ಸಲಗ ಖ್ಯಾತಿಯ ದುನಿಯಾ ವಿಜಯ್ ಅವರ ಭವ್ಯ ಬಂಗಾಲೆ ಮನೆ ಹೇಗಿದೆ ಒಮ್ಮೆ ನೋಡಿ.

ಸುದ್ದಿ

ನಮಸ್ತೆ ಓದುಗರೇ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತು ಬಂದು ಕಷ್ಟಗಳ ಮುಳ್ಳಿನ ಹಾದಿಯನ್ನು ತುಳಿದು ಯಾವ ಗಾಡ್ ಫಾದರ್ ಇಲ್ಲದೆ, ಯಾರ ಸಪೋರ್ಟ್ ಇಲ್ಲದೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ. ತಮ್ಮ ಸ್ವಂತ ಪ್ರತಿಭೆಯಿಂದ ಇಂದು ಸ್ಟಾರ್ ನಟನಾಗಿ ಬಾನೆತ್ತರಕ್ಕೆ ಬೆಳೆದು ನಿಂತಿರುವ ನಟ ದುನಿಯಾ ವಿಜಯ್.
2006ರಲ್ಲಿ ತೆರೆಕಂಡ ದುನಿಯಾ ಸಿನಿಮಾ ಮೂಲಕ ನಾಯಕನಟರಾದ ದುನಿಯಾ ವಿಜಯ್ ಅದಕ್ಕೂ ಮೊದಲು ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪತ್ರಗಳನ್ನು ಮಾಡಿದ್ದರು. ರೌಡಿಸಂ, ಲವ್ ಸ್ಟೋರಿ, ಸೆಂಟಿಮೆಂಟ್ ಕಥೆ ಹೊಂದಿದ್ದ ದುನಿಯಾ ವಿಜಯ್ ಅಭಿನಯದ ಚಿತ್ರಗಳು ಸ್ಯಾಂಡಲ್ವುಡ್ ನಲ್ಲಿ ಸೂಪರ್ ಹಿಟ್ ಆದ ನಂತರ ವಿಜಯ್ ಅವರು ಚಂದನ ವನಕ್ಕೆ ನಾಯಕನಾಗಿ ಮಿಂಚಿದರು.

ದುನಿಯಾ ವಿಜಯ್ ಅವರನ್ನು ಸ್ಯಾಂಡಲ್ವುಡ್ ನ ಕರಿಚಿರತೆ ಎಂದೇ ಕರೆಯುತ್ತಾರೆ. ದುನಿಯಾ ವಿಜಯ್ ಅವರ ಜೊತೆ ಇರುವ ದುನಿಯಾ ಎನ್ನುವ ಹೆಸರು, ಅದು ಅವರ ಮನೆತನದ ಹೆಸರೇನೋ ಎನ್ನುವ ಮಟ್ಟಿಗೆ ಅವರ ಹೆಸರಿನ ಜೊತೆ ಬೆರೆತುಹೋಗಿದೆ. ದುನಿಯಾ ವಿಜಯ್ ಅವರ ಜೀವನ ಅಷ್ಟು ಸುಲಭವಾಗಿರಲಿಲ್ಲ ದುನಿಯಾ ಸಿನಿಮಾ ಯಶಸ್ಸುಗಿಂತಲೂ ಹಿಂದಿನ ದಿನಗಳು ಸುಲಭವಾಗಿ ಇರಲಿಲ್ಲ. ಅವರು ಇಷ್ಟು ದೊಡ್ಡ ಮಟ್ಟಿಗೆ ಬೆಳೆಯಲಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ.

ಕಷ್ಟದಲ್ಲಿ ಜೀವನ ನಡೆಸಿದ ಕಷ್ಟದಲ್ಲಿ ಬೆಳೆದುಬಂದ ದುನಿಯಾ ವಿಜಯ್ ಅವರ ಈಗಿನ ಮನೆ ಹೇಗಿದೆ ಗೊತ್ತಾ? ಅವರ ಸುಂದರ ಮನೆಯನ್ನು ನೋಡಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ

ನಮ್ಮ ದುನಿಯಾ ವಿಜಯ್ ಅವರ ತಂದೆ ತಾಯಿ ಇಟ್ಟ ಹೆಸರು ಬಿ.ಆರ್. ವಿಜಯ್ ಕುಮಾರ್. ದುನಿಯಾ ವಿಜಯ್ ಅವರಿಗೆ ಅಪ್ಪ ಎಂದರೆ ಬಹಳ ಭಯ, ವಿಜಯ್ ಅವರಿಗೆ ಸಿನೆಮಾ ಅಂದ್ರೆ ಚಿಕ್ಕವರಿದ್ದಾಗಿಂದನು ತುಂಬಾ ಇಷ್ಟ ಅವರು ಅಪ್ಪನ ಕಣ್ಣು ತಪ್ಪಿಸಿ ಶಾಲೆ ಬಂಕ್ ಮಾಡಿ ಸಿನಿಮಾ ನೀಡುತ್ತಿದ್ದಾರಂತೆ. ಸಿನಿಮಾಲೋಕದಲ್ಲಿ ಬಗ್ಗೆ ಆಸಕ್ತಿ ಮೂಡಿಸಿಕೊಂಡ ವಿಜಯ್ ಅವರು ಬಾಡಿ ಬಿಲ್ಡಿಂಗ್ ಮಾಡಿ.

ಫೈಟ್ ಮಾಸ್ಟರ್ ಅಸಿಸ್ಟೆಂಟ್ ಆಗಿ ಮೊದಲು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ದುನಿಯಾ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ ಈಗ ಅಭಿನಯ ಹಾಗೂ ನಿರ್ದೇಶನದ ಮೂಲಕ ದುನಿಯಾವನ್ನೇ ಆಳುತ್ತಿದ್ದಾರೆ.

ದುನಿಯಾ ವಿಜಯ್ ಅವರ ಈಗಿನ ಮನೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿದೆ. ಅದೇ ಮನೆಯಲ್ಲಿ ದುನಿಯಾ ವಿಜಯ್ ಅವರ ಕುಟುಂಬ ವಾಸ ಮಾಡುತ್ತಿದ್ದಾರೆ. ತಮ್ಮ ಕೌಟುಂಬಿಕ ವಿಷಯದಲ್ಲಿ ಸಮಸ್ಸೆಗಳನ್ನು ಎದುರಿಸಿದ್ದ ಅವರು ಈಗ ಯಾಲ್ಲ ಸಮಸ್ಸೆಗಳನ್ನು ಸರಿಪಡಿಸಿಕೊಂಡು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ದುನಿಯಾ ವಿಜಯ್ ಅವರನ್ನು ನೋಡಲು ತುಂಬಾ ಒರಟು ಏನಿಸಬಹುದು ಆದರೆ ಅವರ ಮನಸ್ಸು ಬೆಣ್ಣೆಯಂತೆ ಮೃದು.

ಅವರ ಬಳಿ ಕಷ್ಟ ಅಂತ ಯಾರೇ ಬಂದರು ಅವರಿಗೆ ಸಹಾಯ ಮಾಡ್ತಾರೆ. ಅದೆಷ್ಟೋ ಸಲ ಬೇರೆಯವರ ಕಷ್ಟಕ್ಕೆ ಸ್ವತಃ ದುನಿಯಾ ವಿಜಯ್ ಅವರೇ ಸಹಾಯ ಮಾಡಿದ್ದಾರೆ. ದುನಿಯಾ ವಿಜಯ್ ಅವರು ಬರೇ ನಾಯಕ ಅಲ್ಲ ಎಂಬುದನ್ನು ಸಲಗ ಚಿತ್ರವನ್ನು ನಿರ್ದೇಶನ ಮಾಡಿ ತನೊಬ್ಬ ಅದ್ಭುತ ನಿರ್ದೇಶಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ನಿರ್ದೇಶನದ ಸಲಗ ಕೂಡ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿತು ಒಳ್ಳೇ ಕಲೆಕ್ಷನ್ ಕೂಡ ಮಾಡಿತು. ನಮ್ಮ ಚಂದನವನಕ್ಕೆ ಮತ್ತೊಬ್ಬ ಒಳ್ಳೆಯ ನಿರ್ದೇಶಕ ಕೂಡ ಹುಟ್ಟಿಕೊಂಡರು. ಮುಂದೆ ಏನೇ ಕಷ್ಟ ಬಂದರು ಜಗ್ಗದೆ ಮುಂದೆ ಸಾಗುತ್ತಿರುವ ಸಲಗನಿಗೆ ಅವರ ಧೈರ್ಯ ಹಾಗೂ ಅವರ ಕೆಲಸ ಈಗಿನ ಯುವಕರಿಗೆ ಸ್ಫೂರ್ತಿಯಾಗಿದೆ.
ಹಾಗೇ ದುನಿಯಾ ವಿಜಯ್ ಅವರು ಇನ್ನೊಂದು ಚಿತ್ರವನ್ನು ಕೂಡ ನಿರ್ದೇಶನ ಮಾಡುತ್ತಿದ್ದಾರೆ ಈಗಾಗಕೆ ಅದರ ಫಸ್ಟ್ ಲುಕ್ ಪೋಸ್ಟರ್ ನಿಂದ ಸಾಕಷ್ಟು ಸದ್ಧು ಮಾಡಿದೆ ಸಲಗನಿಂದ ಭೀಮ ನಗಲು ಹೊರಟಿದ್ದಾರೆ ವಿಜಯ್ ಒಳ್ಳೇದಾಗ್ಲಿ. ಇದೇ ತರ ನಮ್ಮ ಕನ್ನಡ ಚಿತ್ರರಂಗಗಳಿಗೆ ಒಳ್ಳೇ ಚಿತ್ರಗಳನ್ನು ಮಾಡಿ ಹೊಸಬರಿಗೆ ಅವಕಾಶಗಳನ್ನು ಕೊಡಿ ಎಂದು ಕೋರುತ್ತೇವೆ. ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.


Leave a Reply

Your email address will not be published. Required fields are marked *