವಿಚಾರ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹನುಮಂತ ಹಾವೇರಿ ಮೂಲದವರು. ಅವರ ಲಂಬಾಣಿ ಜನಾಂಗದಲ್ಲಿ 21 ವರ್ಷದ ಒಳಗೆ ಹುಡುಗರು ಮದುವೆಯಾಗಬೇಕು ಎನ್ನುವ ನಿಯಮವಿದೆ. ಹೀಗಾಗಿ ಹನುಮಂತ ರವರ ತಂದೆ-ತಾಯಿ ಅದೇ ಊರಿನ ಹುಡುಗಿಯನ್ನು ಹನುಮಂತ ರವರಿಗಾಗಿ ಆಯ್ಕೆ ಮಾಡಿದ್ದು ಅತಿಶೀಘ್ರದಲ್ಲೇ ಮದುವೆಯಾಗಲು ಕೂಡ ನಿಶ್ಚಯಿಸಿದ್ದಾರೆ. ಹನುಮಂತ ಅವರ ಮದುವೆ ಕುರಿತಂತೆ ಹಲವಾರು ಗಾಳಿಸುದ್ದಿಗಳು ಕೂಡ ಹರಡಿದ್ದವು. ಕೊನೆಗೂ ಕೂಡ ಅವರು ಮದುವೆಯಾಗುತ್ತಿರುವುದು ಅವರ ಊರಿನವರನ್ನು ಎನ್ನುವುದು ಈಗ ಸ್ಪಷ್ಟವಾಗಿದೆ. ಕಾಮೆಂಟ್ ಬಾಕ್ಸ್ನಲ್ಲಿ ಹನುಮಂತ ಅವರಿಗೆ ಶುಭಾಶಯಗಳನ್ನು ಕೋರುವ ಮೂಲಕ ನೀವು ಶುಭ ಹಾರೈಸಿ ಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *